ಅಶಿಸ್ತಿನ ಕ್ರಿಕೆಟಿಗರಿಗೆ ಮೈದಾನದಿಂದ ಬಹಿಷ್ಕಾರ ನಿಯಮ ಅ. 1ರಿಂದ ಜಾರಿ
ದುಬೈ, ಜೂನ್ 24: ಪಂದ್ಯದ ವೇಳೆ ಗಂಭೀರ ಸ್ವರೂಪದ ಅಶಿಸ್ತು ಪ್ರದರ್ಶಿಸುವ ಆಟಗಾರರನ್ನು ಮೈದಾನದಿಂದ ಆಚೆ ಅಟ್ಟುವ ಹೊಸ ನಿಯಮ ಇದೇ ವರ್ಷ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
ಕೆಲ ತಿಂಗಳುಗಳ ಹಿಂದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ), ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಿತಿಯು ಇಂಥದ್ದೊಂದು ನಿಯಮವನ್ನು ಅಳವಡಿಸಿಕೊಳ್ಳಬೇಕೆಂಬ ಸಲಹೆ ನೀಡಿತ್ತು.

ಸಲಹೆ ಸ್ವೀಕರಿಸಿದ್ದ ಐಸಿಸಿ, ಇದನ್ನು ತನ್ನ ಆಡಳಿತ ಮಂಡಳಿ ಹಾಗೂ ತನ್ನ ಅಧೀನದಲ್ಲಿರುವ ಇತರ ಸಲಹಾ ಸಮಿತಿಗಳಿಗೆ ಒಪ್ಪಿಸಿ, ಇದರ ಸಾಧಕ-ಬಾಧಕಗಳನ್ನು ಅವಲೋಕಿಸುವಂತೆ ಸೂಚಿಸಿತ್ತು.
ಈ ಸಲಹೆಯ ಬಗ್ಗೆ ಆಡಳಿತ ಮಂಡಳಿ ಹಾಗೂ ಅಧೀನ ಸಮಿತಿಗಳು ಸಹಮತ ವ್ಯಕ್ತಪಡಿಸಿದ್ದರಿಂದಾಗಿ ಇದೀಗ ಐಸಿಸಿಯು ಆ ನಿಯಮದ ಜಾರಿಗೆ ಹಸಿರು ನಿಶಾನೆ ತೋರಿದೆ. ಅದರಂತೆ, ಆಟಗಾರರನ್ನು ಹೊರಗಟ್ಟುವ ಅಧಿಕಾರವನ್ನು ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿರುವ ಅಂಪೈರ್ ಗಳಿಗೆ ನೀಡಲಾಗುತ್ತದೆ.
ಫುಟ್ಬಾಲ್ ನಲ್ಲಿ ಇಂಥ ನಿಯಮವಿದೆ. ಆ ಕ್ರೀಡೆಯಲ್ಲಿ, ಮೈದಾನದಲ್ಲಿ ಅಶಿಸ್ತನ್ನು ತೋರುವ ಅಥವಾ ನಿಯಮ ಉಲ್ಲಂಘಿಸುವ ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿ ಹೊರಗಟ್ಟಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications