ಬೆಂಗಳೂರು,ಆ.8: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಕರ್ನಾಟಕದ ರಣಜಿ ತಂಡದ ನಾಯಕ, ಅಂತಾರಾಷ್ಟ್ರೀಯ ಮಟ್ಟದ ಆಟಗಾರ ವೇಗಿ ಆರ್ ವಿನಯ್ ಕುಮಾರ್ ಮುನ್ನಡೆಸಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.
ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಿನಯ್ ಕುಮಾರ್ ಅವರು ಈ ಮುಂಚೆ ಕೂಡಾ ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು. ಸುಹಾಸ್ ಎಂಟರ್ ಪ್ರೈಸಸ್ ಹಾಗೂ ಸಂಗೀತಾ ಕನ್ಸೋರ್ಟಿಯಮ್ ಒಡೆತನದ ಈ ತಂಡದಲ್ಲಿ ಸದ್ಯ 18 ಜನ ಆಟಗಾರರಿದ್ದಾರೆ.
ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ.[ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಬೆಳಗಾವಿ ಪ್ಯಾಂಥರ್ಸ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ

| ಒಡೆಯರ್ ಕೆಪಿಎಲ್ 2014 |
| ಕ್ರಮ ಸಂಖ್ಯೆ | ಆಟಗಾರರ ಹೆಸರು | ಹರಾಜು ಮೊತ್ತ (in Rs) |
| 1 | ಆರ್ ವಿನಯ್ ಕುಮಾರ್ | 4,60,000 |
| 2 | ಭರತ್ ಚಿಪ್ಲಿ | 4,00,000 |
| 3 | ನಿಧೀಶ್ ಎಂ | 2,25,000 |
| 4 | ಗೌತಮ್ ಕೆ | 1,40,000 |
| 5 | ಎನ್ ಸಿ ಅಯ್ಯಪ್ಪ | 1,50,000 |
| 6 | ಸ್ಟಾಲಿನ್ ಹೂವರ್ | 80,000 |
| 7 | ಅಭಿಷೇಕ್ ರೆಡ್ಡಿ | 65,000 |
| 8 | ಸುನೀಲ್ ರಾಜು | 50,000 |
| 9 | ಎಂ.ಕೆ ಅಬ್ಬಾಸ್ | 40,000 |
| 10 | ಭರತ್ ಕೆ.ಎನ್ | 2,00,000 |
| 11 | ಪ್ರದೀಪ್ ಟಿ | 10,000 |
| 12 | ರೋಹನ್ ಕದಂ | 10,000 |
| 13 | ನವೀನ್ ಬಿ | 10,000 |
| 14 | ಅಕ್ಷಯ್ ಕೊಡೊತ್ | 10,000 |
| 15 | ಸುನಿಲ್ ಕುಮಾರ್ ಜೈನ್ | 10,000 |
| 16 | ಹೇಮಂತ್ ಕುಮಾರ್ | 10,000 |
| 17 | ಪುಸ್ತಕ್ ನಾಗ್ | 10,000 |
| 18 | ಜೇಶಾನ್ ಅಲಿ | 10,000 |