ಬೆಂಗಳೂರು,ಆ.14: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯ ಹೊಸ ತಂಡ ಹುಬ್ಳಿ ಟೈಗರ್ಸ್ ತಂಡದಲ್ಲಿ ಹಿರಿಯ ಆಲ್ ರೌಂಡರ್ ಬಾಲಚಂದ್ರ ಅಖಿಲ್ ಅವರನ್ನು ಸ್ಟಾರ್ ಪ್ಲೇಯರ್ ಆಗಿ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಆರ್ ಸಿಬಿ ಪರ ಆಡಿದ್ದ ವೇಗಿ ಅರವಿಂದ್ ಗಮನ ಸೆಳೆಯಲಿದ್ದಾರೆ. ಆ.28 ರಿಂದ ಸೆ.12 ರ ತನಕ ಪಂದ್ಯಾವಳಿ ನಡೆಯಲಿದೆ.
ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹುಬ್ಬಳ್ಳಿ ಟೈಗರ್ಸ್ ಹೊಸ ತಂಡಕ್ಕೆ ಸುಶೀಲ್ ಜಿಂದಾಲ್ ಮಾಲೀಕರಾಗಿದ್ದಾರೆ. ಬಿ ಅಖಿಲ್, ಎಸ್ ಅರವಿಂದ್, ಕೆಎಲ್ ರಾಹುಲ್, ಹಿರಿಯ ಆಟಗಾರ ಆನಂದ್ ಕಟ್ಟಿ ಪ್ರಮುಖ ಆಟಗಾರರಾಗಿದ್ದಾರೆ.
ಆ.28 ರಿಂದ ಸೆ.3 ರ ತನಕ ಮೈಸೂರು, ಸೆ.5 ರಿಂದ 7 ರ ತನಕ ಬೆಂಗಳೂರು, ಸೆ.9 ರಿಂದ 12 ಹುಬ್ಬಳ್ಳಿಯಲ್ಲಿ ನಡೆಯಲಿದೆ [ಕೆಪಿಎಲ್ ಟೂರ್ನಿಯ ವೇಳಾಪಟ್ಟಿ] ಹುಬ್ಬಳ್ಳಿ ಟೈಗರ್ಸ್ ತಂಡದ ಆಟಗಾರರು ಹಾಗೂ ಅವರ ಹರಾಜು ಮೊತ್ತ ವಿವರ ಇಲ್ಲಿದೆ....

| ಒಡೆಯರ್ ಕೆಪಿಎಲ್ 2014-ಹುಬ್ಳಿ ಟೈಗರ್ಸ್ |
| ಕ್ರಮ ಸಂಖ್ಯೆ | ಆಟಗಾರರ ಹೆಸರು | ಹರಾಜು ಮೊತ್ತ (in Rs) |
| 1 | ಬಿ ಆಖಿಲ್ | 310,000 |
| 2 | ಎಸ್ ಅರವಿಂದ್ | 300,000 |
| 3 | ಕೆಎಲ್ ರಾಹುಲ್ | 2,25,000 |
| 4 | ಆರ್ ಜೋನಾಥನ್ | 170,000 |
| 5 | ನಿತಿನ್ ಬಿಲ್ಲೆ | 160,000 |
| 6 | ವಿನೂ ಪ್ರಸಾದ್ | 95,000 |
| 7 | ಅಕ್ಷಯ್ ಸಿಕೆ | 85,000 |
| 8 | ಚೆಲುವರಾಜು | 60,000 |
| 9 | ಶೋಯಬ್ ಮ್ಯಾನೇಜರ್ | 55,000 |
| 10 | ಆನಂದ್ ಕಟ್ಟಿ | 35,000 |
| 11 | ಕ್ರಾಂತಿ ಕುಮಾರ್ | 30,000 |
| 12 | ಪರಪ್ಪ ಮೊರ್ದಿ | 55,000 |
| 13 | ರಾಜೇಶ್ ಸಿಂಗ್ | 10,000 |
| 14 | ಮಹಮ್ಮದ್ ತಹಾ | 10,000 |
| 15 | ಪ್ರವೀಣ್ ದುಬೇ | 10,000 |
| 16 | ಭರತ್ ಕುಮಾರ್ ವಿ | 10,000 |
| 17 | ಪ್ರಸನ್ನ ಪಾಟೀಲ್ | 10,000 |
| 18 | ಗೌರವ್ ಗೋಯಲ್ | 10,000 |