Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ : ಅಂಗ್ಲರ ಬೇಟೆಗೆ ಹೊರಟ ಧೋನಿ ಪಡೆ

ಮುಂಬೈ, ಜೂ.23: ಎಂಎಸ್ ಧೋನಿ ನೇತೃತ್ವ 18 ಸದಸ್ಯರ ಟೀಂ ಇಂಡಿಯಾ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದೆ. ಆಂಗ್ಲರ ನಾಡಿನಲ್ಲಿ ಈ ಬಾರಿ ಭರ್ಜರಿ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿರುವ ತಂಡ ಜುಲೈ 9 ರಿಂದ ತನ್ನ ಮೊದಲ ಟೆಸ್ಟ್ ಪಂದ್ಯವಾಡಲಿದೆ.

ಟ್ರೆಂಟ್ ಬ್ರಿಡ್ಜ್ ನಲ್ಲಿ ಜು.9 ರಂದು ಮೊದಲ ಟೆಸ್ಟ್ ಪಂದ್ಯವಾಡುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ. ಜೂ.26ರಂದು ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯವನ್ನು ಧೋನಿ ಪಡೆ ಆಡಲಿದ್ದು, ಲೆಸ್ಟರ್ ನಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವಾಡಲಿದೆ. ನಂತರ ಜುಲೈ 1-3 ರ ತನಕ ಡರ್ಬಿಷೈರ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಮುಗಿಸಿಕೊಂಡು ಜುಲೈ 9 ರ ಟೆಸ್ಟ್ ಗೆ ತಯಾರಾಗಲಿದೆ.

Team India leaves for England

ಎರಡನೇ ಟೆಸ್ಟ್ ಪಂದ್ಯ ಲಾರ್ಡ್ಸ್ ನಲ್ಲಿ (ಜುಲೈ 17-21), ರೋಸ್ ಬೌಲ್, ಸೌಂಥಾಪ್ಟನ್(ಜುಲೈ 27-31), ಓಲ್ಡ್ ಟ್ರಾಫಾರ್ಡ್(ಆಗಸ್ಟ್ 7-11) ಹಾಗೂ ಓವಲ್ (ಆಗಸ್ಟ್ 15-19)

ಟೆಸ್ಟ್ ಸರಣಿ ನಂತರ ಏಕದಿನ ಸರಣಿ ನಡೆಯಲಿದ್ದು ನಂತರ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 7 ರ ತನಕ ಈ ಸರಣಿ ಮುಂದುವರೆಯಲಿದೆ.[ಭಾರತ- ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ]

ಟೆಸ್ಟ್ ಸರಣಿಗೆ ಟೀಂ ಇಂಡಿಯಾ: ಎಂಎಸ್ ಧೋನಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಈಶ್ವರ್ ಪಾಂಡೆ, ಇಶಾಂತ್ ಶರ್ಮ, ಸ್ಟುವರ್ಟ್ ಬಿನ್ನಿ,ವರುಣ್ ಅರೋನ್, ವೃದ್ಧಿಮಾನ್ ಸಹಾ, ಪಂಕಜ್ ಸಿಂಗ್

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+