Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳಿಗೆ ಗಾಬರಿ ಬೇಡ ಕ್ರಿಕೆಟಿಗ ಸುರೇಶ್ ರೈನಾಗೆ ಏನೂ ಆಗಿಲ್ಲ

ಬೇಸರಗೊಂಡ ಸುರೇಶ್ ರೈನಾ..? | Oneindia Kannada
Cricketer Suresh Raina clarifies about accident news

ಬೆಂಗಳೂರು, ಫೆಬ್ರವರಿ 12: ಕೆಲವು ದಿನಗಳಿಂದಲೂ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರಿಗೆ ಕಾರು ಅಪಘಾತವಾಗಿದೆ ಅವರಿಗೆ ತೀವ್ರ ಗಾಯಗಳಾಗಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ವತಃ ರೈನಾ ಇಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕ್ರಿಕೆಟಿಗ ರೈನಾ, ನನಗೆ ಕಾರು ಅಪಘಾತ ಆಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು ಅದು ಸಂಪೂರ್ಣ ಸುಳ್ಳು ಎಂದಿದ್ದಾರೆ.

ದೇವರ ದಯದಿಂದ ನನಗೇನೂ ಆಗಿಲ್ಲ, ಆರಾಮವಾಗಿದ್ದೇನೆ, ಆದರೆ ಸುಳ್ಳು ಸುದ್ದಿ ಹರಡಿಸಿದ್ದ ಯೂಟ್ಯೂಬ್ ಚಾನೆಲ್‌ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ಮಾಡಲಾಗಿದೆ, ಈ ಸುದ್ದಿಗಳಿಂದ ನನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಬೇಸರವಾಗಿದೆ ಎಂದು ರೈನಾ ಹೇಳಿದ್ದಾರೆ.

ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ಕೆಲವು ಚಿತ್ರಗಳನ್ನು ತೋರಿಸಿ ರೈನಾ ಅವರ ಕಾರು ಅಪಘಾತವಾಗಿ ಅವರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿ ಮಾಡಿದ್ದವು, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಅಂತೂ ರೈನಾ ಅವರು ಮರಣಹೊಂದಿದ್ದಾರೆ ಎಂದು ಸಹ ಸುದ್ದಿ ಹರಿಬಿಡಲಾಗಿತ್ತು.

Story first published: Tuesday, February 12, 2019, 21:02 [IST]
Other articles published on Feb 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+