Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಶುಭ ಸಂಖ್ಯೆ ಧೋನಿಗೆ ಶುಭವಾಗಬಲ್ಲುದೆ?

ಬೆಂಗಳೂರು, ಆ.13: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಅಶುಭ ಸಂಖ್ಯೆಯಿಂದ ಶುಭ ಸುದ್ದಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ನ ಅತ್ಯಂತ ಕಳಪೆ ನಾಯಕ ಎಂಬ ಪಟ್ಟಕ್ಕೇರದಿರಲು ಧೋನಿ ಯತ್ನಿಸುತ್ತಿದ್ದಾರೆ. ಹಲವರ ಪಾಲಿನ ಅಶುಭ ಸಂಖ್ಯೆ 13 ಅನ್ನು ಶುಭ ಸಂಖ್ಯೆಯನ್ನಾಗಿಸಲು ಧೋನಿ ಸಜ್ಜಾಗಿದ್ದಾರೆ.

ವಿದೇಶದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಸೋತಿರುವ ನಾಯಕ ಧೋನಿ ಅವರು ಇನ್ನೂ 3 ಪಂದ್ಯಗಳನ್ನು ಸೋತರೆ ಅತ್ಯಂತ ಕಳಪೆ ನಾಯಕ ಎಂಬ ಪಟ್ಟಕ್ಕೇರುತ್ತಾರೆ. ಈಗಾಗಲೇ ಈ ಕಿರೀಟ ನ್ಯೂಜಿಲೆಂಡ್ ನ ಸ್ಟೀಫನ್ ಫ್ಲೆಮಿಂಗ್ ಹಾಗೂ ಬ್ರಿಯಾನ್ ಲಾರಾ ಅವರ ತಲೆ ಮೇಲಿದೆ. ಇಬ್ಬರೂ ತಮ್ಮ ನಾಯಕತ್ವದಲ್ಲಿ ವಿದೇಶದಲ್ಲಿ 16 ಪಂದ್ಯಗಳನ್ನು ಸೋತಿದ್ದಾರೆ. ಧೋನಿ ಈ ಕಳಪೆ ಸಾಧನೆಯನ್ನು 13ಕ್ಕೇ ಮುಕ್ತಾಯಗೊಳಿಸಲು ಯತ್ನಿಸುತ್ತಿದ್ದಾರೆ.

Will number 13 prove lucky for captain MS Dhoni?

ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಪ್ರವಾಸಿ ಭಾರತ ತಂಡವನ್ನು 54 ರನ್ ಗಳಿಂದ ಸೋಲಿಸಿದ ಕೂಡಲೇ ಧೋನಿಗೆ ಕಳಪೆ ನಾಯಕತ್ವ ಪಟ್ಟದ ಭೀತಿ ಆವರಿಸಿತು. ಧೋನಿ ಅವರು 57 ಟೆಸ್ಟ್ ಪಂದ್ಯಗಳಲ್ಲಿ 27 ಗೆಲುವು ಸಾಧಿಸಿ 16 ಪಂದ್ಯ ಸೋತಿದ್ದಾರೆ. 14 ಪಂದ್ಯ ಡ್ರಾ ಆಗಿವೆ. ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಓವಲ್ ನಲ್ಲಿ ಆಗಸ್ಟ್ 15 ರಂದು ಆರಂಭವಾಗಲಿದೆ.

ಆಗಸ್ಟ್ 13ರವರೆಗೂ ಧೋನಿ ಅವರು ಸೋಲು ಕಂಡ ಪಂದ್ಯಗಳ ವಿವರ ಇಲ್ಲಿದೆ:
1.Vs ಶ್ರೀಲಂಕಾ, ಗಾಲೆ (ಜುಲೈ 2010) [ಸ್ಕೋರ್ ಕಾರ್ಡ್ ನೋಡಿ]
2.Vs ದಕ್ಷಿಣ ಆಫ್ರಿಕಾ, ಸೆಂಚುರಿಯನ್(ಡಿಸೆಂಬರ್ 2010)
3.Vs ಇಂಗ್ಲೆಂಡ್, ಲಾರ್ಡ್ಸ್ (ಜುಲೈ 2011)
4.Vs ಇಂಗ್ಲೆಂಡ್, ನಾಟಿಂಗ್ ಹ್ಯಾಮ್ (July 2011)
5.Vs ಇಂಗ್ಲೆಂಡ್, ಬರ್ಮಿಂಗ್ ಹ್ಯಾಂ (ಆಗಸ್ಟ್ 2011)
6.Vs ಇಂಗ್ಲೆಂಡ್, ದಿ ಓವಲ್ (ಆಗಸ್ಟ್ 2011)
7.Vs ಆಸ್ಟ್ರೇಲಿಯಾ, ಮೆಲ್ಬೋರ್ನ್ (ಡಿಸೆಂಬರ್ 2011)
8.Vs ಆಸ್ಟ್ರೇಲಿಯಾ, ಸಿಡ್ನಿ (ಜನವರಿ 2012)
9.Vs ಆಸ್ಟ್ರೇಲಿಯಾ, ಪರ್ತ್ (ಜನವರಿ 2012)
10.Vs ದಕ್ಷಿಣ ಆಫ್ರಿಕಾ, ಡರ್ಬನ್ (ಡಿಸೆಂಬರ್ 2013)
11.Vs ನ್ಯೂಜಿಲೆಂಡ್, ಆಕ್ಲೆಂಡ್ (ಫೆಬ್ರವರಿ 2014)
12.Vs ಇಂಗ್ಲೆಂಡ್, ಸೌಂಥಾಪ್ಟನ್ (ಜುಲೈ 2014)
13.Vs ಇಂಗ್ಲೆಂಡ್, ಮ್ಯಾಂಚೆಸ್ಟರ್ (ಆಗಸ್ಟ್ 2014)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+