T20 World Cup 2024: ಅತಿಹೆಚ್ಚು ರನ್, ವಿಕೆಟ್ ಪಡೆಯುವ ಆಟಗಾರರು ಯಾರು?; ದಿಗ್ಗಜ ಕ್ರಿಕೆಟಿಗ ಭವಿಷ್ಯ!
ಮೇ 30 ಗುರುವಾರ, ಈಗಾಗಲೇ 2024ರ ಐಸಿಸಿ ಟಿ20 ವಿಶ್ವಕಪ್ ರಂಗು ಪ್ರಪಂಚದಾದ್ಯಂತ ಹರಡಿದೆ. ಸೂಪರ್-4 ತಲುಪುವ ತಮ್ಮ ನೆಚ್ಚಿನ 4 ತಂಡಗಳ ಬಗ್ಗೆ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ. ಕೆಲವೊಬ್ಬರು ಟಿ20 ವಿಶ್ವಕಪ್ ಗೆಲ್ಲಬಹುದಾದ ತಂಡವನ್ನು ತಿಳಿಸಿದ್ದಾರೆ.
ಇದೇ ವೇಳೆ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ವೇಗದ ಬೌಲರ್ ಇಯಾನ್ ಬಿಷಪ್ ಇಂತಹದೊಂದು ಭವಿಷ್ಯ ನುಡಿದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಬ್ಯಾಟರ್ 2024ರ ಟಿ 20 ವಿಶ್ವಕಪ್‌ನಲ್ಲಿ ಅಗ್ರ ರನ್ ಸ್ಕೋರರ್ ಆಗುತ್ತಾರೆ.

ಜೊತೆಗೆ ಭಾರತ ತಂಡದ ಬೌಲರ್ ಅತಿಹೆಚ್ಚು ವಿಕೆಟ್ ಪಡೆಯುತ್ತಾರೆ ಇಯಾನ್ ಬಿಷಪ್ ಹೇಳಿದ್ದಾರೆ. ಇದಲ್ಲದೇ ಸೂಪರ್ -4 ತಂಡಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.
ಇಯಾನ್ ಬಿಷಪ್ ಇಎಸ್‌ಪಿಎನ್ ಕ್ರಿಕ್‌ಇನ್‌ಫೋದಲ್ಲಿ ಮಾತನಾಡುತ್ತಾ, ಟಿ20 ವಿಶ್ವಕಪ್ 2024ರಲ್ಲಿ ಅತಿಹೆಚ್ಚು ರನ್, ವಿಕೆಟ್ ಪಡೆಯುವ ಆಟಗಾರರ ಬಗ್ಗೆ ಹಾಗು ಸೂಪರ್-4 ತಂಡಗಳ ಭವಿಷ್ಯ ಹೇಳಿದ್ದಾರೆ. ಸೂಪರ್-4 ರಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿವೆ.
2022ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದವು. ಆದರೆ ಬಿಷಪ್ ಪ್ರಕಾರ, ಈ ಬಾರಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನವು ಹೊರಗುಳಿಯಲಿದೆ.

ಯಾರು ಹೆಚ್ಚು ರನ್ ಗಳಿಸುತ್ತಾರೆ?
ಟಿ20 ವಿಶ್ವಕಪ್‌ನಲ್ಲಿ ಫಾರ್ಮ್‌ನಲ್ಲಿರುವ ಅನೇಕ ಬ್ಯಾಟರ್‌ಗಳಿದ್ದಾರೆ. ಅನೇಕ ಬ್ಯಾಟರ್ ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಭಾರತ ತಂಡದ ಸ್ಟಾರ್ ಬ್ಯಾಟರ್ ಐಪಿಎಲ್ ಅತಿಹೆಚ್ಚು ರನ್ ಹೊಡೆದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆದರೂ ಕೊಹ್ಲಿ ಹೆಸರನ್ನು ಇಯಾನ್ ಬಿಷಪ್ ಅವರು ತೆಗೆದುಕೊಂಡಿಲ್ಲ.
ಇಂಗ್ಲೆಂಡ್ ತಂಡದ ನಾಯಕ ಹಾಗು ಸ್ಪೋಟಕ ಬ್ಯಾಟರ್ ಜೋಸ್ ಬಟ್ಲರ್ ಟಾಪ್ ರನ್ ಸ್ಕೋರರ್ ಆಗಲಿದ್ದಾರೆ ಎಂದು ಇಯಾನ್ ಬಿಷಪ್ ತಿಳಿಸಿದ್ದಾರೆ. ಬಟ್ಲರ್ ಐಪಿಎಲ್ 2024ರಲ್ಲಿ 11 ಪಂದ್ಯಗಳಲ್ಲಿ ಕೇವಲ 1 ಶತಕ ಗಳಿಸಿದ್ದಾರೆ.

ಇದರ ಹೊರತಾಗಿ ಬಟ್ಲರ್ ಅವರಿಂದ ಯಾವುದೇ ಹೇಳಿಕೊಳ್ಳುವಂತ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ 2024ರ ಟಿ20 ವಿಶ್ವಕಪ್‌ನಲ್ಲಿ ಬಟ್ಲರ್ ಫಾರ್ಮ್ ಕಂಡುಕೊಳ್ಳತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಅತಿಹೆಚ್ಚು ವಿಕೆಟ್ ಪಡೆಯುವ ಭಾರತದ ಬೌಲರ್
ಇಯಾನ್ ಬಿಷಪ್ ಅವರು ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಅಗ್ರ ವಿಕೆಟ್ ಟೇಕರ್ ಎಂದು ಹೆಸರಿಸಿದ್ದಾರೆ. ಕುಲದೀಪ್ ಯಾದವ್ ಐಪಿಎಲ್ 2024ರಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾರೆ.
ಪರಿಣಾಮ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಕುಲದೀಪ್ ಯಾದವ್ ಯಶಸ್ವಿಯಾಗಿದ್ದಾರೆ. ಕುಲದೀಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನ ಪಿಚ್‌ಗಳಲ್ಲಿಯೂ ಶ್ರೇಷ್ಠ ಬ್ಯಾಟರ್‌ಗಳನ್ನು ಕಟ್ಟಿ ಹಾಕುವ ಮೂಲಕ ದಾಖಲೆ ಸೃಷ್ಟಿಸಲು ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications