For Quick Alerts
ALLOW NOTIFICATIONS  
For Daily Alerts
 

ಜೂನ್‌ 8 ರಂದು ರಿಂಕು ಸಿಂಗ್‌, ಪ್ರಿಯಾ ಸರೋಜ್ ನಿಶ್ಚಿತಾರ್ಥ

ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್ ರೈಡರ್ಸ್‌ 18ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತದಲ್ಲೇ ಹೊರ ನಡೆದಿದೆ. ಈ ವೇಳೆ ಹಲವು ಆಟಗಾರರು ತಮ್ಮ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ರಿಂಕು ಸಿಂಗ್. ಈ ಆವೃತ್ತಿಯಲ್ಲಿ ರಿಂಕು ಸಿಂಗ್ ಸ್ಪೋಟಕ ಆಟವನ್ನು ಆಡುವಲ್ಲಿ ವಿಫಲರಾಗಿದ್ದಾರೆ. ಆದರೂ ಸಹ ಈಗ ಅವರು ಸುದ್ದಿಯಲ್ಲಿದ್ದಾರೆ. ಹಾಗಿದ್ದರೆ ಅದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ರಿಂಕು ಸಿಂಗ್‌ ಬಹಳ ಚರ್ಚೆಯಲ್ಲಿದ್ದರು. ಆದರೆ ಈ ಬಾರಿ ಅವರು ತಮ್ಮ ಬ್ಯಾಟಿಂಗ್‌ನಿಂದ ಸುದ್ದಿಯಲ್ಲಿ ಇರಲಿಲ್ಲ. ಬದಲಿಗೆ ರಿಂಕು ತಮ್ಮ ಸಂಬಂಧದ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದರು. ರಿಂಕು ಸಿಂಗ್‌ ವಿವಾಹವಾಗುವ ಸುದ್ದಿಗಳು ಬಹಳ ಚರ್ಚೆಗೆ ಗ್ರಾಸವಾಗಿದ್ದವು. ಈಗ ಇದೇ ಸುದ್ದಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ರಿಂಕು ಸಿಂಗ್‌ ಜೂನ್‌ 8 ರಂದು ಸಂಸದೆ ಪ್ರಿಯಾ ಸರೋಜ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳಲಿದ್ದಾರೆ. ಪ್ರಿಯಾ ಸರೋಜ್‌ ಅವರು ಸಮಾಜವಾದಿ ಪಕ್ಷದಿಂದ ಮಚ್ಲಿಶಹರ್‌ನ ಸಂಸದೆ.

Cricketer Rinku Singh to Reportedly Get Engaged to MP Priya Saroj on June 8th

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಂಕು ಸಿಂಗ್ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ಲಕ್ನೋದಲ್ಲಿ ನಡೆಯಲಿದೆ. ಅಂದಹಾಗೆ ರಿಂಕು ಸಿಂಗ್‌ ಅವರ ನಿಶ್ಚಿತಾರ್ಥ ಲಕ್ನೋದಲ್ಲಿ ನಡೆಯಲಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಲಕ್ನೋನ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಮಾರಂಭದಲ್ಲಿ ಪ್ರಿಯಾ ಸರೋಜಾ ಹಾಗೂ ರಿಂಕು ಸಿಂಗ್ ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು, ಸಮಾಜವಾದಿ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಇಬ್ಬರು ಖ್ಯಾತ ನಾಮರ ಮದುವೆ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಪದ್ಧತಿಯಿಂದ ಮಾಡಲು ನಿರ್ಧರಿಸಲಾಗಿದೆ. ಇವರ ವಿವಾಹ ಕಾರ್ಯಕ್ರಮವನ್ನು ನವೆಂಬರ್‌ನಲ್ಲಿ ವಾರಣಾಸಿಯಲ್ಲಿ ಆಯೋಜಿಸಲಾಗುವುದು ಎಂದು ವರದಿಯಾಗಿದೆ. ಇವರಿಬ್ಬರ ಮದುವೆ ಸಮಾರಂಭ ನವೆಂಬರ್‌ 18 ರಂದು ವಾರಣಾಸಿಯ ತಾಜ್‌ ಹೋಟೆಲ್‌ನಲ್ಲಿ ನಡೆಯಲಿದೆ.

Cricketer Rinku Singh to Reportedly Get Engaged to MP Priya Saroj on June 8th

ಪ್ರಿಯಾ ಸರೋಜ್ ಯಾರು?

ಪ್ರಿಯಾ ಸರೋಜ್ ಅವರು 2024ರ ಚುನಾವಣೆಯಲ್ಲಿ ಮಚ್ಲಿಶಹರ್‌ ಕ್ಷೇತ್ರದಿಂದ ಸಂಸದೆ ಆಗಿದ್ದಾರೆ. ಇವರಿಗೆ 26 ವರ್ಷ. ಇವರು ಈ ಚುನಾವಣೆಯಲ್ಲಿ ತಮ್ಮ ಪ್ರತಿ ಸ್ಪರ್ಧಿ ಬಿಜೆಪಿಯ ಬಿಪಿ ಸರೋಜ್ ಅವರನ್ನು 35850 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆದರು.

ರಿಂಕು ಸಾಧನೆ

ಈಗಾಗಲೇ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಪದಾರ್ಪಣೆ ಮಾಡಿರುವ ರಿಂಕು ಸಿಂಗ್‌, ಭವಿಷ್ಯದ ಆಟಗಾರ. ಇವರನ್ನು ಕಳೆದ ಬಾರಿ ಕೆಕೆಆರ್‌ 13 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ರಿಂಕು ಸಿಂಗ್‌ 2023ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸತತ ಐದು ಸಿಕ್ಸರ್ ಬಾರಿಸಿ ಸುದ್ದಿಯಾದರು. ಆದರೆ ಇವರು 18ನೇ ಆವೃತ್ತಿಯಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.

Story first published: Sunday, June 1, 2025, 14:49 [IST]
Other articles published on Jun 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+