Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ : ಲೂ ವಿನ್ಸೆಂಟ್ ಗೆ ಆಜೀವ ನಿಷೇಧ

ICC supports life bans on Lou Vincent
ವೆಲ್ಲಿಂಗ್ಟನ್, ಜು.1: ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ನ್ಯೂಜಿಲೆಂಡ್ ನ ಮಾಜಿ ಕ್ರಿಕೆಟರ್ ಲೂ ವಿನ್ಸೆಂಟ್ 'ನನ್ನ ಹೆಸರು ಲೂ ವಿನ್ಸೆಂಟ್ ನಾನು ವಂಚಕ' ಎಂದಿದ್ದಾರೆ. ಇಂಗ್ಲೆಂಡ್ ಕೌಂಟಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಹೊತ್ತ ವಿನ್ಸೆಂಟ್ ಗೆ ಆಜೀವ ನಿಷೇಧ ಹೇರಲಾಗಿದೆ.

ಲಂಕಾಷೈರ್ ಹಾಗೂ ಸಸೆಕ್ಸ್ ಕೌಂಟಿ ಕ್ಲಬ್ ಪರ ಆಡುತ್ತಿದ್ದ ಲೂ ವಿನ್ಸೆಂಟ್ ಮೇಲೆ 14ಕ್ಕೂ ಅಧಿಕ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್(ಇಸಿಬಿ)ಈ ಕ್ರಮ ಕೈಗೊಂಡಿದೆ. ಇಸಿಬಿ ಕೈಗೊಂಡಿರುವ ಕ್ರಮಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ಅನುಮೋದನೆ ನೀಡಿದೆ.

35 ವರ್ಷ ವಯಸ್ಸಿನ ಲೂ ವಿನ್ಸೆಂಟ್ ಅವರ ವಿರುದ್ಧ 2012ರಲ್ಲಿ ಆಕ್ಲೆಂಡ್ ಏಸಸ್ ಪರ ಆಡುವಾಗ ಎರಡು ಸಿಎಲ್ ಟಿ20 ಪಂದ್ಯಗಳನ್ನು ಫಿಕ್ಸ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಸಿಬಿ ಹಾಗೂ ಸಿಎಲ್ ಟಿ20 ನಿರ್ವಹಣಾ ಸಮಿತಿ ಲೂ ವಿನ್ಸೆಂಟ್ ವಿರುದ್ಧ ಕ್ರಮ ಕೈಗೊಂಡಿದೆ. ಇಸಿಬಿ, ಸಿಎಲ್ ಟಿ20 ಸಮಿತಿ ಕ್ರಮವನ್ನು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಗಳು ಸ್ವಾಗತಿಸಿವೆ.

ಎಬಿಸಿ ನ್ಯೂಸ್ ರೇಡಿಯೋ ಕ್ರೀಡಾ ಉದ್ಘೋಷಕ ಮೈಕ್ ವಿನ್ಸೆಂಟ್ ಅವರ ಮಗನಾದ ಲೂ ವಿನ್ಸೆಂಟ್ ಅವರು ನ್ಯೂಜಿಲೆಂಡ್ ನ ದೇಶಿ ಕ್ರಿಕೆಟ್ ನಲ್ಲಿ 1997ರಿಂದ ಸಕ್ರಿಯರಾಗಿದ್ದರು. ನ್ಯೂಜಿಲೆಂಡ್ ತಂಡದ ಪರ ಆಡಿದ್ದಲ್ಲದೆ ಲಂಕಾಷೈರ್, ವೊರ್ಸೆಸ್ಟರ್ ಷೈರ್, ಸಫೊಲ್ಕ್, ನಾಥಾಂಪ್ಟನ್ ಷೈರ್, ಸಸೆಕ್ಸ್, ಖುಲ್ನಾ
ರಾಯಲ್ ಬೆಂಗಾಲ್ಸ್ ಮುಂತಾದ ಕ್ಲಬ್ ಗಳ ಪರ ಆಡಿದ್ದಾರೆ. 2008ರಲ್ಲಿ ಐಸಿಎಲ್ ವಿಶ್ವ XI ತಂಡದ ಸದಸ್ಯರಾಗಿ ಆಯ್ಕೆಯಾಗಿದ್ದು ದೊಡ್ಡ ಸಾಧನೆ.

ನ್ಯೂಜಿಲೆಂಡ್ ಕ್ರಿಕೆಟರ್ ಲೂ ವಿನ್ಸೆಂಟ್ ಅವರು 2001 ರಿಂದ 2007 ರ ತನಕ 23 ಟೆಸ್ಟ್, 102 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 9 ಟ್ವೆಂಟಿ 20ಪಂದ್ಯಗಳನ್ನಾಡಿದ್ದಾರೆ. ಲೂ ವಿನ್ಸೆಂಟ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಪೂರ್ಣ ಪಾಠ ಇಲ್ಲಿದೆ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+