ಬಹುಕಾಲದ ಪ್ರೇಯಸಿಯ ವರಿಸಿದ ಕ್ರಿಕೆಟರ್ ಜಯದೇವ್ ಉನಾದ್ಕತ್

ನವದೆಹಲಿ: ದೇಸಿ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ತಂಡ ಪ್ರತಿನಿಧಿಸುವ, ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿರುವ ಭಾರತದ ಬೌಲರ್ ಜಯದೇವ್ ಉನಾದ್ಕತ್ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಬಹುಕಾಲದ ಪ್ರೇಯಸಿ ರಿನ್ನಿ ಅವರನ್ನು ಉನಾದ್ಕತ್ ವರಿಸಿದ್ದಾರೆ.
ಜಯದೇವ್ ಉನಾದ್ಕತ್ ಮತ್ತು ರಿನ್ನಿ ವಿವಾಹ ಮಂಗಳವಾರ (ಫೆಬ್ರವರಿ 2) ಗುಜರಾತ್‌ನ ಆನಂದ್ ಸಭಾಭವನದಲ್ಲಿ ನಡೆದಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ 29ರ ಹರೆಯದ ಉನಾದ್ಕತ್, ರಿನ್ನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ತಾನು ಕಾಲಿರಿಸಿರುವ ವಿಚಾರವನ್ನು ಉನಾದ್ಕತ್ ಅವರು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದಾರೆ. ಮದುವೆ ಸಮಾರಂಭ ಮಾತ್ರ ಗುಟ್ಟಾಗಿ ನಡೆದಿದೆ. ಅಂದರೆ ಮದುವೆ ನಡೆದಿದ್ದೇ ಹೆಚ್ಚಿನವರಿಗೆ ಗೊತ್ತಿಲ್ಲ.
'ನಮ್ಮ ವಿವಾಹವು ಫೆಬ್ರವರಿ 2, 2021 ರಂದು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆತ್ಮೀಯ ಸಮಾರಂಭದಲ್ಲಿ ನಡೆಯಿತು ಎಂದು ಖುಷಿಯ ಸಂಗತಿ ಹಂಚಿಕೊಳ್ಳಲು ನಮಗೆ ಬಹಳ ಸಂತೋಷವಾಗುತ್ತಿದೆ,' ಎಂದು ಉನಾದ್ಕತ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಭಾರತ ಪರ ಉನಾದ್ಕತ್ 1 ಟೆಸ್ಟ್, 7 ಏಕದಿನ ಮತ್ತು 10 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 22 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications