Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹುಟ್ಟುಹಬ್ಬದ ದಿನವೇ ನಿವೃತ್ತಿ ಜೀವನದ ಬಗ್ಗೆ ಧೋನಿ

ನವದೆಹಲಿ, ಜು.7: ರಾಂಚಿಯ ರಾಜಕುಮಾರ, ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರು ಸೋಮವಾರ ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದ ಜತೆಗೆ ಅಭಿಮಾನಿಗಳಿಗೆ ಸಣ್ಣ ಶಾಕ್ ನೀಡಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಜು.9ರಂದು ತನ್ನ ಮೊದಲ ಟೆಸ್ಟ್ ಪಂದ್ಯವಾಡಲು ಸಿದ್ಧವಾಗುತ್ತಿದೆ. ಈ ತಯಾರಿಯಲ್ಲಿ ತೊಡಗಿರುವ ಧೋನಿ ಅವರು ಹುಟ್ಟುಹಬ್ಬದ ನಿಮಿತ್ತ ಬಿಸಿಸಿಐ.ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಸಂದರ್ಶನದ ವೇಳೆ ಕ್ರಿಕೆಟ್ ಜೀವನದಿಂದ ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದ್ದಾರೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧಿಕೃತ ವೆಬ್ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮುಂದಿನ ವಿಶ್ವಕಪ್ ತನಕ ಆಡುತ್ತೇನೆ ಆಮೇಲೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಯೋಜನೆ ಇಟ್ಟುಕೊಂಡಿಲ್ಲ. ಬೇರೆ ಬೇರೆ ಯೋಜನೆಗಳು ಸಾಕಷ್ಟಿವೆ ಎಲ್ಲವನ್ನು ಪೂರೈಸಲು ಸಮಯವೇ ಸಾಕಾಗುತ್ತಿಲ್ಲ ಎಂದಿದ್ದಾರೆ. [ಅಂಗ್ಲರ ಬೇಟೆಗೆ ಹೊರಟ ಧೋನಿ ಪಡೆ]

On his birthday, MS Dhoni reveals retirement plan

ಪ್ರತಿ ಪಂದ್ಯವನ್ನು ಗೆದ್ದ ನಂತರ ಗೆಲುವಿನ ದ್ಯೋತಕವಾಗಿ ವಿಕೆಟ್ ಸಂಗ್ರಹಿಸುವ ಧೋನಿ ಬಳಿ ಈಗ ವಿಕೆಟ್ ಗಳ ರಾಶಿಯೇ ಇದೆ. ನಿಮ್ಮ ಮನೆಯಲ್ಲಿ ಪ್ರತ್ಯೇಕ ಕೊಠಡಿ ನಿರ್ಮಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ, ಅದು ನನ್ನ ನಿವೃತ್ತಿ ಯೋಜನೆಯಾಗಿದೆ.

ಕ್ರಿಕೆಟ್ ಸ್ಟಂಪ್ ಗಳನ್ನು ಪ್ರತ್ಯೇಕವಾಗಿ ಜೋಡಿಸಿ ಪ್ರದರ್ಶನವಿಡಲು ಯೋಜಿಸಿದ್ದೇನೆ. ಇದು ನನ್ನ ಕ್ರಿಕೆಟ್ ಬದುಕಿನ ಸ್ಮರಣಿಕೆಯಾಗಲಿದೆ. ಯಾವ ಸ್ಟಂಪ್ ಯಾವ ಟೂರ್ನಿಗೆ ಸೇರಿದ್ದು ಎಂಬುದು ನನಗೆ ಮರೆತು ಹೋಗಿದೆ ಎಂದು ಧೋನಿ ಮುಗುಳ್ನಗೆ ಚೆಲ್ಲಿದ್ದಾರೆ. [ಎಂಎಸ್ ಧೋನಿ ವಿರುದ್ಧ ಬಂಧನ ವಾರೆಂಟ್]

ನಿವೃತ್ತಿ ಹೊಂದಿದ ಮೇಲೆ ನನ್ನ ಮುಂದಿರುವ ದೊಡ್ಡ ಯೋಜನೆ ಇದೇ ಆಗಿದೆ. ಎಲ್ಲಾ ಸ್ಟಂಪ್ ಗಳನ್ನು ಗುಡ್ಡೆ ಹಾಕಿ ಹಳೆ ಪಂದ್ಯಗಳ ವಿಡಿಯೋ ನೋಡುತ್ತಾ ಯಾವ ಸ್ಟಂಪ್ ಯಾವ ಪಂದ್ಯದ್ದು ಎಂದು ತಿಳಿದುಕೊಳ್ಳುವುದೇ ನನ್ನ ನಿವೃತ್ತಿ ಜೀವನದ ದೊಡ್ಡ ಕೆಲಸವಾಗಲಿದೆ ಎಂದಿದ್ದಾರೆ.

ನಿವೃತ್ತಿ ಜೀವನದ ಯೋಜನೆಯನ್ನು ಪ್ರಕಟಿಸಿದ ಧೋನಿ ತಮ್ಮ ನಿವೃತ್ತಿ ದಿನದ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ. ಮುಂದಿನ ವಿಶ್ವಕಪ್ ತನಕ ಆಡುವುದು ಸದ್ಯದ ಗುರಿ ಎಂದಿದ್ದಾರೆ. ಮೋಟರ್ ಸೈಕಲ್ ರೇಸ್ ನಿಂದ ಹಿಡಿದು ಕ್ರೀಡಾಂಗಣ ನಿರ್ಮಾಣ, ಇತರೆ ಕ್ರೀಡೆಗಳಿಗೆ ಪ್ರೋತ್ಸಾಹ, ಹಳ್ಳಿಯಿಂದ ಬರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮುಂತಾದ ಅನೇಕ ಗುರಿಗಳು ಧೋನಿ ಮೆದುಳಿನಲ್ಲಿದೆ ಯಾವಾಗ ಕಾರ್ಯರೂಪಕ್ಕೆ ಬರುತ್ತದೋ ಕಾದು ನೋಡಬೇಕಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+