ದಿಶಾ ಚಾವ್ಲಾ ವರಿಸಿದ ಭಾರತದ ಕ್ರಿಕೆಟರ್ ಜಯಂತ್ ಯಾದವ್

ನವದೆಹಲಿ: ಭಾರತದ ಕ್ರಿಕೆಟರ್ ಜಯಂತ್ ಯಾದವ್ ಅವರು ಸುದೀರ್ಘ ಕಾಲದ ಗೆಳತಿ ದಿಶಾ ಚಾವ್ಲಾ ಅವರ ಜೊತೆ ದಾಂಪತ್ಯ ಬದುಕು ಆರಂಭಿಸಿದ್ದಾರೆ. 31ರ ಹರೆಯದ ಯಾದವ್ ತಾನು ವೈವಾಹಿಕ ಜೀವನ ಆರಂಭಿಸಿರುವ ವಿಚಾರವನ್ನು ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಮದುವೆಯ ಚಿತ್ರ ಹಂಚಿಕೊಂಡಿರುವ ಜಯಂತ್ ಯಾದವ್, 'ಬೆಟರ್ ಟುಗೆದರ್' ಎಂದು ಬರೆದುಕೊಂಡಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಯಾದವ್ ನಾಲ್ಕು ಟೆಸ್ಟ್, ಒಂದು ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಬಲಗೈ ಆಫ್ ಬ್ರೇಕ್ ಬೌಲರ್ ಆಗಿರುವ ಜಯಂತ್, 4 ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್, 1 ಏಕದಿನ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಯಾದವ್ ಏಕದಿನದಲ್ಲಿ ಪಾದಾರ್ಪಣೆ ಮಾಡಿದ್ದು ನ್ಯೂಜಿಲೆಂಡ್ ವಿರುದ್ಧ 2016ರಲ್ಲಿ. ಐಪಿಎಲ್‌ನಲ್ಲಿ ಯಾದವ್ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ಜಯಂತ್ ಯಾದವ್ ಮದುವೆಯಾಗಿರುವ ಸಂಗತಿಯನ್ನು ಭಾರತದ ಸ್ಪಿನ್ನರ್ ಯುಜುವೇಂದ್ರ ಜಾಹಲ್ ಕೂಡ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ. 'ಅಭಿನಂದನೆಗಳು ಜಯಂತ್ ಮತ್ತು ದಿಶಾ' ಎಂದು ಚಾಹಲ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಚಾಹಲ್ ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications