ಅತಿಯಾ ಶೆಟ್ಟಿ ಚಿತ್ರಕ್ಕೆ ವಿಭಿನ್ನ ಕಾಮೆಂಟ್ ಹಾಕಿದ ಕೆಎಲ್ ರಾಹುಲ್

ನವದೆಹಲಿ: ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಚಿತ್ರ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಮ್ಯಾಗಝಿನ್ ಒಂದರಲ್ಲಿ ಪ್ರಕಟವಾಗಿದ್ದ ತನ್ನ ಮುಖಪುಟದ ಚಿತ್ರವನ್ನು ಇತ್ತೀಚೆಗೆ ಅತಿಯಾ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
ಅತಿಯಾ ಹಾಕಿಕೊಂಡಿದ್ದ ಈ ಚಿತ್ರಕ್ಕೆ ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ಕಾಮೆಂಟ್ ಮಾಡಿದ್ದಾರೆ. ನಟಿಯ ಚಿತ್ರಕ್ಕೆ ಕ್ರಿಕೆಟಿಗ ಕಾಮೆಂಟ್ ಮಾಡೋದು ವಿಶೇಷವೇನಲ್ಲ. ಆದರೆ ರಾಹುಲ್ ಮತ್ತು ಅತಿಯಾ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ಇಬ್ಬರ ಮಧ್ಯೆ ಪ್ರೇಮ ಸಂಬಂಧವೂ ಇದೆ ಅನ್ನೋ ಗುಸುಗುಸು ಕೂಡ ಇದೆ. ಇದೇ ಕಾರಣಕ್ಕೆ ರಾಹುಲ್ ಕಾಮೆಂಟ್ ವಿಶೇಷವೆನಿಸಿದೆ.

ಫೆಬ್ರವರಿ ತಿಂಗಳ ಫೆಮಿನಾ ಪತ್ರಿಕೆಯಲ್ಲಿ ಅತಿಯಾ ಮುಖಪುಟ ಪ್ರಕಟವಾಗಿತ್ತು. ಅದರ ಚಿತ್ರವನ್ನು ಅತಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕ್ರಿಷ್ಣ ಜಾಕಿಶ್ರಾಫ್ ಸೇರಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಮಧ್ಯೆ ರಾಹುಲ್, ಬೇಬಿ ಏಂಜಲ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.
ಚಿತ್ರದಲ್ಲಿ ಅತಿಯಾ ಮುದ್ದಾಗಿ ಕಾಣುತ್ತಿದ್ದರಿಂದ ರಾಹುಲ್, ಅತಿಯಾಳನ್ನು ಬೇಬಿ ಏಂಜಲ್‌ಗೆ ಹೋಲಿಸಿ ಕಾಮೆಂಟ್ ಮಾಡಿದ್ದರು. ಇದಕ್ಕೆ ಕೆಲವರು ರಾಹುಲ್ ಕಾಮೆಂಟ್‌ಗೆ ಛೇಡಿಸಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಎಲ್ ರಾಹುಲ್ ಮುಂಬರಲಿರುವ ಭಾರತ-ಇಂಗ್ಲೆಂಡ್ ಟಿ20ಐ ಸರಣಿಗಾಗಿ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications