ಕೋಚ್ ಎನ್ ಸಿ ಅಯ್ಯಪ್ಪ ನಟಿ ಅನು ಮದುವೆ ದಿನಾಂಕ ನಿಗದಿ


ಬಿಗ್ ಬಾಸ್ ಸೀಸನ್-3 ಖ್ಯಾತಿಯ ಕ್ರಿಕೆಟರ್, ಹಾಲಿ ಕರ್ನಾಟಕ ಅಂಡರ್ 23 ತಂಡದ ಕೋಚ್ ಎನ್.ಸಿ ಅಯ್ಯಪ್ಪ ಹಾಗೂ ಅವರ ಗೆಳತಿ, ಪ್ರೇಯಸಿ ನಟಿ ಅನು ಪೂವಮ್ಮ ಅವರ ಮದುವೆ ದಿನಾಂಕ ನಿಗದಿಯಾಗಿದೆ.
ಅಯ್ಯಪ್ಪ ಮತ್ತು ಅನು ಪೂವಮ್ಮ ಅವರ ಮದುವೆ ಕಾರ್ಯವು ಜನವರಿ 19 ಮತ್ತು 20ರಂದು ನಡೆಸಲು ಕುಟುಂಬಸ್ಥರು ನಿಶ್ಚಯ ಮಾಡಿದ್ದಾರೆ. ಕರ್ವ ಚಿತ್ರ ಖ್ಯಾತಿಯ ನಟಿ ಅನು ಪೂವಮ್ಮ ಮೂಲತಃ ಕೊಡಗಿನರಾಗಿದ್ದು, ಕೊಡವ ಸಂಪ್ರದಾಯದಂತೆ ಮದುವೆ ನೆರವೇರಲಿದೆ.
ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ
ಅಯ್ಯಪ್ಪ ಮತ್ತು ಅನು ಪೂವಮ್ಮ ಅವರ ಮದುವೆ ನಿಶ್ಚಿತಾರ್ಥವು ಮೇ ತಿಂಗಳಿನಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಸಂಪ್ರದಾಯಬದ್ಧವಾಗಿ ನೇರವೇರಿತ್ತು.
2016ರಲ್ಲಿ ಅಯ್ಯಪ್ಪ ಮತ್ತು ಅನು ಇಬ್ಬರು ಭೇಟಿಯಾಗಿದ್ದು, ಪರಿಚಯವಾಗಿ ಸ್ನೇಹವಾಗಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಈ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದರು. ಎರಡು ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.
ಅನು ಪೂವಮ್ಮ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈಗ ಅವರು ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಯ್ಯಪ್ಪ ಬಿಗ್‍ಬಾಸ್ ಸೀಸಸ್ 3 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕರ್ನಾಟಕ ರಣಜಿ ತಂಡದಲ್ಲಿ ಆಡಿ, ಈಗ ಕೋಚ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications