Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಟದ ಮಧ್ಯೆ ಹೃದಯಾಘಾತದಿಂದ ಪಿಚ್‌ನಲ್ಲೇ ಪ್ರಾಣಬಿಟ್ಟ ಬ್ಯಾಟ್ಸ್‌ಮನ್: ವಿಡಿಯೋ

Cricketer dies of heart attack during live match in Pune

ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಆಟಗಾರ ಪಿಚ್‌ನಲ್ಲಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೃದಯಾಘಾತದಿಂದ ಆಟಗಾರ ಮೃತಪಟ್ಟಿರುವುದು ಬಳಿಕ ಖಚಿತವಾಗಿದೆ.

ಮಹಾರಾಷ್ಟ್ರದ ಪುಣೆಯ ಜುನ್ನಾರ್ ಎಂಬಲ್ಲಿ ಸ್ಥಳೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಾನ್ ಸ್ಟ್ರೈಕ್‌ನಲ್ಲಿದ್ದ ಬ್ಯಾಟ್ಸ್‌ಮನ್ ಇದ್ದಕ್ಕಿದ್ದ ಹಾಗೆ ಸುಸ್ತಾದಂತೆ ಕೂತಿದ್ದಾರೆ. ಆದರೆ ಕೆಲವೇ ಸೆಕೆಂಡ್‌ಗಳಲ್ಲಿ ಆದ ಕುಳಿತಲ್ಲಿಂದಲೇ ಹಿಂದಕ್ಕೆ ಮಗುಚಿ ಬಿದ್ದಾರೆ. ತಕ್ಷಣವೇ ಅಲ್ಲಿದ್ದ ಆಟಗಾರರು ಹೀಗೆ ಬಿದ್ದ ಆಟಗಾರನತ್ತ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಆತ ಉಸಿರು ಚೆಲ್ಲಿದ್ದ ಎಂದು ವರದಿಯಾಗಿದೆ.

ಈ ಆಘಾತಕಾರಿ ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿದು ಬಂದಿದೆ. ಆರೋಗ್ಯವಂತನಾಗಿದ್ದ ಆಟಗಾರ ಪ್ರಾಣ ಕಳೆದುಕೊಳ್ಳುವ ಮುನ್ನ ಕೆಲ ಸೆಕೆಂಡ್‌ಗಳ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸ್ಟ್ರೈಕ್‌ನಲ್ಲಿದ್ದ ಆಟಗಾರ ಈ ಘಟನೆಗೂ ಮುಂಚಿನ ಎಸೆತವನ್ನು ಬಾರಿಸಲು ವಿಫಲನಾಗಿ ಬೀಟ್ ಮಾಡದ್ದ. ಆಗ ನಾನ್‌ ಸ್ಟ್ರೈಕ್‌ನಲ್ಲಿ ನಿಂತಿದ್ದ ಈತ ಅಂಪಾಯರ್ ಬಳಿ ಎಷ್ಟು ಎಸೆತಗಳು ಬಾಕಿಯಿದೆ ಎಂದು ಕೇಳಿ ನಂತರ ಸ್ಟ್ರೈಕ್‌ನಲ್ಲಿ ನಿಂತಿದ್ದ ಆಟಗಾರನಿಗೆ ಮೂರು ಎಸೆತಗಳಿವೆ ಎಂಬ ಸೂಚನೆ ನೀಡಿದ್ದರು. ಆದರೆ ಅದಾದ ಬಳಿಕ ತಕ್ಷಣವೇ ಕ್ರೀಸ್‌ನಲ್ಲಿ ಕುಳಿತ ಆಟಗಾರ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Story first published: Friday, February 19, 2021, 12:56 [IST]
Other articles published on Feb 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+