For Quick Alerts
ALLOW NOTIFICATIONS  
For Daily Alerts
 

Ambati Rayudu: ರಾಜಕೀಯದಲ್ಲಿ ಅಂಬಟಿ ರಾಯಡು ಮಂಗನಾಟ- ಪಕ್ಷದಿಂದ ಪಕ್ಷಕ್ಕೆ ಜಿಗಿದಾಟ

ರಾಜಕೀಯ ಪಕ್ಷಕ್ಕೆ ಎಂಟ್ರಿ ನೀಡುತ್ತಿದಂತೆ ಅಂಬಟಿ ರಾಯುಡು ಟೊಂಗೆ ಯಿಂದ ಹಾರಿದ ಮಂಗನಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಲೇ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಆಗಿದ್ದೇ ಆದಲ್ಲಿ, ಕೆಂಪು ಗೂಟದ ಕಾರನ್ನು ಏರುವ ಕನಸು ಕಾಣುತ್ತಿದ್ದಾರೆ. ಅಂಬಟಿ ರಾಯುಡು ಅವರ ಮನಸ್ಸಿನಲ್ಲಿರುವುದನ್ನು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ. ಆದರೆ ಹಾವ ಭಾವವನ್ನು ನೋಡಿದರೆ ಅಂಬಟಿ ರಾಯುಡುಗೆ ರಾಜಕೀಯ ಗೀಳು ಹಿಡಿದಂತೆ ಕಾಣುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ವೈಎಸ್‌ ಜಗನ್‌ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷವನ್ನು ಅಂಬಟಿ ರಾಯುಡು ಸೇರಿ ಸದ್ದು ಮಾಡಿದ್ದರು. ಪಕ್ಷ ಸೇರಿದ್ದ ಬೆರಳೇಣಿಕೆ ದಿನದಲ್ಲೇ ಅಂಬಟಿ ಪಕ್ಷ ಬಿಟ್ಟು. ರಾಜಕೀಯದಲ್ಲಿ ಕೊಂಚ ಬ್ರೇಕ್‌ನ ಅವಶ್ಯಕತೆ ಇದೆ ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದರು.

Cricketer Ambati Rayudu Meets Pawan Kalyan, likely to join Jana Senna

ಇದಾದ ಕೆಲವೇ ಗಂಟೆಗಳಲ್ಲಿ ದುಬೈನಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಜೆರ್ಸಿ ತೊಟ್ಟು ಅಖಾಡಕ್ಕೆ ಇಳಿಯುವುದಾಗಿ ಅಂಬಟಿ ತಿಳಿಸಿದ್ದರು. ಈ ವೇಳೆ ಕ್ರೀಡೆ ಹಾಗೂ ರಾಜಕೀಯ ಎರಡು ದೋಣಿಯಲ್ಲಿ ಏಕಕಾಕಲ್ಲದಲ್ಲಿ ಪ್ರಯಾಣ ಕಷ್ಟ ಎನ್ನುವುದನ್ನು ಅರಿತು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದರು. ಆದರೆ ಈಗ ಅಂಬಟಿ ಮತ್ತೊಮ್ಮೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಮೊದಲು ವೈಸಿಪಿಸಿಆರ್‌ ಸೇರಿ ನಂತರ ಜನಸೇನೆ ಸೇರಲು ತಯಾರಿ ನಡೆಸಿದ್ದರು. ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಇತ್ತೀಚೆಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದರು. ವೈಸಿಪಿ ಸೇರಿದ ಒಂದೇ ವಾರದಲ್ಲಿ ರಾಜೀನಾಮೆ ನೀಡಿದ ಅಂಬಟಿ ರಾಯುಡು ಸ್ವಲ್ಪ ಕಾಲ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರು ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟಿಗರು ರಾಜಕೀಯಕ್ಕೆ ಬರುವುದು ಸಿನಿಮಾ ತಾರೆಯರಂತೆಯೇ. ಅನೇಕ ಕ್ರಿಕೆಟಿಗರು ರಾಜಕೀಯ ಪ್ರವೇಶಿಸಿ ಯಶಸ್ವಿಯಾದರು. ಅವರಂತೆ ರಾಜಕೀಯ ಪ್ರವೇಶಕ್ಕೆ ಸಿದ್ಧರಾಗಿರುವ ಅಂಬಟಿ ರಾಯುಡು ಕೂಡ ಅದೇ ರೀತಿ ರಾಜಕೀಯ ಪಿಚ್‌ನಲ್ಲಿ ಮಿಂಚುತ್ತಾರೆ ಎಂದು ಹಲವರು ಭಾವಿಸಿದ್ದರು. ಐಪಿಎಲ್‌ಗೆ ವಿದಾಯ ಹೇಳಿದ ಕೆಲವೇ ದಿನಗಳಲ್ಲಿ ರಾಯುಡು ರಾಜಕೀಯಕ್ಕೆ ಬರಲು ಗ್ರೌಂಡ್ ವರ್ಕ್ ಮಾಡಿದ್ದರು. ಎಪಿಯಲ್ಲಿ ಆಡಳಿತಾರೂಢ ವೈಸಿಪಿ ಪರವಾಗಿ ರಾಜಕೀಯ ಆಟ ಆಡಲು ಸಿದ್ಧರಾಗಿದ್ದರು. ಎಪಿ ಸರ್ಕಾರ ಆರಂಭಿಸಿರುವ ಔಧಮ್ ಆಂಧ್ರಕ್ಕೆ ರಾಯುಡು ಬ್ರಾಂಡ್ ಅಂಬಾಸಿಡರ್ ಆಗಿದ್ದರು.

