ವಿಶ್ವಕಪ್ ಮೊದಲ ಪಂದ್ಯಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಗಾಯಾಳು?

ಲಂಡನ್, ಜೂನ್ 02: ವಿಶ್ವಕಪ್ ಕ್ರಿಕೆಟ್ 2019ರ ಮೊದಲ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹೆಬ್ಬರಳಿಗೆ ಗಾಯ ಮಾಡಿಕೊಂಡ ಸುದ್ದಿ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನಾಡಲಿದ್ದು, ಇದಕ್ಕಾಗಿ, ಅಭ್ಯಾಸ ನಿರತರಾಗಿದ್ದಾಗ ಕೊಹ್ಲಿ ಬಲಗೈ ಹೆಬ್ಬರಳಿಗೆ ಗಂಭೀರ ಗಾಯವಾಗಿತ್ತು.
ಸೌಥಾಂಪ್ಟನ್ನಲ್ಲಿ ಶನಿವಾರ ಭಾರತ ತಂಡದ ನೆಟ್ ಅಭ್ಯಾಸದ ವೇಳೆ ಕೊಹ್ಲಿ ಅವರ ಬಲಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರ ಬಗ್ಗೆ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿತ್ತು. ಕೊಹ್ಲಿ ಹೆಬ್ಬರಳಿಗೆ ಮ್ಯಾಜಿಕ್ ಸ್ಪ್ರೇ ಹಾಕಿ, ಟೇಪ್ಸುತ್ತಲಾಗಿತ್ತು. ಕೊಹ್ಲಿ ಹಾಗೂ ಫಿಜಿಯೋ ಪ್ಯಾಟ್ರಿಕ್ ಫರ್ಹಾಟ್ ಜತೆಗಿನ ಚಿತ್ರ ನೋಡಬಹುದು.
ಅಭ್ಯಾಸ ಮುಗಿದ ಬಳಿಕ ಕೂಡಾ ಅವರು ಕೊಹ್ಲಿ ಅವರು ಐಸ್ನೀರು ತುಂಬಿದ ಕಪ್ ನಲ್ಲಿ ಹೆಬ್ಬರಳು ಅದ್ದಿ ಇಟ್ಟುಕೊಂಡ ಚಿತ್ರವೂ ಹೊರಬಂದಿತ್ತು. ಕೊಹ್ಲಿ ಅವರ ಹೆಬ್ಬರಳಿಗೆ ಯಾವ ಸ್ವರೂಪದ ಗಾಯವಾಗಿದೆ ಎಂಬುದರ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿರಲಿಲ್ಲ.

ಆದರೆ, ಭಾನುವಾರ(ಜೂನ್ 02) ಮಧ್ಯಾಹ್ನದ ವೇಳೆ ಈ ಬಗ್ಗೆ ಸ್ಪಷ್ಟಣೆ ಸಿಕ್ಕಿದ್ದು, ಕೊಹ್ಲಿಗೆ ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವಾಡಲು ಯಾವುದೇ ಅಡ್ಡಿಯಿಲ್ಲ ಎಂಬ ಸುದ್ದಿ ಬಂದಿದೆ.
ಭಾರತದ ಆಲ್ ರೌಂಡರ್ ವಿಜಯ್ ಶಂಕರ್ಅವರು ಅಭ್ಯಾಸದ ವೇಳೆ ಮೊಣಕೈಗೆ ಗಾಯ ಮಾಡಿಕೊಂಡಿದ್ದರು.ಎಡಭುಜಕ್ಕೆ ಗಾಯ ಮಾಡಿಕೊಂಡಿರುವ ಕೇದಾರ್ ಜಾಧವ್ ಇನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಆರ್ ಸಿಬಿ ಪರ ಆಡಿದ್ದ ವೇಗಿ ನವದೀಪ್ ಸೈನಿ ಅವರನ್ನು ಸ್ಟ್ಯಾಂಡ್ ಬೈ ಬೌಲರ್ ಆಗಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸೈನಿ ಕೂಡಾ ಇಂಗ್ಲೆಂಡಿಗೆ ಬಂದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications