ಗಂಭೀರ್ ಹೆಸರಲ್ಲಿ ಮದ್ಯ ಮಾರಾಟ: ಕೋರ್ಟ್ ಮೆಟ್ಟಿಲೇರಿದ ಗೌತಮ್ ಗಂಭೀರ್
ನವದೆಹಲಿ, ಜೂನ್ 01 : ತನ್ನ ಹೆಸರನ್ನು ಬಳಸಿಕೊಂಡು ಬಾರ್ ಮಾಲೀಕರೊಬ್ಬರು ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬಾರ್ ಗೆ ಗೌತಮ್ ಗಂಭೀರ್ ಎಂದು ಟ್ಯಾಗ್ ಲೈನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನ್ನ ಹೆಸರನ್ನು ಬಳಿಸಿಕೊಂಡು ಮದ್ಯ ಮಾರಾಟಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಕ್ರಿಕೆಟಿಗ ಗೌತಮ್ ಗಂಭೀರ್ ನ್ಯಾಯಾಲಯವನ್ನು ಕೋರಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ಬಾರ್ ಮಾಲೀಕರಿಗೆ ನೋಟಿಸ್ ನೀಡಿದೆ.

ಬಾರ್ ಮಾಲೀಕನ ಪ್ರತಿಕ್ರಿಯೆ: ಇನ್ನು ಇತ್ತ ಗೌತಮ್ ಗಂಭೀರ್ ಬಾರ್ ಮಾಲೀಕನ ವಿರುದ್ಧ ಕೋರ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಬಾರ್ ಮಾಲೀಕ, "ನನ್ನ ಹೆಸರು ಸಹ ಗೌತಮ್ ಗಂಭೀರ್ ಆಗಿದ್ದು, ನಾನು ನನ್ನ ಹೆಸರಿನ ಟ್ಯಾಗ್ ಲೈನ್‍ನ್ನ ಬಾರ್ ಆಂಡ್ ರೆಸ್ಟೋರೆಂಟ್ ಗೆ ಇಟ್ಟು ವ್ಯವಹರಿಸುತ್ತಿದ್ದೇನೆ.
ಗಂಗೂರ್ ಮತ್ತು ಹವಾಲಾತ ಹೆಸರಿನ ಎರಡು ರೆಸ್ಟೋರೆಂಟ್ ಬಾರ್ ಗಳು ನನ್ನ ಹೆಸರಿನ ಟ್ಯಾಗ್ ಲೈನ್ ನೊಂದಿಗೆ ವ್ಯವಹರಿಸುತ್ತಿವೆ, ಅದರಲ್ಲಿ ಏನು ತಪ್ಪಿಲ್ಲ" ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications