ವಿಶ್ವಕಪ್: ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 62 ರನ್ ಗಳ ಜಯ
ಹ್ಯಾಮಿಲ್ಟನ್, ಫೆ.15: ವಿಶ್ವಕಪ್ ಟೂರ್ನಿ 2015ರ ಎರಡನೇ ದಿನದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿ ಹಾಕುವಲ್ಲಿ ಜಿಂಬಾಬ್ವೆ ಯಶಸ್ಸು ಸಾಧಿಸಿದೆ. ಎಬಿ ಡಿವಿಲೆಯರ್ಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದರೂ ಬೃಹತ್ ಮೊತ್ತ ಕಲೆ ಹಾಕಿತು.
ಜಿಂಬಾಬ್ವೆ ಕೂಡಾ ಉತ್ತಮ ಚೇಸ್ ಮಾಡಿದರೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 62 ರನ್ ಗಳ ಜಯ ಲಭಿಸಿದೆ.
ಜಿಂಬಾಬ್ವೆ ನಾಯಕ ಎಲ್ಟಾನ್ ಚಿಂಗುಬರ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿದೆ. ನಿಧಾನಗತಿಯ ಪಿಚ್ ನಲ್ಲಿ ಕರಾರ್ ವಾಕ್ ಬೌಲಿಂಗ್ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿರುವ ಜಿಂಬಾಬ್ವೆ ಉತ್ತಮ ಪ್ರದರ್ಶನ ನೀಡಿತು. ಅದರೆ, ಡೇವಿಡ್ ಮಿಲ್ಲರ್ ಹಾಗೂ ಡುಮಿನಿ ಅಜೇಯ ಶತಕ ಪಂದ್ಯದ ಗತಿ ಬದಲಿಸಿತು.

ಜಿಂಬಾಬ್ವೆ ಇನ್ನಿಂಗ್ಸ್:
* ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 62 ರನ್ ಗಳ ಜಯ ಲಭಿಸಿದೆ.
* 262/8 (45 ಓವರ್ಸ್) ಜಿಂಬಾಬ್ವೆ ರನ್ ಗತಿ ಬ್ರೇಕ್ ಹಾಕಿದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್.
* ಇಮ್ರಾನ್ ತಾಹೀರ್ 10-0-36-3 ಉತ್ತಮ ಬೌಲಿಂಗ್.
* 80 ರನ್ ಗಳಿಸಿ ಮಸಕಡ್ಜ ಔಟ್(74 ಎ 8x4, 2x6) 34 ಓವರ್ಸ್ 194/3
* 189/2 (32) ಜಿಂಬಾಬ್ವೆ ರನ್ ಚೇಸಿಂಗ್ ಜಾರಿ.ಮಸಕಡ್ಜ ಉತ್ತಮ ಆಟ.
* ಛಾಮು ಚಿಭಾಭಾ 64 ರನ್ ಗಳಿಸಿ ತಾಹಿರ್ ಸ್ಪಿನ್ ಗೆ ಔಟ್. 27 ಓವರ್ಸ್ 161/2.
* ಮಸಕಡ್ಜ ಕೂಡಾ ಅರ್ಧ ಶತಕ ದಾಖಲು 48 ಎಸೆತ 51 ರನ್ (5X4, 6x2)
* ಛಾಮು ಚಿಭಾಭಾ 51 ರನ್ ಗಳಿಸಿ ಉತ್ತಮವಾಗಿ ರನ್ ಚೇಸ್ ಮಾಡುತ್ತಿದ್ದಾರೆ.

