Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಪ್ಪನಾಗಿ ಹೊಸ ಇನ್ನಿಂಗ್ಸ್‌ ಶುರು ಮಾಡಿದ ರೋಹಿತ್ ಶರ್ಮಾ

ಮುಂಬೈ, ಡಿಸೆಂಬರ್ 31: ಹಿಟ್‌ಮನ್‌ ಖ್ಯಾತಿಯ ಕ್ರಿಕೆಟಿಗ ರೋಹಿತ್ ಶರ್ಮಾ ಅಪ್ಪ ಆಗಿದ್ದಾರೆ. ರೋಹಿತ್ ಶರ್ಮಾ ರಿತಿಕಾ ದಂಪತಿಗೆ ಹೆಣ್ಣು ಮಗು ಆಗಿದೆ.

ರೋಹಿತ್‌ ಶರ್ಮಾ-ರಿತಿಕಾಗೆ ಹೆಣ್ಣು ಮಗು ಆಗಿರುವುದನ್ನು ಅವರ ಸಹೋದರಿ ಸೀಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸೀಮಾ ಸಲ್ಮಾನ್ ಸಹೋದರ ಸೋಹೆಲ್ ಖಾನ್ ಮಡದಿಯೂ ಆಗಿದ್ದಾರೆ.

Cricketer Rohit Sharma blessed with baby girl

ರೋಹಿತ್ ಶರ್ಮಾ, ತಂದೆ ಆಗುತ್ತಿರುವ ವಿಷಯವನ್ನು ಗುಟ್ಟಾಗಿ ಇರಿಸಿದ್ದರು. ಆದರೆ ಟೀಂ ಇಂಡಿಯಾ ಆಟಗಾರರು ಇತ್ತೀಚೆಗೆ ವಿಷಯವನ್ನು ಬಹಿರಂಗಪಡಿಸಿದ್ದರು.

ರಿತಿಕಾ ಮತ್ತು ಮಗು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಸಹ ಸಂತಸದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ಆಗಲಿ ಮಡದಿ ರಿತಿಕಾ ಆಗಲಿ ಈ ವರೆಗೆ ಮಗು ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಲ್ಲ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ. ತಂದೆಯಾದ ಖುಷಿಯಲ್ಲಿರುವ ರೋಹಿತ್ ಮುಂದಿನ ಟೆಸ್ಟ್‌ನಲ್ಲಿ ಆಡುವುದು ಅನುಮಾನ.

Story first published: Monday, December 31, 2018, 11:49 [IST]
Other articles published on Dec 31, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+