ಆಲ್‌ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ

ಚೆನ್ನೈ, ಜನವರಿ 28: ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಗಿ ಮಿಂಚಿರುವ ತಮಿಳುನಾಡು ಮೂಲದ ವಿಜಯ್ ಶಂಕರ್ ಅವರು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 30 ವರ್ಷ ವಯಸ್ಸಿನ ವಿಜಯ್ ಶಂಕರ್ ಅವರು ದಾಂಪತ್ಯದ ಇನ್ನಿಂಗ್ಸ್ ಶುರುವಾಗಿದೆ
ಐಪಿಎಲ್‌ನಲ್ಲಿ ಸನ್ ರೈಸರ್ಸ್ ತಂಡದ ಪರವಾಗಿ ವಿಜಯ್ ಶಂಕರ್ ಕಣಕ್ಕಿಳಿಯಲಿದ್ದಾರೆ. ಯುಎಇಯಲ್ಲಿ ನಡೆದ ಐಪಿಎಲ್ ಗೂ ಮುನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ವೈಶಾಲಿಯನ್ನು ವರಿಸಿದ್ದಾರೆ. ಮದುವೆಯ ಮೊದಲ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ತಮ್ಮ ತಂಡದ ಆಟಗಾರ ವಿಜಯ್ ಶಂಕರ್ ಮದುವೆ ಚಿತ್ರ ಹಂಚಿಕೊಂಡಿದೆ. ಹಿಂದು ಸಂಪ್ರದಾಯದ ಪ್ರಕಾರ ವಿಜಯ್ ಶಂಕರ್ ಹಾಗೂ ವೈಶಾಲಿ ವಿಶ್ವೇಶ್ವರನ್ ವಿವಾಹ ನೆರವೇರಿದೆ. ನೂತನ ದಂಪತಿಗೆ ಐಪಿಎಲ್ ಕ್ರಿಕೆಟರ್ಸ್ ಸೇರಿದಂತೆ ಸಾರ್ವಜನಿಕರಿಂದಲೂ ಶುಭಹಾರೈಕೆಗಳ ಮಹಾಪೂರ ಹರಿದು ಬಂದಿದೆ.
2018ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವಿಜಯ್ ಶಂಕರ್ 12 ಏಕದಿನ ಹಾಗೂ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಬಳಿಕ ತಂಡದಿಂದ ಸ್ಥಾನವನ್ನು ಕಳೆದುಕೊಂಡಿದ್ದರು.
ಐಪಿಎಲ್ ನಲ್ಲಿ ಒಟ್ಟು 40 ಪಂದ್ಯಗಳಿಂದ 654 ರನ್ ಹಾಗೂ 6 ವಿಕೆಟ್ ಗಳಿಸಿದ್ದಾರೆ. ಈ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶ ವಿಜಯ್ ಶಂಕರ್‌ಗೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications