Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗಂಡು ಮಗುವಿಗೆ ತಂದೆಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ

Cricketer Hardik Pandya Blessed With Baby Boy

ನವದೆಹಲಿ, ಜುಲೈ 30: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗಿದ್ದಾರೆ. ಮದುವೆಗೂ ಮುನ್ನವೇ ತನ್ನ ಗೆಳತಿ ನತಾಶಾ ಸ್ಟ್ಯಾಂಕೋವಿಕ್ ಗರ್ಭಿಣಿಯಾಗಿರುವ ವಿಚಾರವನ್ನು ಹಾರ್ದಿಕ್ ಬಹಿರಂಗಪಡಿಸಿದ್ದರು. ಹಾರ್ದಿಕ್ ಗೆಳತಿ ನತಾಶಾ ಸ್ಟ್ಯಾಂಕೋವಿಕ್ ಗಂಡು ಮಗುವಿಗೆ ಜನ್ಮವಿತ್ತಿರುವ ವಿಚಾರ ಈಗ ತಿಳಿದುಬಂದಿದೆ.

ಹಾರ್ದಿಕ್ ಪಾಂಡ್ಯ ತಾನು ತಂದೆಯಾಗುತ್ತಿರುವ ಖುಷಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಮಗುವಿನ ಪುಟಾಣಿ ಕೈಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಪಾಂಡ್ಯ, 'ನಮಗೆ ಗಂಡು ಮಗುವನ್ನು ದೇವರು ಆಶೀರ್ವದಿಸಿದ್ದಾರೆ,' ಎಂದು ಬರೆದುಕೊಂಡಿದ್ದಾರೆ.

ಕಳೆದ ಜೂನ್‌ನಲ್ಲೇ ಹಾರ್ದಿಕ್, ತನ್ನ ಗೆಳತಿ ನತಾಶಾ ಗರ್ಭಿಣಿಯಾಗಿರುವ ವಿಚಾರವನ್ನು ಸಾಮಾಜಿಕ ತಾಲತಾಣದಲ್ಲಿ ಬಹಿರಂಗಪಡಿಸಿದ್ದ ಹಾರ್ದಿಕ್ ತಾವು ಸರಳವಾಗಿ ಮದುವೆಯಾಗಿರುವುದಾಗಿ ತಿಳಿಸಿದ್ದರು. ನತಾಶಾ-ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥವಷ್ಟೇ ನಡೆದಿದ್ದರಿಂದ ಮದುವೆಗೂ ಮುನ್ನವೇ ಅಪ್ಪನಾಗುತ್ತಿರುವ ವಿಚಾರ ಬಹಿರಂಗಪಡಿಸಿದ್ದ ಪಾಂಡ್ಯ ಅವರನ್ನು ನೆಟ್ಟಿಗರು ಟೀಕಿಸಿದ್ದರು.

ಆದರೆ ಕ್ರಿಕೆಟ್ ರಂಗದ ಸೆಲೆಬ್ರಿಟಿಗಳಲ್ಲದೆ ಅನೇಕ ಖ್ಯಾತರು ಹಾರ್ದಿಕ್-ನತಾಶಾ ಜೋಡಿಗೆ ಶುಭ ಹಾರೈಸಿದ್ದರು. ಜನಪ್ರಿಯ ಆಟಗಾರನಾದರೂ ಪ್ರೀತಿ ವಿಚಾರದಲ್ಲಿ ದಿಟ್ಟತನ ಮೆರೆದಿದ್ದಕ್ಕೆ ಹಾರ್ದಿಕ್‌ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು.

Story first published: Thursday, July 30, 2020, 18:27 [IST]
Other articles published on Jul 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+