For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ : ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ

By Mahesh

ಬೆಂಗಳೂರು, ಆ.21: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ20 ಟೂರ್ನಮೆಂಟಿಗೆ ಗ್ಲಾಮರ್ ಸ್ಪರ್ಶ ನೀಡಲು ಇದೇ ಮೊದಲ ಬಾರಿಗೆ ಚಿತ್ರ ನಟರ ತಂಡವೊಂದು ಪಾಲ್ಗೊಳ್ಳುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಟೂರ್ನಿಯಲ್ಲಿ ಸೆಲೆಬ್ರಿಟಿಗಳ ತಂಡ ಆಡುತ್ತಿದ್ದು, ಕನ್ನಡ ನಟ ಕಿಚ್ಚ ಸುದೀಪ್ ಅವರು ನಾಯಕತ್ವವಹಿಸಿದ್ದಾರೆ.

ಬೆಂಗಳೂರು ಸೇರಿದಂತೆ ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಕೆಪಿಎಲ್ 2014 ಪಂದ್ಯಾವಳಿ ನಡೆಯಲಿದೆ. ಕೆಪಿಎಲ್ ಟೂರ್ನಿ ಹೆಸರನ್ನು ಮರು ನಾಮಕರಣ ಮಾಡಲಾಗಿದ್ದು, ಕೆಎಸ್ ಸಿಎ ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ.

Kiccha Sudeep's Rockstars

ಇನ್ಮುಂದೆ ಕೆಪಿಎಲ್ ಕಪ್ 'ಒಡೆಯರ್ ಕಪ್' ಎಂದು ಕರೆಯಲ್ಪಡುತ್ತದೆ. ಈ ಬಾರಿ ಕನ್ನಡ ಚಿತ್ರರಂಗದ ಜನಪ್ರಿಯ ಕ್ರಿಕೆಟ್ ತಂಡ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆದ್ದಿರುವ ಕಿಚ್ಚ ಸುದೀಪ್ ಅವರ ನಾಯಕತ್ವದ ರಾಕ್ ಸ್ಟಾರ್ಸ್ ತಂಡ ಈ ಬಾರಿ ಕೆಪಿಎಲ್ ನಲ್ಲಿ ಆಡಲಿರುವುದು ವಿಶೇಷ.

ಕರ್ನಾಟಕದ ಪ್ರತಿಭಾವಂತ ಕ್ರಿಕೆಟರ್ ಗಳ ಜತೆ ನಮ್ಮ ತಂಡ ಆಡುತ್ತಿರುವುದು ಸಂತಸ ತಂದಿದೆ. ನಾವು ಉತ್ತಮ ಪೈಪೋಟಿ ನೀಡುತ್ತೇವೆ. ನಮ್ಮ ತಂಡದ ಸದಸ್ಯರು ಕಠಿಣ ಅಭ್ಯಾಸ ನಿರತರಾಗಿದ್ದಾರೆ ಎಂದು ನಾಯಕ ಕಿಚ್ಚ ಸುದೀಪ್ ಹೇಳಿದ್ದಾರೆ. [ಬದಲಾದ ಸಮಯದಲ್ಲಿ ಒಡೆಯರ್ ಕೆಪಿಎಲ್]

ಕಿಚ್ಚ ಸುದೀಪ್ ತಂಡ ಹೀಗಿದೆ:

* ಕಿಚ್ಚ ಸುದೀಪ್ (ನಾಯಕ, ವಿಕೆಟ್ ಕೀಪರ್)
* ಧರ್ಮ ಕೀರ್ತಿರಾಜ್
* ಚರಣ್ ತೇಜ
* ಜೆ ಕಾರ್ತಿಕ್
* ಮಹೇಶ್
* ಶಬ್ಬೀರ್ ಅಹ್ಲುವಾಲಿಯಾ
* ರಾಜು ಗೌಡ
* ವಿಕ್ರಾಂತ್
* ಜಿಕೆ ಅನಿಲ್ ಕುಮಾರ್
* ಪ್ರದೀಪ್
* ರಾಜೀವ್
* ರಘು
* ಅರುಣ್ ಬೆಣ್ಣೆ
* ಆದರ್ಶ್

Rockstars

* ಮಂಗಳೂರು ಯುನೈಟೆಡ್: ಫಿಜಾ ಡೆವಲಪರ್ಸ್ ಹಾಗೂ ಇಂಟರ್ ಟ್ರೇಡ್ ಪ್ರೈ.ಲಿ
* ಬೆಳಗಾವಿ ಪ್ಯಾಂಥರ್ಸ್: ಸುಭಾಷ್ ಎಂಟರ್ ಪ್ರೈಸಸ್ ಹಾಗೂ ಸಂಗೀತಾ ಕನ್ಸೋರ್ಟಿಯಂ
* ಬಿಜಾಪುರ ಬುಲ್ಸ್: ವಿವಿಡ್ ಕ್ರಿಯೇಷನ್ಸ್
* ಟೀಂ ಮೈಸೂರು: ಎನ್ ರಂಗರಾವ್ ಅಂಡ್ ಸನ್ಸ್
* ಹುಬ್ಳಿ ಟೈಗರ್ಸ್ : ಸುಶೀಲ್ ಜಿಂದಾಲ್
* ಬಳ್ಳಾರಿ ಟಸ್ಕರ್ಸ್: ಭಾಗ್ಯಲಕ್ಷ್ಮಿ ಹಾಗೂ ವೆಂಕಟೇಶ್ ರೆಡ್ಡಿ
* ರಾಕ್ ಸ್ಟಾರ್ಸ್ : ಸುದೀಪ್

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+