ಕ್ರಿಕೆಟ್: ಭಾರತ- ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ
ಮೆಲ್ಬೋರ್ನ್, ಜೂ.23: ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯ ಹಾಗೂ ತ್ರಿಕೋನ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇಂಡೋ-ಆಸೀಸ್ ಸರಣಿ ವೇಳಾಪಟ್ಟಿ ಸೋಮವಾರ ಪ್ರಕಟಗೊಂಡಿದೆ.
ನ.24ರಂದು ಎರಡು ದಿನಗಳ ಪಂದ್ಯವಾಡುವ ಮೂಲಕ ಭಾರತ ತನ್ನ ಪ್ರವಾಸವನ್ನು ಆರಂಭಿಸಲಿದೆ. ಮೊದಲ ಟೆಸ್ಟ್ ಪಂದ್ಯ ಬ್ರಿಸ್ಬೇನ್ ನಲ್ಲಿ ಡಿ.4 ರಂದು ನಡೆಯಲಿದೆ. ನಾಲ್ಕು ಟೆಸ್ಟ್ ಪಂದ್ಯಗಳ ನಂತರ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಭಾರತ ತ್ರಿಕೋನ ಏಕದಿನ ಸರಣಿ ಆಡಲಿದೆ. ಜ.16 ರಿಂದ ಫೆ.1 ರ ತನಕ ಏಕದಿನ ಪಂದ್ಯಗಳು ನಡೆಯಲಿವೆ.
2015ರ ವಿಶ್ವಕಪ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆಯಲಿದ್ದು, ಮುಂಬರುವ ವಿಶ್ವಕಪ್ ಗೆ ಈ ಸರಣಿ ಅಭ್ಯಾಸ ಪಂದ್ಯ ಎನ್ನಬಹುದಾಗಿದೆ. ಈ ಹಿಂದಿನ ಪ್ರವಾಸದಲ್ಲಿ(2011-2012) ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 0-4 ರ ಅಂತರದ ಸೋಲು ಕಂಡಿತ್ತು.

ಭಾರತದ ಆಸ್ಟ್ರೇಲಿಯಾದ ವೇಳಾಪಟ್ಟಿ:
* ನವೆಂಬರ್ 24-25 : ಎರಡು ದಿನಗಳ ಪಂದ್ಯ, ಗ್ಲೆನೆಲ್ಗ್(ಎದುರಾಳಿ ಇನ್ನೂ ನಿರ್ಧಾರವಾಗಿಲ್ಲ)
* ನವೆಂಬರ್ 28-29 : ಎರಡು ದಿನಗಳ ಪಂದ್ಯ, ಅಡಿಲೇಡ್ (ಎದುರಾಳಿ ಇನ್ನೂ ನಿರ್ಧಾರವಾಗಿಲ್ಲ)
* ಡಿಸೆಂಬರ್ 4 ರಿಂದ 8 : ಮೊದಲ ಟೆಸ್ಟ್, ಬ್ರಿಸ್ಬೇನ್.
* ಡಿಸೆಂಬರ್ 12 ರಿಂದ 16: ಎರಡನೇ ಟೆಸ್ಟ್, ಅಡಿಲೇಡ್
* ಡಿಸೆಂಬರ್ 26 ರಿಂದ 30 : ಮೂರನೇ ಟೆಸ್ಟ್, ಮೆಲ್ಬೋರ್ನ್
* ಜನವರಿ 3 ರಿಂದ 7 : ನಾಲ್ಕನೇ ಟೆಸ್ಟ್, ಸಿಡ್ನಿ
ತ್ರಿಕೋನ ಏಕದಿನ ಸರಣಿ: ಜನವರಿ 16 ರಿಂದ ಫೆಬ್ರವರಿ 1 (ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್)
ಜನವರಿ 12 : ಅಭ್ಯಾಸ ಪಂದ್ಯ ಭಾರತ vs ಇಂಗ್ಲೆಂಡ್, ಡ್ರಮೊಯ್ನೆ
* ಜನವರಿ 16 : ಭಾರತ vs ಆಸ್ಟ್ರೇಲಿಯಾ, ಮೆಲ್ಬೋರ್ನ್
* ಜನವರಿ 18 : ಆಸ್ಟ್ರೇಲಿಯಾ vs ಇಂಗ್ಲೆಂಡ್, ಸಿಡ್ನಿ
* ಜನವರಿ 20 : ಭಾರತ vs ಇಂಗ್ಲೆಂಡ್, ಬ್ರಿಸ್ಬೇನ್.
* ಜನವರಿ 23 : ಆಸ್ಟ್ರೇಲಿಯಾ vs ಇಂಗ್ಲೆಂಡ್, ಹೋಬಾರ್ಟ್
* ಜನವರಿ 26 : ಭಾರತ vs ಆಸ್ಟ್ರೇಲಿಯಾ, ಸಿಡ್ನಿ.
* ಜನವರಿ 30 : ಭಾರತ vs ಇಂಗ್ಲೆಂಡ್, ಪರ್ತ್.
* ಫೆಬ್ರವರಿ 1 ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications