ಪ್ರವಾಸದ ಕೊನೆಯಲ್ಲಿ ದಾಖಲೆ ಬರೆದ ಕೊಹ್ಲಿ
ಬರ್ಮಿಂಗ್ ಹ್ಯಾಮ್, ಸೆ.9: ಇಂಗ್ಲೆಂಡ್ ವಿರುದ್ಧ ಸರಣಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಪ್ರವಾಸದ ಅಂತ್ಯದಲ್ಲಿ ದಾಖಲೆಯೊಂದಿಗೆ ಭಾರತದತ್ತ ಮುಖ ಮಾಡಿದ್ದಾರೆ. ಟಿ20 ಪಂದ್ಯದಲ್ಲಿ ಯುವರಾಜ್ ಸಿಂಗ್ ಮಾಡಿದ್ದ ಸಾಧನೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕೈಕ ಟಿ2೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಲಯ ಕಂಡುಕೊಂಡ ವಿರಾಟ್ ಕೊಹ್ಲಿ ಅವರ ಅಮೋಘ ಆಟ ಭಾರತದ ಗೆಲುವಿಗೆ ಸಹಾಯಕವಾಗಲಿಲ್ಲ. ಕೊಹ್ಲಿ ಅವರು 41 ಎಸೆತಗಳಲ್ಲಿ 66 ರನ್(9 ಬೌಂಡರಿ, 1 ಸಿಕ್ಸ್) ಬಾರಿಸಿದ್ದರು. ಭಾರತ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತ್ತು. ಟೂರ್ನಿಯನ್ನು ಸೋಲಿನೊಂದಿಗೆ ಕೊನೆಗಾಣಿಸಿದ ಧೋನಿ ವಿರುದ್ಧ ಟೀಕೆಗಳು ಕೇಳಿ ಬಂದಿತ್ತು. [ಧೋನಿ ವಿರುದ್ಧ ಕಿಡಿಕಾರಿದ ಗಂಗೂಲಿ]
ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ 25 ವರ್ಷದ ಕೊಹ್ಲಿ ವಿರುದ್ಧ ಅನೇಕರು ಸಿಟ್ಟಿಗೆದ್ದಿದ್ದರು. ಅನುಷ್ಕಾ ಶರ್ಮ ಅವರನ್ನು ಇಂಗ್ಲೆಂಡಿಗೆ ಕರೆದೊಯ್ದಿದ್ದು ಭಾರಿ ವಿವಾದದ ಅಲೆ ಎಬ್ಬಿಸಿತ್ತು. ಆದರೆ, ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ಮೂಲಕವೇ ಉತ್ತರಿಸಿದರು.
2010ರ ಆಗಸ್ಟ್ 18ರಂದು ಡಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಅವರು ತಮ್ಮ 28ನೇ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನಿಸಿದರು. ಈ ಪಟ್ಟಿಯಲ್ಲಿರುವ ಇತರೆ ಆಟಗಾರರು ಮುಂದೆ ತಿಳಿಯಿರಿ...

ಭಾರತದ ಪರ ಟಾಪ್ ರನ್ ಸ್ಕೋರರ್
ನ್ಯೂಜಿಲೆಂಡ್ ನ ಬ್ರೆಂಡನ್ ಮೆಕ್ ಲಮ್ ಅವರು 70 ಪಂದ್ಯ 69 ಇನ್ನಿಂಗ್ಸ್ ನಲ್ಲಿ 2105 ರನ್ ಗಳಿಸಿದ್ದು ಟಾಪ್ ಸ್ಕೋರರ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಪರ ಅತಿ ಹೆಚ್ಚು ಸ್ಕೋರರ್ ಎನಿಸಿದ್ದ ಯುವರಾಜ್ ಸಿಂಗ್ ಹಿಂದಿಕ್ಕಿ ವಿರಾಟ್ ಕೊಹ್ಲಿ ಅವರು 28 ಪಂದ್ಯಗಳಲ್ಲಿ 26 ಇನ್ನಿಂಗ್ಸ್ ನಿಂದ 972 ರನ್ ಕಲೆ ಹಾಕಿ ಅಗ್ರಸ್ಥಾನಕ್ಕೇರಿದ್ದಾರೆ.

ಯುವರಾಜ್ ಸಿಂಗ್ #2
ಎಡಗೈ ಆಟಗಾರ ಯುವರಾಜ್ ಸಿಂಗ್ ಅವರು 40 ಪಂದ್ಯಗಳಲ್ಲಿ 37 ಇನ್ನಿಂಗ್ಸ್ ನಿಂದ 968 ರನ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.

ಸುರೇಶ್ ರೈನಾ #3
ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು 38 ಇನ್ನಿಂಗ್ಸ್ ನಿಂದ 947 ರನ್ ಕಲೆ ಹಾಕಿ ಮೂರನೇ ಸ್ಥಾನ ಗಳಿಸಿದ್ದಾರೆ.

ಗೌತಮ್ ಗಂಭೀರ್ #4
ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರು 36 ಇನ್ನಿಂಗ್ಸ್ ನಿಂದ 932 ರನ್ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಎಂಎಸ್ ಧೋನಿ #5
ಬಲಗೈ ಬ್ಯಾಟ್ಸ್ ಮನ್ ಎಂಎಸ್ ಧೋನಿ ಅವರು 45 ಇನ್ನಿಂಗ್ಸ್ ನಿಂದ 849 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications