For Quick Alerts
ALLOW NOTIFICATIONS  
For Daily Alerts
 

ಒತ್ತಡ ಇಲ್ಲದ ಕ್ರಿಕೆಟ್ ಬೋರಿಂಗ್: ಆರ್‌ಸಿಬಿ ವೇಗಿ ಕ್ರಿಸ್ ಮೋರಿಸ್

Cricket without pressure is boring says Chris Morris

ದುಬೈ: ಒತ್ತಡ ಇಲ್ಲದ ಕ್ರಿಕೆಟ್ ಬೋರಿಂಗ್ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್ ರೌಂಡರ್, ವೇಗಿ ಕ್ರಿಸ್ ಮೋರಿಸ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿಯ ಪ್ರಮುಖ ಆಟಗಾರನಾಗಿ ತಂಡಕ್ಕೆ ನೆರವಾಗುತ್ತಿರುವ ಬಗ್ಗೆ ಮಾತನಾಡುತ್ತ ಮೋರಿಸ್ ಈ ಹೇಳಿಕೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ನಾಲ್ಕು ಸೀಸನ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡಿರುವ ಕ್ರಿಸ್ ಮೋರಿಸ್ ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದಾರೆ. ಆಡಿದ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವಿಗೆ ನೆರವೂ ನೀಡಿದ್ದಾರೆ.

ಗಾಯಕ್ಕೀಡಾಗಿದ್ದರಿಂದ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಮೋರಿಸ್ ಆಡಿರಲಿಲ್ಲ. ಆ ಬಳಿಕ ಐದು ಪಂದ್ಯಗಳಲ್ಲಿ ಆಡಿ 9 ವಿಕೆಟ್‌ಗಳನ್ನು ಮುರಿದಿದ್ದಾರಲ್ಲದೆ ಪ್ರತೀ ಓವರ್‌ಗೆ 5 ರನ್‌ನಂತೆ ಅತ್ಯುತ್ತಮ ಎಕಾನಮಿಯೂ ತೋರಿಸಿದ್ದಾರೆ. ವರ್ಚುಯಲ್ ಸಂವಾದದಲ್ಲಿ ಮಾತನಾಡಿದ 33ರ ಹರೆಯದ ಮೋರಿಸ್ ತಂಡದ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ಆರ್‌ಸಿಬಿಯಲ್ಲಿದ್ದು ಆರಂಭದಲ್ಲಿ ಮತ್ತು ಡೆತ್‌ನಲ್ಲಿ ಬೌಲಿಂಗ್ ಮಾಡೋದು ಹೇಗನ್ನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋರಿಸ್, 'ಪ್ರಾಮಾಣಿಕವಾಗಿ ಹೇಳೋದಾದ್ರೆ ಈಗಿನ ಈ ಸ್ಥಾನಕ್ಕೆ ನಾನು ಖುಷಿಯಾಗಿದ್ದೇನೆ. ಒತ್ತಡವಿಲ್ಲದ ಕ್ರಿಕೆಟ್ ಬೋರಿಂಗ್. ನೀವು ಕ್ರಿಕೆಟರ್ ಆಗಿದ್ದು ಪರೀಕ್ಷೆಗೆ ಒಳಗಾಗುತ್ತಿರಬೇಕಾಗುತ್ತದೆ,' ಎಂದಿದ್ದಾರೆ.

Story first published: Saturday, October 24, 2020, 9:51 [IST]
Other articles published on Oct 24, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+