* ಜಿಂಬಾಬ್ವೆ ನೂರು ರನ್ ದಾಟಿದ್ದಕ್ಕೆ ಅಭಿಮಾನಿಗಳ ಸಂಭ್ರಮ. ಈಗ 19 ಓವರ್ ಗಳಲ್ಲಿ 101/1.
* ಛಾಮು ಚಿಭಾಭಾ 6 ಬೌಂಡರಿ ಬಾರಿಸಿ ಬ್ಯಾಟಿಂಗ್, ಮಸಡಕ್ಜ ಕ್ರೀಸಿಗೆ ಎಂಟ್ರಿ.
* ಉತ್ತಮ ಆರಂಭ ಪಡೆದ ಜಿಂಬಾಬ್ವೆಗೆ ಮೊದಲ ಆಘಾತ ಸಿಕಂದರ್ ರಾಜಾ 5 ರನ್ ಗಳಿಸಿ ಔಟ್
* 6 ಓವರ್ ಗಳಲ್ಲಿ 32 ರನ್ ಗಳಿಸಿದ ಜಿಂಬಾಬ್ವೆಗೆ ಮೊದಲ ಆಘಾತ ನೀಡಿದ ಫಿಲ್ಯಾಂಡರ್.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:
* ಆರಂಭಿಕ ಅಘಾತದ ನಂತರವೂ ಚೇತರಿಸಿಕೊಂಡು 50 ಓವರ್ ಗಳಲ್ಲಿ 339/4 ಗಳಿಸಿದ ದಕ್ಷಿಣ ಆಫ್ರಿಕಾ.
* ಜೆಪಿ ಡುಮಿನಿ 115 ರನ್ (100 ಎ, 9x4, 3x3), ಡೇವಿಡ್ ಮಿಲ್ಲರ್138 ರನ್ (92 ಎ, 7x4,9x6).
* ಡೇವಿಡ್ ಮಿಲ್ಲರ್ ಅಮೋಘ ಶತಕ 81 ಎಸೆತಗಳಲ್ಲಿ 100 ರನ್(3X4, 6X6)
*44 ಓವರ್ ಅಂತ್ಯಕ್ಕೆ 228/4. ಜೆಪಿ ಡುಮಿನಿ 84 ಹಾಗೂ ಡೇವಿಡ್ ಮಿಲ್ಲರ್ 63 ಅರ್ಧ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
* 43 ಓವರ್ ಗಳಲ್ಲಿ 230/4 ಗಳಿಸಿರುವ ದಕ್ಷಿಣ ಆಫ್ರಿಕಾ
* 34.4 ಓವರ್ ಗಳಲ್ಲಿ 15/4 ಮಿಲ್ಲರ್ 36, ಡುಮಿನಿ 39.

* ಮಿಲ್ಲರ್ ಹಾಗೂ ಡುಮಿನಿ ಮೇಲೆ ಜೊತೆಯಾಟದ ಹೊಣೆ ಬಿದ್ದಿದೆ. ದಕ್ಷಿಣ ಆಫ್ರಿಕಾ 31ಓವರ್ ಗಳಲ್ಲಿ 133/4 ಸ್ಕೋರ್.
* ಫಾಫ್ ಡು ಪ್ಲೆಸಿಸ್ 24 ಹಾಗೂ ಎಬಿ ಡಿವಿಲೆಯರ್ಸ್ 25 ರನ್ ಗಳಿಸಿದರು.
* ಆರಂಭಿಕ ಆಟಗಾರರು ಉತ್ತಮ ಆರಂಭ ನೀಡಲಿಲ್ಲ. ಡಿ ಕಾಕ್ 7 ರನ್ ಹಾಗೂ ಹಶೀಂ ಅಮ್ಲಾ 11 ರನ್ನಿಗೆ ಔಟ್.

ಜಿಂಬಾಬ್ವೆ: ಎಲ್ಟಾನ್ ಚಿಂಗುಂಬುರಾ (ನಾಯಕ), ಸಿಕಂದರ್ ರಾಜಾ, ತೆಂಡೈ ಛಾಟರಾ, ಛಾಮು ಚಿಭಾಭಾ, ಕ್ರೇಗ್ ಇರ್ವೀನ್, ತಫಡ್ಜ್ವಾ ಕಮುಂಗೋಜಿ, ಹ್ಯಾಮಿಲ್ಟನ್ ಮಸಕಡ್ಜ, ಸೊಲೊಮನ್ ಮಿರ್, ತಿನಾಶೆ ಪನ್ಯಾಂಗರ, ಬ್ರೆಂಡನ್ ಟ್ರೇಲರ್ (ವಿಕೆಟ್ ಕೀಪರ್), ಸೀನ್ ವಿಲಿಯಮ್ಸ್
ದಕ್ಷಿಣ ಆಫ್ರಿಕಾ: ಎಬಿ ಡಿ ವಿಲ್ಲೆಯರ್ಸ್(ನಾಯಕ), ಹಶೀಂ ಆಮ್ಲಾ (ಉಪ ನಾಯಕ), ಫಾಫ್ ಡು ಪ್ಲೆಸಿಸ್, ಫರ್ಹಾನ್ ಬೆಹರ್ದೀನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜೆಪಿ ಡುಮುನಿ, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ವಿಡಿ ಫಿಲಾಂಡರ್,ಡೆಲ್ ಸ್ಟೇನ್.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications