ಬಿಎಂಡಬ್ಲ್ಯೂ ನೂತನ ಕಾರು ಖರೀದಿಸಿದ ವೇಗಿ ಮೊಹಮ್ಮದ್ ಸಿರಾಜ್

ನವದೆಹಲಿ: ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಐಶಾರಾಮಿ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದಾರೆ. ಸಿರಾಜ್ ನೂತನ ಕಾರಿನ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಆಸ್ಟ್ರೇಲಿಯಾ ಪ್ರವಾಸಲ್ಲಿ ಪಾಲ್ಗೊಂಡಿದ್ದ ಟೀಮ್ ಇಂಡಿಯಾ ಅಲ್ಲಿ ಏಕದಿನ ಸರಣಿಯಲ್ಲಿ 2-1ರ ಸೋಲು, ಟಿ20 ಸರಣಿಯಲ್ಲಿ 2-1ರ ಗೆಲುವು ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಗೆಲುವು (1 ಪಂದ್ಯ ಡ್ರಾ) ಕಂಡಿತ್ತು. ಈ ಪ್ರವಾಸದಲ್ಲಿ ಸಿರಾಜ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು.
ಮುಖ್ಯವಾಗಿ ಟೆಸ್ಟ್ ಸರಣಿಯಲ್ಲಿ ಸಿರಾಜ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಟೆಸ್ಟ್ ಸರಣಿಯಲ್ಲಿ ಸಿರಾಜ್ 13 ವಿಕೆಟ್‌ಗಳೊಂದಿಗೆ ಗಮನ ಸೆಳೆದಿದ್ದರು. ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಮತ್ತು ಬ್ರಿಸ್ಬೇನ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಪ್ರೇಕ್ಷಕರಿಂದ ಸಿರಾಜ್ ನಿಂದಿಸಲ್ಪಟ್ಟಿದ್ದರು. ಆದರೂ ಸಿರಾಜ್ ಬೆಸ್ಟ್ ಬೌಲಿಂಗ್‌ಗಾಗಿ ಮಿಂಚಿದ್ದರು.
ಸಿರಾಜ್ ನೂತನ ಕಾರಿನ ವಿಡಿಯೋ ಹಾಕಿರುವ ಇನ್‌ಸ್ಟಾಗ್ರಾಮ್ ಸ್ಟೇಟನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ಸಾವನ್ನಪ್ಪಿದ್ದರು. ಆದರೆ ಸಿರಾಜ್ ಭಾರತಕ್ಕೆ ವಾಪಸ್ಸಾಗದೆ ತಂಡದ ಬೆಂಬಲಕ್ಕೆ ನಿಂತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದ್ಗಾಗೆ ಸಿರಾಜ್ ತಾನು ಖರೀದಿಸಿರುವ ಹೊಸ ಕಾರಿನ ವಿಡಿಯೋ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications