ಕ್ರಿಕೆಟರ್ ಮನೋಜ್ ತಿವಾರಿ ಇನ್ಮುಂದೆ ಬೆಂಗಾಲ್‌ನ ಕ್ರೀಡಾ ಸಚಿವ

ಕೋಲ್ಕತ್ತಾ: ಟೀಮ್ ಇಂಡಿಯಾದ ಮಾಜಿ ಆಟಗಾರ ಮನೋಜ್ ಇವಾರಿ ಇನ್ಮುಂದೆ ಬೆಂಗಾಲ್ ರಾಜ್ಯದ ಕ್ರೀಡಾ ಸಚಿವರಾಗಿರಲಿದ್ದಾರೆ. ಮೇ 10ರ ಸೋಮವಾರ ತಿವಾರಿ ಬೆಂಗಾಲ್ ರಾಜ್ಯದ ಕ್ರೀಡಾ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ಮೇ 5ರಂದು ಬೆಂಗಾಲ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಮತಾ ಬ್ಯಾನರ್ಜೀ, ಮೇ 10ಕ್ಕೆ ಸಂಪುಟ ವಿಸ್ತರಿಸಿದ್ದರು. ಇದರಲ್ಲಿ ಒಟ್ಟು 43 ಸಚಿವರು ಮತ್ತು 19 ರಾಜ್ಯ ಸಚಿವರು ಸೇರಿದ್ದರು. ಅಧಿಕಾರ ವಹಿಸಿಕೊಂಡಿರುವವರಲ್ಲಿ ತಿವಾರಿಯೂ ಒಬ್ಬರು.
ಬೆಂಗಾಲ್ ರಾಜ್ಯಪಾಲ ಜಗದೀಪ್ ದಂಖರ್, ಸಮ್ಮುಖದಲ್ಲಿ ಕೋಲ್ಕತ್ತಾದ ರಾಜ್ ಭವನದಲ್ಲಿ ಸಂಪುಟ ವಿಸ್ತರಣೆಯ ಕಾರ್ಯಕ್ರಮ ನಡೆಯಿತು. ಕೋವಿಡ್-19 ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯಕ್ರಮ ನಡೆಯಿತು.
ಬಲಗೈ ಸ್ಪಿನ್ನರ್ ಆಗಿರುವ 35ರ ಹರೆಯದ ಮನೋಜ್ ತಿವಾರಿ ಭಾರತ ತಂಡದ ಪರ 12 ಏಕದಿನ ಪಂದ್ಯಗಳಲ್ಲಿ 5 ವಿಕೆಟ್, 98 ಐಪಿಎಲ್ ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದಾರೆ. ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡಿದ್ದ ತಿವಾರಿ, ಬಿಜೆಪಿ ಸ್ಪರ್ಧಿ ರತಿನ್ ಚಕ್ರವರ್ತಿ ಅವರನ್ನು ಸೋಲಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications