ಅತಿರೇಕದ ವರ್ತನೆ ತೋರಿ ಶಿಕ್ಷೆಗೆ ಗುರಿಯಾದ ಕಗ್ಗಿಸೊ ರಬಾಡಾ

Posted By:
Cricketer Kagiso Rabada fined for Aggressive behavior

ಕೇಪ್ ಟೌನ್, ಫೆಬ್ರವರಿ 14: ದಕ್ಷಿಣಾ ಆಫ್ರಿಕಾ ಬೌಲರ್‌ ಕಗ್ಗಿಸೊ ರಬಾಡಾ ಅವರಿಗೆ ಅತಿರೇಕದ ವರ್ತನೆಗಾಗಿ ಐಸಿಸಿಯು ದಂಡ ವಿಧಿಸಿದೆ.

ಭಾರತ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಶಿಖರ್‌ ಧವನ್‌ ಅವರನ್ನು ಔಟ್ ಮಾಡಿದ್ದ ರಬಾಡಾ ಅತಿರೇಕದ ವರ್ತನೆ ತೋರಿದರು ಎಂದು ಪಂದ್ಯ ಶುಲ್ಕದ 15% ಹಾಗೂ ಒಂದು ಅಂತರರಾಷ್ಟ್ರೀಯ ವೈಯಕ್ತಿಕ ಪಾಯಿಂಟ್‌ ಅನ್ನು ಖಡಿತಗೊಳಿಸಲಾಗಿದೆ.

ಶಿಖರ್‌ ಧವನ್‌ ಅವರನ್ನು ಔಟ್ ಮಾಡಿದ ರಬಾಡಾ ಶಿಖರ್‌ ಧವನ್‌ಗೆ ಪೆವಿಲಿಯನ್‌ಗೆ ತೆರಳುವಂತೆ ಕೈಸನ್ನೆ ಮಾಡಿದ್ದರು. ಆದರೆ ಇದು ಐಸಿಸಿಯ ಆಟಗಾರರ ನೀತಿ ಸಂಹಿತೆಗೆ ವಿರುದ್ಧವಾದ ನಡುವಳಿಕೆ ಆದ ಕಾರಣ ರಬಾಡಾ ಅವರು ಶಿಕ್ಷಕೆಗೆ ಗುರಿಯಾಗಿದ್ದಾರೆ.

ರಬಾಡ ಈ ಮುಂಚೆ ಸಹ ಈ ರೀತಿ ಅಂಗಳದಲ್ಲಿ ಐಸಿಸಿ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಈವರೆಗೆ ರಬಾಡಾ ಅವರು ಐದು ಅಂತರರಾಷ್ಟ್ರೀಯ ವೈಯಕ್ತಿಕ ಪಾಯಿಂಟ್‌ಗಳನ್ನು ತಮ್ಮ ಅನುಚಿತ ವರ್ತನೆಯಿಂದಾಗಿ ಕಳೆದುಕೊಂಡಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, February 14, 2018, 17:18 [IST]
Other articles published on Feb 14, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