ಮ್ಯಾಚ್ ಸೋತರೂ ಧೋನಿ ಸಿಕ್ಸ್ ಸೂಪರ್ ಗುರೂ
ಹೈದರಾಬಾದ್, ಸೆ.18: ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಟೂರ್ನಿಯ ಮೊದಲ ಪಂದ್ಯದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಧೋನಿ ಪಡೆ ಸೋಲು ಕಂಡಿದೆ. ಅದರೆ, ನಾಯಕನಾಗಿ ಎಂಎಸ್ ಧೋನಿ ಸಕತ್ತಾಗಿ ಬ್ಯಾಟ್ ಬೀಸಿ ಪ್ರೇಕ್ಷಕರನ್ನು ರಂಜಿಸಿದರು. ಕೊನೆ ಓವರ್ ನಲ್ಲಿ ಧೋನಿ ಹೊಡೆದ ಸಿಕ್ಸರ್ ರೋಮಾಂಚನಕಾರಿಯಾಗಿತ್ತು.
ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೆಕೆಆರ್ 3 ವಿಕೆಟ್‌ಗಳ ಗೆಲುವು ಸಾಧಿಸಿದ ಖುಷಿಯಲ್ಲಿ ಕೋಲ್ಕತ್ತಾ ಅಭಿಮಾನಿಗಳು ಮುಳುಗಿದ್ದಾರೆ. ಕೊನೆಯ ಕ್ಷಣದವರೆಗೂ ರೋಚಕತೆ ಉಳಿಸಿಕೊಂಡ ಪಂದ್ಯದ ದ್ವಿತೀಯಾರ್ಧದಲ್ಲಿ ಕೆಕೆಆರ್ ನ ಆಂಡ್ರೆ ರಸೆಲ್, ಟೆನ್ ಡೊಶಾಟ್ ಆಟ ಮನಸೂರೆ ಮಾಡಿದರೆ, ಮೊದಲಾರ್ಧದಲ್ಲಿ ಬ್ರಾವೋ ಹಾಗೂ ಧೋನಿ ಜೊತೆಯಾಟ ಮುಖ್ಯಾಂಶ ಎನಿಸಿತು. [ಪಂದ್ಯದ ವರದಿ ಓದಿ]
ಧೋನಿ ಸಿಕ್ಸರ್ ಸಿಡಿಸುವ ಸ್ಟೈಲ್ ಎಲ್ಲರಿಗೂ ಗೊತ್ತೇ ಇದೆ. 2011ರ ವಿಶ್ವಕಪ್ ನಲ್ಲಿ ಸಿಕ್ಸ್ ಎತ್ತಿ ಕಪ್ ಗೆ ಮುತ್ತಿಟ್ಟ ಧೋನಿ ಪವರ್ ಫುಲ್ ಶಾಟ್ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಕೆಕೆಆರ್ ವಿರುದ್ಧ ಪಂದ್ಯದಲ್ಲೂ ಹೀಗೆ ಆಯಿತು. ಧೋನಿ ಹೊಡೆದ ಭರ್ಜರಿ ಸಿಕ್ಸರ್ ನೋಡಿ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಭಿಮಾನಿಗಳು ಹುಚ್ಚೆದು ಕುಣಿದು ನಲಿದಾಡಿದರು.

ಅಚ್ಚಳಿಯದೆ ಉಳಿಯುವುದಂತೂ ನಿಜ
101 ಮೀಟರ್ ದೂರದವರೆಗೂ ಚೆಂಡು ಕಳಿಸಿದ ಧೋನಿ ಸಿಕ್ಸರ್ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭರ್ಜರಿ ಪ್ರಶಂಸೆಗಳು ಬಂದಿವೆ. ಕೆಕೆಆರ್ ತಂಡದ ಉಮೇಶ್ ಯಾದವ್ ಎಸೆದ ಇನ್ನಿಂಗ್ಸ್ ನ ಕೊನೆ ಚೆಂಡನ್ನು ಧೋನಿ ಸಿಕ್ಸ್ ಆಗಿ ಪರಿವರ್ತಿಸಿ ತಂಡದ ಮೊತ್ತವನ್ನು 157/4ಕ್ಕೇರಿಸಿದರು. ವೈಯಕ್ತಿಕ 2 ಸಿಕ್ಸರ್ 3 ಬೌಂಡರಿ ಸಹಿತ 20 ಎಸೆತಗಳಲ್ಲಿ 35 ರನ್ ಚೆಚ್ಚಿದರು ಅದರೆ, ಈ ಸಾಹಸ ಪಂದ್ಯ ಗೆಲ್ಲಿಸಲಿಲ್ಲ. ಅದರೆ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಧೋನಿ ಅಭಿಮಾನಿಗಳ ಮನಸಲ್ಲಿ ಅಚ್ಚಳಿಯದೆ ಉಳಿಯುವುದಂತೂ ನಿಜ.
ಧೋನಿ ಅಣ್ಣನಿಗೆ ವಿಷಲ್ ಪೋಡು
ಧೋನಿ ಅಣ್ಣನಿಗೆ ವಿಷಲ್ ಪೋಡು ಎಂದ ತಮಿಳು ಕ್ರಿಕೆಟ್ ಪ್ರೇಮಿಗಳು
ವಾವ್ ವಾಟ್ ಎ ಸಿಕ್ಸ್!
ಧೋನಿ ಶಾಟ್ ನೋಡಿದ ತಕ್ಷಣ ಹಲವರ ಬಾಯಿಂದ ಬಂದ ಉದ್ಗಾರ ಇದು ವಾವ್ ವಾಟ್ ಎ ಸಿಕ್ಸ್
ಧೋನಿ ಬೆಸ್ಟ್ ಫಿನಿಷರ್
ಧೋನಿ ಬೆಸ್ಟ್ ಫಿನಿಷರ್ ಎನ್ನುವುದು ಇದಕ್ಕೆ ಇಲ್ಲಿದೆ ನೋಡಿ ಸಾಕ್ಷಿ
101 ಮೀಟರ್ ಮೈ ಗಾಡ್
101 ಮೀಟರ್ ಮೈ ಗಾಡ್ ಇನ್ನೂ ಚೆಂಡು ಹುಡುಕುತ್ತಿದ್ದಾರಂತೆ
ಕೊನೆ ಬಾಲ್ ಸಿಕ್ಸ್ ಸೂಪರ್
ಮ್ಯಾಚ್ ಸೋತರೂ ಧೋನಿ ಸಿಕ್ಸ್ ಸೂಪರ್ ಗುರೂ ಕೊನೆ ಬಾಲ್ ಸಿಕ್ಸ್ ಸೂಪರ್
ಧೋನಿ ಸಿಕ್ಸ್ ಎತ್ತಿದ ವಿಡಿಯೋ
ಧೋನಿ ಸಿಕ್ಸ್ ಎತ್ತಿದ ವಿಡಿಯೋ ಅಭಿಮಾನಿಗಳು ಕತ್ತರಿಸಿ ಯೂಟ್ಯೂಬ್ ಗೆ ಹಾಕಿದ್ದಾರೆ. ಅಧಿಕೃತ ವೆಬ್ ಸೈಟ್ ನಲ್ಲಿ ವಿಡಿಯೋ ಲಿಂಕ್ ಇದೆ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications