Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೂವರು ಪ್ರಮುಖ ಅಧಿಕಾರಿಗಳ ಅಮಾನತು ಮಾಡಿದ ಕ್ರಿಕೆಟ್ ಸೌತ್‌ ಆಫ್ರಿಕಾ

Cricket South Africa suspends three top officials

ಕೇಪ್ ಟೌನ್, ಅಕ್ಟೋಬರ್ 30: ಮುನ್ನಚ್ಚರಿಕೆ ಕ್ರಮವಾಗಿ ಮೂವರು ಪ್ರಮುಖ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಕ್ರಿಕೆಟ್ ಸೌತ್‌ ಆಫ್ರಿಕಾ ಬುಧವಾರ (ಅಕ್ಟೋಬರ್ 30) ಹೇಳಿದೆ. ಆದರೆ ಆ ಮೂವರು ಅಧಿಕಾರಿಗಳು ಯಾರೆಂಬುದನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಹೇಳಿಕೊಂಡಿಲ್ಲ.

ಅಮಾನತಾಗಿರುವ ಅಧಿಕಾರಿಗಳ ಹೆಸರುಗಳನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಬೋರ್ಡ್ ಹೇಳದಿದ್ದರೂ ಅಲ್ಲಿನ ಮಾಧ್ಯಮಗಳು ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸಿವೆ. ಅಮಾನತಾಗಿರುವವರಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್‌ ತಂಡದ ಜವಾಬ್ದಾರಿಯಲ್ಲಿದ್ದ, ಕ್ರಿಕೆಟ್‌ನ ಮಧ್ಯಂತರ ನಿರ್ದೇಶಕ ಕೊರ್ರಿ ವ್ಯಾನ್ ಝೈಲ್ ಹೆಸರೂ ಸೇರಿದೆ.

ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲು ಎರಡು ತಿಂಗಳು ಬಾಕಿ ಇರುವಾಗಲೆ ಅಧಿಕಾರಿಗಳನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಮಾನತು ಮಾಡಿದೆ. ಪ್ರವಾಸವು 4 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳು, 3 ಟಿ20 ಪಂದ್ಯಗಳನ್ನು ಒಳಗೊಂಡಿದೆ. ಈ ಸರಣಿ ಡಿಸೆಂಬರ್ 20ರಿಂದ ಆರಂಭಗೊಳ್ಳಲಿದೆ.

ಕಳೆದ ವರ್ಷ ಮಜಾನ್ಸಿ ಸೂಪರ್‌ ಲೀಗ್ ಟಿ20 ಟೂರ್ನಿಯಲ್ಲಿ ಆಟಗಾರರಿಗೆ ವೇತನ ಪಾವತಿಸದ ಬಗ್ಗೆ ಜಗಳವಾಗಿದ್ದು ಅಧಿಕಾರಿಗಳ ಅಮಾನತಿಗೆ ಕಾರಣ ಎನ್ನಲಾಗಿದೆ. ಅಮಾನತಾಗಿರುವ ಇನ್ನಿಬ್ಬರು ಅಧಿಕಾರಿಗಳೆಂದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಸೇ ಅಪ್ಪಯ್ಯ ಮತ್ತು ಪ್ರಾಯೋಜಕತ್ವ ಮುಖ್ಯಸ್ಥ ಕ್ಲೈವ್ ಎಕ್ಸ್ಟೀನ್ ಎಂದು ತಿಳಿದು ಬಂದಿದೆ.

Story first published: Wednesday, October 30, 2019, 19:37 [IST]
Other articles published on Oct 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+