ಪೌರಾಣಿಕ-ವೈಜ್ಞಾನಿಕ ವೆಬ್ ಸೀರೀಸ್ ನಿರ್ಮಿಸಲಿದ್ದಾರೆ ಎಂಎಸ್ ಧೋನಿ

ನವದೆಹಲಿ: ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಪೌರಾಣಿಕ-ವೈಜ್ಞಾನಿಕ ವೆಬ್ ಸೀರೀಸ್ ಒಂದನ್ನು ನಿರ್ಮಿಸುವುದರಲ್ಲಿದ್ದಾರೆ. ಧೋನಿ ನಿವೃತ್ತಿ ಬಳಿಕ ಅವರ ಹೆಸರಿನಲ್ಲಿರುವ 'ಧೋನಿ ಎಂಟರ್‌ಟೇನ್‌ಮೆಂಟ್' ಹೆಸರಿನ ಮನರಂಜನಾ ಸಂಸ್ಥೆಯಲ್ಲಿ ವೆಬ್ ಸೀರೀಸ್ ನಿರ್ಮಾಣವಾಗಲಿದೆ.
ಎರಡು ಬಾರಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ನಾಯಕ ಧೋನಿ ಕಳೆದ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಧೋನಿ ಹೆಸರಿನಲ್ಲಿ ಈಗಾಗಲೇ ಎಂಟರ್‌ಟೇನ್ಮೆಂಟ್ ಸಂಸ್ಥೆಯಿದೆ. 2019ರಲ್ಲಿ ಈ ಸಂಸ್ಥೆಯ ಮೂಲಕ ಧೋನಿ ಅವರು 'ರೋರ್ ಆಫ್ ದ ಲಯನ್' ಎನ್ನುವ ಡಾಕ್ಯುಮೆಂಟ್ ಸರಣಿ ಹೊರ ತಂದಿದ್ದರು.
'ರೋರ್ ಆಫ್ ದ ಲಯನ್' ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು ಕಬೀರ್ ಖಾನ್. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿಷೇಧಿಸಲ್ಪಟ್ಟಿತ್ತು. ಆ ಬಳಿಕ ಧೋನಿ ನಾಯಕತ್ವದ ಸಿಎಸ್‌ಕೆ ಮತ್ತೆ ಐಪಿಎಲ್‌ಗೆ ಕಮ್‌ಬ್ಯಾಕ್ ಮಾಡಿತ್ತು. ಇದೇ ಚಿತ್ರಣ 'ರೋರ್ ಆಫ್ ದ ಲಯನ್'ನಲ್ಲಿತ್ತು.
ಧೋನಿ ಎಂಟರ್‌ಟೇನ್ಮೆಂಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ (ವ್ಯವಸ್ಥಾಪಕ ನಿರ್ದೇಶಕಿ) ಜವಾಬ್ದಾರಿಯನ್ನು ಧೋನಿ ಪತ್ನಿ ಸಾಕ್ಷಿ ಧೋನಿ ವಹಿಸಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅಭಿನಯದ 'ಎಂಎಸ್ ಧೋನಿ-ಅನ್‌ಟೋಲ್ಡ್ ಸ್ಟೋರಿಯಲ್ಲಿ ಸಹ ನಿರ್ಮಾಪಕ ಸೂರಜ್ ಸಿಂಗ್ ಕೂಡ ಧೋನಿ ಎಂಟರ್‌ಟೇನ್ಮೆಂಟ್ ತಂಡದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications