1 ಪಂದ್ಯ, 3 ತಂಡ ಮತ್ತು 36 ಓವರ್: ಕ್ರಿಕೆಟ್ ಲೋಕಕ್ಕೆ ಹೊಸ ಮಾದರಿ ಪರಿಚಯಿಸುತ್ತಿದೆ ದ.ಆಫ್ರಿಕಾ

ಕಾಲದಿಂದ ಕಾಲಕ್ಕೆ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಇದರ ಜೊತೆಗೆ ಆಟದ ಮಾದರಿಯಲ್ಲೂ ಹೊಸ ಸೇರ್ಪಡೆಗಳೂ ಆಗಿದೆ. ಫಲಿತಾಂಶ ಬರುವವಗೆರೂ ಆಡುತ್ತಿದ್ದ ಟೆಸ್ಟ್ ಕ್ರಿಕೆಟ್ ಐದು ದಿನಕ್ಕೆ ಮೊದಲು ಸೀಮಿತವಾಯಿತು. ಬಳಿಕ ಏಕದಿನ ಕ್ರಿಕೆಟ್ ಜನ್ಮತಾಳಿತು. ಅದಾದ ಬಳಿಕ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನು ಮಾಡಿತು.
ಈ ಬೆಳವಣಿಗೆಯ ನಂತರ ಈಗ ಮತ್ತೊಂದು ಮಾದರಿಯ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಎರಡು ಎದುರಾಳಿ ತಂಡಗಳ ನಡುವೆ ನಡೆಯುತ್ತಿದ್ದ ಕದನ ಇಲ್ಲಿ ಮೂರು ತಂಡಗಳ ನಡುವೆ ನಡೆಯಲಿದೆ. ಕೊರೊನ ವೈರಸ್‌ನ ನಂತರ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹೊಸ ಅವತಾರದೊಂದಿಗೆ ಬರಲು ವೇದಿಕೆ ಸಿದ್ದವಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಪ್ರಮುಖ ಆಟಗಾರರು ಈ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಒಂದೇ ಪಂದ್ಯದಲ್ಲಿ ಮೂರು ತಂಡಗಳು ಕಣಕ್ಕೆ
ಈ ಪಂದ್ಯಾವಳಿಯ ವಿಶೇಷತೆಯೇ ಇದು. ಸಾಮಾನ್ಯ ಕ್ರಿಕೆಟ್‌ಗಿಂತ ಭಿನ್ನವಾಗಿ ಒಂದು ಪಂದ್ಯದಲ್ಲಿ ಮೂರು ತಂಡಗಳು ಕಣಕ್ಕಿಳಿದು ಕಾದಾಟವನ್ನು ನಡೆಸಲಿದೆ. ಹದಿನೆಂಟು ಓವರ್‌ಗಳ ಎರಡು ಅವಧಿಯಲ್ಲಿ ಪಂದ್ಯ ನಡೆಯಲಿದೆ. ಬ್ಯಾಟಿಂಗ್ ನಡೆಸುವ ತಂಡ 6 ಓವರ್‌ಗಳಿಗೆ ಒಂದರಂತೆ ಎರಡೂ ಎದುರಾಳಿಗಳನ್ನು ಎದುರಿಸಲಿದೆ. ಪ್ರತೀ ತಂಡದಲ್ಲೂ 8 ಆಟಗಾರರು ಕಣಕ್ಕಿಳಿಯಲಿದ್ದಾರೆ.

36 ಓವರ್‌ಗೆ ಪಂದ್ಯ ಮುಕ್ತಾಯ
ಮೂರು ತಂಡಗಳು ಸೇರಿ ಒಟ್ಟು 36 ಓವರ್‌ಗಳನ್ನು ಎದುರಿಸಬೇಕಾಗಿದೆ. ಒಂದು ತಂಡ ಹನ್ನೆರಡು ಓವರ್‌ಗಳ ಬ್ಯಾಟಿಂಗ್ ನಡೆಸಲುದೆ. ಇದು ಎರಡು ಪ್ರತ್ಯೇಕ ಇನ್ನಿಂಗ್ಸ್‌ಗಳಾಗಿ ವಿಭಜನೆಯಾಗಲಿದ್ದು ಮೊದಲಾರ್ಧದಲ್ಲಿ ಒಂದು ತಂಡ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೊಂದು ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ ಮುಗಿಸುವ ತಂಡ ಬಳಿಕ ಬೌಲಿಂಗ್ ಮಾಡಲಿದೆ. ಬಳಿಕ ಫೆವಿಲಿಯನ್‌ಗೆ ತೆರಳಲಿದೆ. ಹೀಗೆ ರೊಟೇಶನ್‌ನಲ್ಲಿ ಪಂದ್ಯ ನಡೆಯಲಿದೆ.

ಮೂರು ತಂಡಗಳು ಮತ್ತು ನಾಯಕರು
ಈ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂರು ತಂಡಗಳನ್ನು ಈಗಾಗಲೇ ಹೆಸರಿಸಲಾಗಿದೆ. ದಕ್ಷಿಣ ಆಫ್ರಿಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಒಂದು ತಂಡದ ನಾಯಕನಾಗಿದ್ದರೆ ಕ್ವಿಂಟನ್ ಡಿಕಾಕ್ ಮತ್ತ ವೇಗಿ ಕಗಿಸೋ ರಬಡ ಇನ್ನೆರಡು ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ.

ಉತ್ತಮ ಉದ್ದೇಶಕ್ಕಾಗಿ ನಡೆಯುತ್ತಿದೆ ಪಂದ್ಯ
ಕೊರೊನಾ ವೈರಸ್ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದಲ್ಲೂ ಕ್ರಿಕೆಟ್‌ನ ಎಲ್ಲಾ ಚಟುವಟಿಕೆಗಳು ನಿಂತಿದೆ. ಹೀಗಾಗಿ ಇದರಿಂದ ಸಂಕಷ್ಟಕ್ಕೆ ಈಡಾದವರಿಗೆ ನೆರವಾಗುವ ಉದ್ದೇಶದಿಂದ ಈ ವಿಶೇಷ ಪ್ರದರ್ಶನ ಪಂದ್ಯವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಜೂನ್ 27ರಂದು ಸೆಂಚೂರಿಯನ್ ಮೈದಾನದಲ್ಲಿ ಈ ಪಂದ್ಯ ಮಡೆಯಲಿದೆ. ಮೂಲಕ ಸ್ಥಗಿತಗೊಂಡಿದ್ದ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ವಿಶೇಷ ರೀತಿಯಲ್ಲಿ ಚಾಲನೆ ನೀಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications