ರಾಧಿಕಾ ಶರತ್ ಪುತ್ರಿ ಜೊತೆ ಕ್ರಿಕೆಟರ್ ಅಭಿಮನ್ಯು ಮಿಥುನ್ ಮದುವೆ
ಚೆನ್ನೈ, ಸೆ.11: ಬೆಂಗಳೂರಿನ ಪೀಣ್ಯ ನಿವಾಸಿ, ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ದಕ್ಷಿಣ ಭಾರತದ ನಟಿ ರಾಧಿಕಾ ಶರತ್ ಕುಮಾರ್ ಅವರ ಪುತ್ರಿ ಜೊತೆ ಮಿಥುನ್ ಅವರ ಮದುವೆ ನೆರವೇರಲಿದೆ.
ಈ ಶುಭ ಸಮಾಚಾರವನ್ನು ರಾಧಿಕಾ ಶರತ್ ಕುಮಾರ್ ಅವರ ಪತಿ ಶರತ್ ಕುಮಾರ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ರಾಧಿಕಾ ಅವರ ಪುತ್ರಿ ರಾಯನೆ ಹಾಗೂ ಮಿಥುನ್ ಅವರ ನಿಶ್ಚಿತಾರ್ಥ ಸಮಾರಂಭ ಸೆಪ್ಟೆಂಬರ್ 23ರಂದು ಚೆನ್ನೈನಲ್ಲಿ ನಡೆಯಲಿದೆ.
ಪ್ರೀತಿ ಪ್ರೇಮ ಈಗ ಮದುವೆ: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಕ್ರಿಕೆಟ್ ಪಂದ್ಯವೊಂದರ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗ ಮದುವೆ ಹಸೆಮಣೆ ತನಕ ತಲುಪಿದೆ. ಗಾಸಿಪ್ ಅಂಕಣಗಳಲ್ಲೂ ಇಬ್ಬರ ಬಗ್ಗೆ ಆಗಾಗ ಸುದ್ದಿ ಹಬ್ಬುತ್ತಿತ್ತು.
ರಾಧಿಕಾ ಶರತ್ ಕುಮಾರ್ ಅವರ ಪೂರ್ವ ಪತಿ ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರಿಗೆ ನಟ ಶರತ್ ಕುಮಾರ್ ಅವರು ಮಲ ತಂದೆಯಾಗಬೇಕು.

ಕರ್ನಾಟಕದ ರಣಜಿ ಆಟಗಾರ ಅಭಿಮನ್ಯು ಮಿಥುನ್
ಕರ್ನಾಟಕದ ರಣಜಿ ಆಟಗಾರ ಅಭಿಮನ್ಯು ಮಿಥುನ್ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆಗಿ ಬೆಳೆದವರು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೂಡಾ ಆಡಿದ್ದಾರೆ.
ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ
25 ವರ್ಷದ ಮಿಥುನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡುವ ಮೂಲಕ ಟೀಂ ಇಂಡಿಯಾದ ಪ್ರತಿನಿಧಿಯಾಗಿದ್ದರು. ಐಪಿಎಲ್ ಮೂಲಕ ರಾಧಿಕಾ ಅವರ ಪುತ್ರಿ ಪರಿಚಯವಾಯಿತು.
ಬಿಜಾಪುರ ಬುಲ್ಸ್ ಗೆ ಕಂಗ್ರಾಟ್ಸ್ ಹೇಳಿದ ರಯಾನೆ
ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ಅಭಿಮನ್ಯು ಮಿಥುನ್ ಆಡುತ್ತಿರುವ ಬಿಜಾಪುರ್ ಬುಲ್ಸ್ ತಂಡಕ್ಕೆ ಕಂಗ್ರಾಟ್ಸ್ ಹೇಳಿದ ರಯಾನೆ
ಮದುವೆ ಬಗ್ಗೆ ರಾಧಿಕಾ ಶರತ್ ಟ್ವೀಟ್
ಮದುವೆ ಬಗ್ಗೆ ರಾಧಿಕಾ ಶರತ್ ಟ್ವೀಟ್ ಮಾಡಿ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದಿದ್ದಾರೆ.
ಅಮ್ಮನ ಮುದ್ದಿನ ಮಗಳು ರಯಾನೆ
ಅಮ್ಮನ ಮುದ್ದಿನ ಮಗಳು ರಯಾನೆ, ಅಡುಗೆ ಹಾಗೂ ಕ್ರಿಕೆಟ್ ನನಗಿಷ್ಟ ಎಂದು ಹೇಳುತ್ತಾರೆ.

ನಟ ಶರತ್ ಕುಮಾರ್ ರಿಂದ ಮದುವೆ ಬಗ್ಗೆ
ನಟ ಶರತ್ ಕುಮಾರ್ ರಿಂದ ತಮ್ಮ ಮಲ ಮಗಳ ಮದುವೆ ನಿಶ್ಚಿತಾರ್ಥದ ಬಗ್ಗೆ ಪ್ರಕಟಣೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications