ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಬಾಲಿವುಡ್ಗೆ ಎಂಟ್ರಿ? ಟ್ವಿಟ್ಟರ್‌ನಲ್ಲಿ ಪೋಸ್ಟರ್‌ ಬಿಡುಗಡೆ

Cricketer Virat kohli making Bollywood debut

ನವದೆಹಲಿ, ಸೆಪ್ಟೆಂಬರ್ 21: ಕ್ರಿಕೆಟ್ ಅಂಗಳದ ಸ್ಟಾರ್‌ ವಿರಾಟ್ ಕೊಹ್ಲಿ ಬಾಲಿವುಡ್‌ಗೂ ಪಾದಾರ್ಪಣೆ ಮಾಡಲಿದ್ದಾರಾ? ಹೀಗೊಂದು ಅನುಮಾನ ಹುಟ್ಟಿಸಿದೆ ವಿರಾಟ್ ಕೊಹ್ಲಿ ಹಾಕಿರುವ ಟ್ವಿಟ್ಟರ್ ಪೋಸ್ಟ್‌.

ಇಂದು ಮುಂಜಾನೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಹಾಕಿರುವ ವಿರಾಟ್ ಕೊಹ್ಲಿ, 10 ವರ್ಷಗಳ ನಂತರ ಮತ್ತೊಂದು ಪಾದರ್ಪಣೆ (ಡೆಬ್ಯೂಟ್‌) ಎಂದು ಕ್ಯಾಪ್ಷನ್‌ ನೀಡಿ ಪೋಸ್ಟರ್‌ ಒಂದನ್ನು ಹಾಕಿದ್ದಾರೆ.

ವಿರಾಟ್ ಕೊಹ್ಲಿ, ಮೀರಾಬಾಯಿ ಹೆಸರು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ವಿರಾಟ್ ಕೊಹ್ಲಿ, ಮೀರಾಬಾಯಿ ಹೆಸರು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು

'ಟ್ರೇಲರ್‌: ದಿ ಮೂವಿ' ಎಂದು ಪೋಸ್ಟರ್‌ ಮೇಲೆ ಬರೆದಿದ್ದು 'ಇನ್ಟ್ರಡ್ಯೂಸಿಂಗ್ ವಿರಾಟ್ ಕೊಹ್ಲಿ' (ಹೊಸ ಪರಿಚಯ ವಿರಾಟ್ ಕೊಹ್ಲಿ) ಎಂದು ಬರೆಯಲಾಗಿದೆ. ಇದರ ಪ್ರೊಡಕ್ಷನ್‌ ಅನ್ನು ಕೊಹ್ಲಿ ಅವರ ಸಂಸ್ಥೆ ವ್ರಾಂಗ್ (wrogn) ಪ್ರೊಡಕ್ಷನ್ ಮಾಡಲಿದೆ.

ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ 'ವೇಷಭೂಷಣ' ಚಾಲೆಂಜ್! ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ 'ವೇಷಭೂಷಣ' ಚಾಲೆಂಜ್!

ಪೋಸ್ಟರ್‌ನಲ್ಲಿ ವಿರಾಟ್ ಕೊಹ್ಲಿ ಹೀರೋ ಲುಕ್‌ನಲ್ಲಿ ಅಂತರದಲ್ಲಿ ತೇಲುತ್ತಿದ್ದಾರೆ. ಅವರ ಹಿಂದೆ ಕಾರುಗಳು ಗಾಳೆಯಲ್ಲಿ ತೇಲುತ್ತಿವೆ. ಭಾರಿ ಸ್ಫೋಟವೊಂದು ಆಗಿ ಬೆಂಕಿಯ ಹಿನ್ನೆಲೆಯಲ್ಲಿ ಸೂಪರ್‌ ಹಿರೋ ಲುಕ್‌ನಲ್ಲಿ ಕೋಹ್ಲಿ ಅದ್ಬುತವಾಗಿ ಕಾಣುತ್ತಿದ್ದಾರೆ.

Cricketer Virat kohli making Bollywood debut

ಟ್ವಿಟ್ಟರ್‌ ಪೋಸ್ಟ್‌ನಲ್ಲಿ ಕೊಹ್ಲಿ ಲಿಂಕ್ ಒಂದನ್ನು ನೀಡಿದ್ದು ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗನ್