ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಬೋರ್ಡ್‌ನ ಎಲ್ಲಾ ಸದಸ್ಯರೂ ರಾಜೀನಾಮೆ

Cricket South Africa’s entire board resigns, Olympic body likely to take charge

ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಬೋರ್ಡ್‌ನ 10 ಜನ ನಿರ್ದೇಶಕರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಕ್ರಿಕೆಟ್ ಬೋರ್ಡ್‌ನಲ್ಲಿ ಬಿಕ್ಕಟ್ಟು ಎದುರಾಗಿರುವುದರಿಂದ ಒಲಿಂಪಿಕ್ ಬೋರ್ಡ್ ತನ್ನ ಸಮಿತಿ ರಚಿಸುವುದಕ್ಕಾಗಿ ನಿರ್ದೇಶಕರು ರಾಜೀನಾಮೆ ಸಲ್ಲಿಸುವ ಮೂಲಕ ದಾರಿ ಮಾಡಿಕೊಟ್ಟಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!

ಭಾನುವಾರ ಒಂದು ಸಭೆ ನಡೆದಿತ್ತು ಈ ಸಭೆಯ ಬಳಿಕ ಬೋರ್ಡ್‌ನ ಮಾಜಿ ಹಂಗಾಮಿ ಅಧ್ಯಕ್ಷ ಬೆರೆಸ್‌ಫೋರ್ಡ್ ವಿಲಿಯಮ್ಸ್ ಕೂಡ ಸೇರಿ ಎಲ್ಲಾ 6 ಮಂದಿ ನಿರ್ದೇಶಕರು ತಮ್ಮ ಸ್ಥಾನ ತ್ಯಜಿಸಿದ್ದಾರೆ. ಉಳಿದ ನಾಲ್ವರು ಸೋಮವಾರ ತಮ್ಮ ಸ್ಥಾನ ತೊರೆದಿದ್ದಾರೆ. ಕ್ರಿಕೆಟ್ ಬೋರ್ಡ್‌ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದರಿಂದ ಈ ಬೆಳವಣಿಗೆಗಳಾಗಿವೆ.

'ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್‌ನ ಹಿತಾಸಕ್ತಿಗೆ ಉತ್ತಮ ಸೇವೆ ಸಲ್ಲಿಸಲು, ಇಡೀ ಮಂಡಳಿಯು ರಾಜೀನಾಮೆ ನೀಡಬೇಕು ಎಂದು ಸದಸ್ಯರ ಮಂಡಳಿಯು ಉದ್ದೇಶಪೂರ್ವಕವಾಗಿ ಮತ್ತು ತೀರ್ಮಾನಿಸಿದ ನಂತರ - ರಾಜೀನಾಮೆ ನೀಡಿದ್ದಾರೆ. ಎಲ್ಲಾ ಸ್ವತಂತ್ರ ಮತ್ತು ಸ್ವತಂತ್ರೇತರ ನಿರ್ದೇಶಕರು ಈಗ ರಾಜೀನಾಮೆ ನೀಡಿದ್ದಾರೆ,' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಹೇಳಿದೆ.

ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!ಬೆನ್ ಸ್ಟೋಕ್ಸ್ ಕೈ ಬೆರಳು ಮಡಚಿದ್ದರ ಹಿಂದಿದೆ ಕುತೂಹಲಕಾರಿ ಕಾರಣ!

'2020ರ ಅಕ್ಟೋಬರ್ 25ರಂದು ನಡೆದ ಸದಸ್ಯರ ಕೌನ್ಸಿಲ್ ಸಭೆಯ ನಂತರ, ಸದಸ್ಯರ ಮಂಡಳಿಯು, ಮಂಡಳಿಯ ಸದಸ್ಯರಿಂದ ರಾಜೀನಾಮೆ ಸ್ವೀಕರಿಸಿತು,' ಎಂದು ಸಿಎಸ್‌ಎ ಮಾಹಿತಿ ನೀಡಿದೆ. ಸೌತ್ ಆಫ್ರಿಕನ್ ಸ್ಪೋರ್ಟ್ಸ್ ಕಾನ್ಫಿಡರೇಶನ್ ಆ್ಯಂಡ್ ಒಲಿಂಪಿಕ್ ಕಮಿಟಿ ಇನ್ನು ಕ್ರಿಕೆಟ್ ಬೋರ್ಡ್‌ನ ಜವಾಬ್ದಾರಿ ನಿರ್ವಹಿಸಲಿದೆ.

Story first published: Monday, October 26, 2020, 17:49 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X