ಕ್ರಿಕೆಟ್ ವಲಯದಲ್ಲಿ ಸದ್ಯ ಭಾರತೀ ಚರ್ಚೆ ಆಗುತ್ತಿರುವ ಹೆಸರು ವೈಭವ್ ಸೂರ್ಯವಂಶಿ. ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಹೆಸರುವಾಸಿ ಮಾಡಿದ್ದಾರೆ. 18ನೇ ಆವೃತ್ತಿ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ, ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಈ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಪ್ರದರ್ಶನದ ಬಳಿಕ ಇವರು ಭಾರತ ಅಂಡರ್ 19 ತಂಡದ ಭಾಗವಾಗದರು. ಈ ವೇಳೆಯೂ ಇವರು ತಮ್ಮ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದರು. ಇವರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿದರು. ಆ ಬಳಿಕ ಇವರಿಗೆ ಬಿಹಾರ ಕ್ರಿಕೆಟ್ ತಂಡದ ಉಪನಾಯಕರಾಗಿ ಇವರಿಗೆ ಪ್ರಮೋಷನ್ ಸಿಕ್ಕಿತು. ಈ ಬಳಿಕ ಮತ್ತೊಂದು ದೊಡ್ಡ ಜವಾಬ್ದಾರಿ ಅವರ ಹೆಗಲೇರಿದೆ.

ಬಿಹಾರದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ವೈಭವ್ ದೊಡ್ಡ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಏರಿದೆ. ಈ ವೇಳೆ ಇವರು ಜನರಿಗೆ ವಿಶೇಷ ಮನವಿಯನ್ನು ಮಾಡಿದ್ದಾರೆ. ಬಿಹಾರ ಚುನಾವಣೆಯ ವೇಳೆ ಯುವಕರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ದೊಡ್ಡ ಹೆಜ್ಜೆ. ಜನರು ಮತ ಚಲಾಯಿಸುವಂತೆ ಮನವಿ ಮಾಡುತ್ತಿರುವ ಸೂರ್ಯವಂಶಿಯ ವೀಡಿಯೊವನ್ನು ಚುನಾವಣಾ ಆಯೋಗದ ಅಧಿಕೃತ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ.
ಚುನಾವಣಾ ಆಯೋಗವು ಹಂಚಿಕೊಂಡಿರುವ ವಿಡಿಯೋದಲ್ಲಿ ವೈಭವ್ ಮತದರಾರಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ. ನಿಮ್ಮಲ್ಲರಿಗೂ ನಮಸ್ಕಾರ. ನಾನು ಮೈದಾನಕ್ಕೆ ಇಳಿದಾಗಲೆಲ್ಲಾ ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಅದೇ ರೀತಿ ಪ್ರಜಾ ಪ್ರಭುತ್ವದ ಅಂಗಳದಲ್ಲಿ, ಜನರ ಪ್ರಮುಖ ಕೆಲಸ ಅಂದರೆ ಮತ ಚಲಾಯಿಸುವುದು. ಜಾಗೃತ ಪ್ರಜೇಗಳಾಗಿ, ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
2025ರಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳ 2 ಹಂತದಲ್ಲಿ ನಡೆಯಲಿವೆ. ಮೊದಲ ಹಂತದ ಮತದಾನ ನ.6 ರಂದು, ಎರಡನೇ ಹಂತದ ಮತದಾನ ನ.11 ರಂದು ನಡೆಯಲಿದೆ. ಖ್ಯಾತ ವ್ತಕ್ತಿಗಳನ್ನು ಬಳಸಿಕೊಂಡು ಚುನಾವಣಾ ಆಯೋಗವು ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಈ ಸಾಲಿಗೆ ವೈಭವ್ ಸೂರ್ಯವಂಶಿ ಸಹ ಸೇರಿದ್ದಾರೆ.