ಕೊಹ್ಲಿಗೆ ಈಗ ಪ್ರಥಮ ಬಾರಿಗೆ ಪಟ್ಟಕ್ಕೇರಿದ ಖುಷಿ
ದುಬೈ, ಸೆ.10: ತಮ್ಮ ವೃತ್ತಿ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಟಾಪ್ ಸ್ಕೋರರ್ ಎನಿಸಿಕೊಂಡಿದ್ದು ಹಾಗೂ ಮೊದಲ ಬಾರಿಗೆ ಐಸಿಸಿ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವುದು ಅತ್ಯಂತ ಸಂತೋಷ ತಂದಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅವರು 41 ಎಸೆತಗಳಲ್ಲಿ 66 ರನ್ ಚೆಚ್ಚಿದ ಪರಿಣಾಮ 8 ಅಮೂಲ್ಯ ಶ್ರೇಯಾಂಕ ಅಂಕಗಳನ್ನು ಸಂಪಾದಿಸಿದರು. ಈ ಮೂಲಕ 897 ರೇಟಿಂಗ್ ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದ್ದಾರೆ.[ಪ್ರವಾಸದ ಕೊನೆಯಲ್ಲಿ ದಾಖಲೆ ಬರೆದ ಕೊಹ್ಲಿ]
2010ರ ಆಗಸ್ಟ್ 18ರಂದು ಡಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಅವರು ತಮ್ಮ 28ನೇ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿದರು.

ಆಸ್ಟ್ರೇಲಿಯಾದ ಹೊಚ್ಚ ಹೊಸ ಟಿ20 ನಾಯಕ ಎರೋನ್ ಫಿಂಚ್ ಅವರು ಕೊಹ್ಲಿಗಿಂತ 5 ಅಂಕ ಕೆಳಗಿದ್ದು ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಐಸಿಸಿ ಪ್ರಕಟಿಸಿದೆ.
2012ರಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ವಾರ್ಷಿಕ ಕ್ರಿಕೆಟರ್ ಪ್ರಶಸ್ತಿ ಗೆದ್ದಿದ್ದರು. 2008ರಲ್ಲಿ ಮಲೇಷಿಯಾದಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಈ ವರ್ಷ ಟಿ20ರಲ್ಲಿ ಒಟ್ಟಾರೆ 385 ರನ್(ಐದು ಅರ್ಧಶತಕ ಸೇರಿ) ಗಳಿಸಿ ಜಾಗತಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡಿನ ಅಲೆಕ್ಸ್ ಹೇಲ್ಸ್ ಅವರು 390ರನ್ ಹೊಡೆದು ವರ್ಷದ ಅತಿ ಹೆಚ್ಚು ರನ್ ಸ್ಕೋರರ್ ಎನಿಸಿದ್ದಾರೆ.
ಟಿ20 ಟಾಪ್ ಪಟ್ಟಿಯಲ್ಲಿ ಕೊಹ್ಲಿ ಅಲ್ಲದೆ ಸುರೇಶ್ ರೈನಾ 10ನೇ ಸ್ಥಾನದಲ್ಲಿದ್ದು ಉಳಿದ ಆಟಗಾರರು ಟಾಪ್ 10 ಪಟ್ಟಿಯಿಂದ ಹೊರಗಿದ್ದಾರೆ. ರವೀಂದ್ರ ಜಡೇಜ 25ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications