For Quick Alerts
ALLOW NOTIFICATIONS  
For Daily Alerts
 

Roger Binny : ಭಾರತ ಪ್ರತಿನಿಧಿಸಿದ ಮೊದಲ ಆಂಗ್ಲೋ-ಇಂಡಿಯನ್ ಆಟಗಾರ

ರೈಲ್ವೆಯಲ್ಲಿ ಗಾರ್ಡ್ ಕೆಲಸ ಮಾಡುತ್ತಿದ್ದ ಒಬ್ಬ ನೌಕರನ ಮಗ ಭಾರತದ ಮೊದಲ ಬಾರಿಗೆ ವಿಶ್ವಕಪ್ ವಿಜೇತ ತಂಡದ ಸದಸ್ಯ. ಕೇಂದ್ರ ಸರ್ಕಾರದ ನೌಕರಿಯಲ್ಲಿ ತಂದೆ ಇದ್ದ ಕಾರಣ ಪದೆ ಪದೇ ಬೇರೆ ಸ್ಥಳಗಳಿಗೆ ವರ್ಗಾವಣೆ ಆಗುತ್ತಿತ್ತು. ಇದರ ಪರಿಣಾಮ ಮಗನ ಓದಿನ ಮೇಲೆ ಬೀಳಬಾರದೆಂದು ತಂದೆ ಮಗುವನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿದರು. ಶಾಲೆಯಲ್ಲಿ ಬಾಲಕನ ಪಾಠದ ಜೊತೆಗೆ ಆಟದಲ್ಲೂ ಚುರುಕಾಗಿದ್ದ. ಲಾಂಗ್ ಜಂಪ್, ಹೈ ಜಂಪ್, ಶಾರ್ಟ್ ಪುಟ್, ಜಾವೇಲಿನ್ ಕ್ರೀಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೋಜರ್ ಬಿನ್ನಿ, ಹಾಕಿ ಫುಟ್ಬಾಲ್ ಅಂಗಳದಲ್ಲಿ ಬೆವರು ಹರಿಸುತ್ತಿದ್ದರು.

ರೋಜರ್ ಬಿನ್ನಿ ಅವರ ಪೂರ್ಣ ಹೆಸರು ರೋಜರ್ ಮೈಕೆಲ್ ಹಂಫ್ರಿ ಬಿನ್ನಿ.

ರೋಜರ್ ಬಿನ್ನಿಯವರ ವಂಶಸ್ಥರು ಸ್ಕಾಟ್ಲೆಂಡ್ನಿಂದ ಭಾರತಕ್ಕೆ ಬಂದವರು. ಬಿನ್ನಿ ಹುಟ್ಟಿದ್ದು ಭಾರತದಲ್ಲಿ. ಬೆಂಗಳೂರಿನಲ್ಲಿ ನೆಲೆಸಿರುವ ಆಂಗ್ಲೋ-ಇಂಡಿಯನ್ ಸಮುದಾಯದಿಂದ ಬಂದಿರುವ ರೋಜರ್ ಬಿನ್ನಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರೋಜರ್ ಆಲ್ ರೌಂಡರ್ ಮತ್ತು ಅತ್ಯುತ್ತಮ ಔಟ್-ಸ್ವಿಂಗರ್ ಮೂಲಕ ಹೆಸರುವಾಸಿ.

Roger-Binny

ರೋಜರ್ ಕ್ರಿಕೆಟ್ ಜೀವನ ಅದ್ಭುತವಾಗಿತ್ತು. ಅವರು ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ತಮ್ಮ ಚಿಕ್ಕ ಅಂತಾರಾಷ್ಟ್ರೀಯ ಬದುಕಿನಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಅಲ್ಲದೆ ಅಂಡರ್ 19 ತಂಡದ ಕೋಚ್ ಆಗಿ ರೋಜರ್ ಹೆಸರುವಾಸಿ. 2000 ಅಂಡರ್-19 ವಿಶ್ವಕಪ್ ತಂಡ ಭರ್ಜರಿ ಪ್ರದರ್ಶನ ನೀಡಿದ್ದರ ಹಿಂದೆ ಬಿನ್ನಿ ಛಾಪು ಮರೆಯುವಂತಿಲ್ಲ.

