Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಬ್ಬಲ್ ಸೆಂಚುರಿ ತಾರೆ ರೋಹಿತ್ ಶರ್ಮ ಮದುವೆ

ಮುಂಬೈ, ಡಿ. 13: ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿರುವ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮ ಅವರು ತಮ್ಮ ಪ್ರೇಯಸಿ ರಿತಿಕಾ ಸಾಜ್‌ದೇ ಅವರ ಜೊತೆಗೆ ವಿವಾಹ ಬಂಧನದ ಹೊಸ ಇನ್ನಿಂಗ್ಸ್ ಗೆ ಕಾಲಿಡುತ್ತಿದ್ದಾರೆ.

ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರೋಹಿತ್ ಅವರು ಮುಂಬೈನ ಸ್ಟಾರ್ ಹೊಟೇಲ್‌ನಲ್ಲಿ ಹಮ್ಮಿಕೊಂಡಿರುವ ವೈಭವೋಪೇತ ವಿವಾಹ ಕಾರ್ಯಕ್ರಮದಲ್ಲಿ ರೋಹಿತ್ ರಿತಿಕಾರನ್ನು ವರಿಸಲಿದ್ದಾರೆ. ವಿವಾಹ ಸಮಾರಂಭದ ವೇಳೆ ಖ್ಯಾತ ಡಿಸೈನರ್ ರಾಘವೇಂದ್ರ ರಾಥೋಡ್ ಅವರು ವಿನ್ಯಾಸಗೊಳಿಸಿರುವ ಟ್ರೋಯ್ ಕೋಸ್ಟ ಸೂಟ್ ಅನ್ನು ರೋಹಿತ್ ಧರಿಸಲಿದ್ದಾರೆ.[ಹರ್ಭಜನ್-ಗೀತಾರನ್ನು ಹರಸಿದ ಮೋದಿ, ಧೋನಿ]

ಈ ವಿವಾಹ ಸಮಾರಂಭದಲ್ಲಿ ಕ್ರಿಕೆಟ್‌ನ ಖ್ಯಾತ ಆಟಗಾರರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ , ಹರ್ಭಜನ್‌ಸಿಂಗ್, ಸುರೇಶ್‌ರೈನಾ, ದಿನೇಶ್ ಕಾರ್ತಿಕ್, ಯುವರಾಜ್‌ಸಿಂಗ್, ನಟಿ ಹೇಜಲ್ ಕೀಚ್ ಸೇರಿದಂತೆ ಹಲವರು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿ ನಂತರ ಬಿಡುವು ಮಾಡಿಕೊಂಡಿರುವ ರೋಹಿತ್ ಅವರು ಸದ್ಯ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿಲ್ಲ. ಇತ್ತೀಚೆಗೆ ಉತ್ತರಪ್ರದೇಶದ ಕುಸ್ತಿ ತಂಡವನ್ನು ಖರೀದಿಸಿದ್ದಾರೆ. ಡಿ.13 ಎಲ್ಲಾ ರೀತಿಯಿಂದಲೂ ಪ್ರಶಸ್ತವಾದ ದಿನವಾದ್ದರಿಂದ ಈ ದಿನವನ್ನೇ ಆಯ್ಕೆ ಮಾಡಲಾಗಿದೆ.

ಮುಖೇಶ್ ಅಂಬಾನಿಯಿಂದ ಪಾರ್ಟಿ

ಮುಖೇಶ್ ಅಂಬಾನಿಯಿಂದ ಪಾರ್ಟಿ

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ರೋಹಿತ್ ಶರ್ಮ ಅವರ ಮದುವೆ ಅಂಗವಾಗಿ ನೀತಾ ಹಾಗೂ ಮುಖೇಶ್ ಅಂಬಾನಿ ಅವರು ದೊಡ್ಡ ಭೋಜನ ಕೂಟವನ್ನು ತಮ್ಮ ಅಲ್ಟಾಮೌಂಟ್ ನಿವಾಸದಲ್ಲಿ ಆಯೋಜಿಸಿದ್ದರು. ನವವಿವಾಹಿತ ಹರ್ಭಜನ್ ಸಿಂಗ್ ಹಾಗೂ ರೋಹಿತ್ ಶರ್ಮ ದಂಪತಿಗಳೇ ಆಕರ್ಷಣೆಯಾಗಿದ್ದರು.

ಟ್ರಾಯ್ ಕೋಸ್ಟಾಗೆ ಥ್ಯಾಂಕ್ಸ್ ಎಂದ ರೋಹಿತ್

ವಸ್ತ್ರ ವಿನ್ಯಾಸಕ ಟ್ರಾಯ್ ಕೋಸ್ಟಾಗೆ ಥ್ಯಾಂಕ್ಸ್ ಎಂದ ರೋಹಿತ್ ಶರ್ಮ

ಗೀತಾಗೆ ಮನೀಶ್ ಮಲ್ಹೋತ್ರಾ ವಸ್ತ್ರ ವಿನ್ಯಾಸ

ಹರ್ಭಜನ್ ಸಿಂಗ್ ಪತ್ನಿ ನಟಿ ಗೀತಾ ಬಸ್ರಾಗೆ ಮನೀಶ್ ಮಲ್ಹೋತ್ರಾ ವಸ್ತ್ರ ವಿನ್ಯಾಸ.

ಡಬ್ಬಲ್ ಧಮಾಕಾ ನವದಂಪತಿಗಳಿಗೆ ಸ್ವಾಗತ

ಅಂಬಾನಿ ಅವರ ಆಹ್ವಾನ ಪತ್ರಿಕೆ ಹಾಗೂ ನವದಂಪತಿಗಳಿಗೆ ಶುಭ ಹಾರೈಕೆ.

ತಾಜ್ ನಲ್ಲಿ ರೋಹಿತ್ ಮದುವೆ ಅರತಕ್ಷತೆ

ರಿತಿಕಾ ಅವರ ಸೋದರ ಕುನಾಲ್ ಅವರು ಸೈಂಟ್ ರಿಗೀಸ್ ನಲ್ಲಿ ಸೋಮವಾರ ಸಂಗೀತ್ ಸಮಾರಂಭ ಆಯೋಜಿಸಿದ್ದಾರೆ. ರಿತಿಕಾ ಅವರ ತಾಯಿ ಟೀನಾ ಹಾಗೂ ಬಾಬಿ ಸಜ್ದಾ ಅವರು ವಿವಾಹ ಆರತಕ್ಷತೆಯನ್ನು ತಾಜ್ ಲ್ಯಾಂಡ್ಸ್ ಎಂಡ್ ನಲ್ಲಿ ಆಯೋಜಿಸಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+