Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ವಿಶೇಷ ವ್ಯಕ್ತಿತ್ವದಿಂದ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

ICC World Cup 2019 : ರೋಹಿತ್ ನಡೆಗೆ ಎಲ್ಲೆ ಸಿಗುತ್ತಿದೆ ಪ್ರಶಂಸೆ..? | Rohit Sharma | Oneindia Kannada
Cricket World Cup 2019: Rohit Sharma wins heart with incredible gesture

ಬರ್ಮಿಂಗ್‌ಹ್ಯಾಮ್, ಜುಲೈ 3: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಮಂಗಳವಾರ (ಜುಲೈ 2) ಭಾರತ vs ಬಾಂಗ್ಲಾದೇಶ ವೀಶ್ವಕಪ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮ್ ರೋಹಿತ್ ಶರ್ಮಾ ವಿಶೇಷ ವ್ಯಕ್ತಿತ್ವಕ್ಕಾಗಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು. ತಾನು ಸಿಕ್ಸ್‌ ಬಾರಿಸಿದ ಚೆಂಡು ತಾಗಿ ಗಾಯಗೊಂಡ ಅಭಿಮಾನಿಗೆ ರೋಹಿತ್, ಸಹಿಯಿರುವ ಹ್ಯಾಟ್‌ ನೀಡಿ ಕಾಳಜಿ ತೋರಿಕೊಂಡರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಸಿಸಿ ವಿಶ್ವಕಪ್ 2019ರ 40ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ 92 ಎಸೆತಗಳಿಗೆ ರೋಹಿತ್ 104 ರನ್ ಸಿಡಿಸಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 77, ರಿಷಬ್ ಪಂತ್ 48, ಎಂಎಸ್ ಧೋನಿ 35 ರನ್ ಕೊಡುಗೆಯಿತ್ತಿದ್ದರಿಂದ ಭಾರತ ಈ ಪಂದ್ಯವನ್ನು 28 ರನ್‌ಗಳಿಂದ ಗೆದ್ದುಕೊಂಡಿತಲ್ಲದೆ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ರೋಹಿತ್ ಬಾರಿಸಿದ 104 ರನ್‌ನಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳೂ ಸೇರಿದ್ದವು. ಈ 5 ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ಭಾರತೀಯ ಅಭಿಮಾನಿಯೊಬ್ಬಳ ಮುಖಕ್ಕೆ ಬಡಿದಿತ್ತು. ಸುದ್ದಿ ತಿಳಿದ ರೋಹಿತ್ ಪಂದ್ಯದ ಬಳಿಕ ಆ ಅಭಿಮಾನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬ್ಯಾಟ್ಸ್ಮನ್‌ಗಳು ಸಿಕ್ಸ್ ಬಾರಿಸಿದಾಗ ಹೆಚ್ಚಿನ ಸಾರಿ ಪುರುಷ ಅಭಿಮಾನಿಗಳು ಚೆಂಡನ್ನು ಕ್ಯಾಚ್ ಮಾಡುತ್ತಾರೆ. ಆದರೆ ಅಭಿಮಾನಿ ಕ್ಯಾಚ್ ಮಾಡಲು ವಿಫಲನಾದಾಗ ಚೆಂಡು ಬಂದು ಮೀನಾ ಎಂಬ ಮಹಿಳಾ ಅಭಿಮಾನಿಯ ಮುಖಕ್ಕೆ ಬಡಿದಿತ್ತು. ಗಾಯಗೊಂಡ ಅಭಿಮಾನಿಯನ್ನು ಮಾತನಾಡಿದ ರೋಹಿತ್ ಅವರಿಗೆ ತನ್ನ ಸಹಿಯಿದ್ದ ಹಳದಿ ಬಣ್ಣದ ಕ್ಯಾಪ್ ನೀಡಿದ್ದಾರೆ.

Story first published: Wednesday, July 3, 2019, 11:05 [IST]
Other articles published on Jul 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+