Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿಧಿ ಅಗರ್ವಾಲ್ ಜೊತೆಗಿನ ಸಂಬಂಧ ಬಾಯ್ಬಿಟ್ಟ ಕೆಎಲ್ ರಾಹುಲ್

Cricketer Rahul denies dating Nidhhi Agerwal

ಬೆಂಗಳೂರು, ಜೂ. 23: ಟೀಮ್ ಇಂಡಿಯಾ ಯುವ ಆಟಗಾರ ಕೆಎಲ್ ರಾಹುಲ್ ಮತ್ತು ನಟಿ ನಿಧಿ ಅಗರ್ವಾಲ್ ನಡುವಿನ ಸಂಬಂಧದ ಬಗ್ಗೆ ರಾಹುಲ್ ಬಾಯ್ಬಿಟ್ಟಿದ್ದಾರೆ. ನಾವಿಬ್ಬರೂ ಸ್ನೇಹ ಸಂಬಂಧಿಗಳೇ ಹೊರತು ಪ್ರೇಮಿಗಳಲ್ಲ. ನಾವಿಬ್ಬರೂ ಡೇಟಿಂಗೂ ಮಾಡ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಹುಲ್ ಮತ್ತು ನಿಧಿ ಅಗರ್ವಾಲ್ ನಡುವೆ ಪ್ರೇಮ ಶುರುವಾಗಿದೆ. ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದೆಲ್ಲ ಕೇಳಿಬಂದಿದ್ದ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್, ಅಂಥದ್ದೇನಿಲ್ಲ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ರಾಹುಲ್ ಮತ್ತು 'ಮುನ್ನಾ ಮೈಕಲ್' ಬಾಲಿವುಡ್ ಚಿತ್ರದ ನಟಿ ನಿಧಿ ಅಗರ್ವಾಲ್ ಇಬ್ಬರೂ ಮುಂಬೈಯ ಬಾಂದ್ರಾದಲ್ಲಿನ ಹೋಟೆಲೊಂದರಿಂದ ಹೊರಬರುತ್ತಿದ್ದಾಗ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದರು. ಆ ಸಂದರ್ಭ ಫೋಟೋಗ್ರಾಫರ್ ಒಬ್ಬರು ಇಬ್ಬರ ಫೋಟೋವನ್ನೂ ಕ್ಲಿಕ್ಕಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡಿದ್ದವು. ಆ ಬಳಿಕ ಇಬ್ಬರ ಬಗ್ಗೆಯೂ ಗುಸುಗುಸುಗಳೂ ಶುರುವಾಗಿದ್ದವು.

ಈ ಬಗ್ಗೆ ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮ 'ಓಪನ್ ಹೌಸ್ ವಿತ್ ರೆನಿಲ್'ನಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನಾನು ಮತ್ತು ನಿಧಿ ಕಾಲೇಜ್ ದಿನಗಳಿಂದಲೂ ಸ್ನೇಹಿತರು. ನಾವು ಉತ್ತಮ ಸ್ನೇಹಿತರಷ್ಟೇ. ನಮ್ಮಿಬ್ಬರ ಕುರಿತು ಕೇಳಿ ಬಂದಿರುವ ಮಾತುಗಳೆಲ್ಲಾ ಸುಳ್ಳು' ಎಂದಿದ್ದಾರೆ.

'ನಿಧಿ ಮತ್ತು ನಾನು ಹಲವು ವರ್ಷಗಳಿಂದ ಪರಿಚಯವಿದ್ದ ಕಾರಣ ಹೋಟೆಲ್ ನಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಆತ್ಮೀಯವಾಗಿ ಮಾತನಾಡಿದ್ದೆವು. ಆದರೆ ಅದನ್ನೇ ಎಲ್ಲರೂ ತಪ್ಪಾಗಿ ಭಾವಿಸಿದ್ದಾರಷ್ಟೇ' ಎಂದು ರಾಹುಲ್ ತಿಳಿಸಿದ್ದಾರೆ.

ಜೊತೆಗೆ ಕೊಹ್ಲಿ-ಅನುಷ್ಕಾ ಬಗ್ಗೆ ಮಾತನಾಡಿದ ರಾಹುಲ್, 'ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ ನಾನು ಕಳಪೆ ಪ್ರದರ್ಶನ ನೀಡಿದ್ದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಇದನ್ನರಿತ ಕೊಹ್ಲಿ-ಅನುಷ್ಕಾ ನನ್ನನ್ನು ಡಿನ್ನರ್ ಗೆ ನೆಪದಲ್ಲಿ ಕರೆದು ಧೈರ್ಯ ಹೇಳಿದರು, ಸ್ಫೂರ್ತಿ ತುಂಬಿದರು' ಎಂದರು.

Story first published: Saturday, June 23, 2018, 2:56 [IST]
Other articles published on Jun 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+