Cricketer Ambati Rayudu Meets Pawan Kalyan, likely to join Jana Senna

ಕೆಲವೇ ದಿನಗಳಲ್ಲಿ ಅಂಬಟಿ ರಾಜಕೀಯ ಇನ್ನಿಂಗ್ಸ್ ಮುರಿದುಬಿತ್ತು. ವೈಸಿಪಿ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮವೋ ಅಥವಾ ಅವರು ನಿರೀಕ್ಷಿಸಿದ ಸ್ಥಾನ ಸಿಗಲಿಲ್ಲವೋ ಗೊತ್ತಿಲ್ಲ, ಆದರೆ ರಾಯುಡು ಪಕ್ಷಕ್ಕೆ ಸೇರಿದ ಹತ್ತೇ ದಿನಗಳಲ್ಲಿ ನಿವೃತ್ತರಾದರು. ಆದರೆ ಒಳಗೊಳಗೆ ಏನಾಯ್ತು? ಆದರೆ ರಾಜಕೀಯ ಪಂದ್ಯ ಆರಂಭವಾಗುವ ಮುನ್ನವೇ ಜಗನ್ ಟೀಂ ತೊರೆಯುವುದಾಗಿ ಅಂಬಟಿ ಘೋಷಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಅಂಬಟಿ ರಾಯುಡು ತಾವು ಪಕ್ಷ ಬಿಟ್ಟ ಬಗ್ಗೆ ತಮ್ಮ ಸಮರ್ಥನೆಯನ್ನು ಸಮಾಜಿಕ ತಾಣದಲ್ಲಿ ಅಪ್‌ ಲೋಡ್ ಮಾಡಿದ್ದಾರೆ. ಇದರಲ್ಲಿ ಅವರು, ನಾನು ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದೇನೆ. ಆದರೆ ಕೆಲವು ಕಾರಣಗಳಿಂದ ವೈಎಸ್‌ಆರ್‌ಸಿಪಿ ಪಕ್ಷದೊಂದಿಗೆ ನನ್ನ ಕನಸನ್ನು ನನಸಾಗಿಸಲು ಸಾಧ್ಯವಾಗಲಿಲ್ಲ ಎಂದು ನಾನು ಭಾವಿಸಿದೆ. ಆದರೆ, ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುತ್ತಿಲ್ಲ. ನನ್ನ ಸಿದ್ಧಾಂತಗಳು ಮತ್ತು ವೈಎಸ್‌ಆರ್‌ಸಿಪಿ ಪಕ್ಷದ ಸಿದ್ಧಾಂತಗಳು ಹೊಂದಿಕೆಯಾಗದ ಕಾರಣ, ಯಾವುದೇ ಸ್ಥಾನದಿಂದ ಚುನಾವಣೆಗೆ ಸ್ಪರ್ಧಿಸುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಕ್ರಿಕೆಟಿಗರು ಬರೆದಿದ್ದಾರೆ.

ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳು ಆರ್ ಪವನ್ ಅವರ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕಾದರೆ ಅಣ್ಣನನ್ನು ಭೇಟಿಯಾಗಬೇಕು ಎಂದು ಹೇಳಿದರು. ಅದೇನೇ ಇರಲಿ, ನಾನು ಪವನ್ ಅಣ್ಣನನ್ನು ಭೇಟಿ ಮಾಡಿದ್ದೇನೆ ಮತ್ತು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಈ ಸಮಯದಲ್ಲಿ, ನಾವು ಜೀವನ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ನನ್ನ ಮತ್ತು ಪವನ್ ಅಣ್ಣನ ವಿಚಾರಧಾರೆ ತುಂಬಾ ಸಾಮ್ಯವಾಗಿದೆ ಎಂದು ಹೇಳಲು ಬಯಸುತ್ತೇನೆ. ಅವರೂ ನನ್ನಂತೆಯೇ ಯೋಚಿಸುತ್ತಾರೆ. ಅವರನ್ನು ಭೇಟಿಯಾಗಿದ್ದು ನನಗೆ ಸಂತೋಷವಾಯಿತು. ಆದರೂ ಈ ಬಾರಿ ಕ್ರಿಕೆಟ್‌ಗಾಗಿ ದುಬೈಗೆ ಹೋಗುತ್ತೇನೆ, ಆದರೆ ಆಂಧ್ರಪ್ರದೇಶದ ಜನರ ಸೇವೆಗೆ ನಾನು ಯಾವಾಗಲೂ ಇರುತ್ತೇನೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

Story first published: Wednesday, January 10, 2024, 15:32 [IST]
Other articles published on Jan 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+