ಆ ವಿಶ್ವಕಪ್ ಟೂರ್ನಿಯ ಸರಣಿ ಪುರುಷೋತ್ತಮರಾಗಿದ್ದ ಯುವರಾಜ್ ಸಿಂಗ್ ಮತ್ತು ನಾಯಕ ಮೊಹಮ್ಮದ್ ಕೈಫ್ ನಂತಹ ಯುವ ಆಟಗಾರರ ಪಡೆಯನ್ನು ಮುನ್ನಡೆಸಿದ್ದು ಇದೇ ರೋಜರ್ ಬಿನ್ನಿ. ಕೋಚ್ ಬಿನ್ನಿ ಮಾರ್ಗದರ್ಶನದಲ್ಲಿ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಭಾರತವು ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದುವರೆಗೆ ಭಾರತ 5 ಬಾರಿ ಅಂಡರ್ 19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. ಯುವ ಆಟಗಾರರಾದ ಯುವರಾಜ್ ಮತ್ತು ಕೈಫ್ ಎರಡು ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್ವೆಸ್ಟ್ ಟ್ರೋಫಿ 2002 ರ ಹೀರೋ ಆಗಿದ್ದರು.

1983 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ

1983 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಟೀಮ್ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವಲ್ಲಿ ಇವರ ಕೊಡುಗೆಯೂ ಅಪಾರ. ಎಲ್ಲರೂ 1983ರ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ಅವರ 175 ರನ್‌ಗಳ ಅಜೇಯ ಇನಿಂಗ್ಸ್ ಬಗ್ಗೆ ಮಾತನಾಡುತ್ತಾರೆ. ಇದೇ ಪಂದ್ಯದಲ್ಲಿ ಬಿನ್ನಿ ಆಟವೇ ಅಮೋಘ. ಭಾರತ 17 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರೋಜರ್ ಬಿನ್ನಿ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿ 48 ಎಸೆತಗಳಲ್ಲಿ 22 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಮದನ್ ಲಾಲ್ (39 ಎಸೆತಗಳಲ್ಲಿ 17 ರನ್) ಮತ್ತು ಸೈಯದ್ ಕಿರ್ಮಾನಿ (56 ಎಸೆತಗಳಲ್ಲಿ ಔಟಾಗದೆ 24) ಅವರ ಇನ್ನಿಂಗ್ಸ್ ಇಲ್ಲದಿದ್ದರೆ, ಕಪಿಲ್ ಔಟಾಗದೆ 175 ರನ್ ಗಳಿಸುತ್ತಿರಲಿಲ್ಲ.

ಬಿಸಿಸಿಐ ಮತ್ತು ಮಾಜಿ ಸಿಎಬಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಕಾಲದಲ್ಲಿ ಬಿನ್ನಿ ಬಂಗಾಳ ರಣಜಿ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಏಷ್ಯನ್ ಕ್ರಿಕೆಟ್ ಅಸೋಸಿಯೇಷನ್ನಲ್ಲೂ ಅವರು ದೊಡ್ಡ ಹುದ್ದೆಯಲ್ಲಿದ್ದರು. ಬಿನ್ನಿ 2019 ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಈಗ ಬಿಸಿಸಿಐ ಅಧ್ಯಕ್ಷ ಗಾದಿಯನ್ನು ಏರಿದ್ದಾರೆ.

ರೋಜರ್ ಬಿನ್ನಿ 1979-87ರ ಅವಧಿಯಲ್ಲಿ ಭಾರತದ ಪರ 27 ಟೆಸ್ಟ್ ಮತ್ತು 72 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಅವರು 1979 ರಲ್ಲಿ ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಬಿನ್ನಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 47 ವಿಕೆಟ್ ಪಡೆದಿದ್ದಾರೆ. ಬಿನ್ನಿ ಏಕದಿನ ಪಂದ್ಯಗಳಲ್ಲಿ 29.35 ರ ಸರಾಸರಿಯಲ್ಲಿ 77 ವಿಕೆಟ್‌ಗಳನ್ನು ಕಬಳಿದ್ದಾರೆ. ರೋಜರ್ ಬಿನ್ನಿ ಬ್ಯಾಟಿಂಗ್‌ನಿಂದಲೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಟೆಸ್ಟ್‌ನಲ್ಲಿ 830 ರನ್ ಮತ್ತು ಏಕದಿನದಲ್ಲಿ 629 ರನ್ ಸಿಡಿಸಿದ್ದಾರೆ.

Story first published: Monday, August 21, 2023, 13:10 [IST]
Other articles published on Aug 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+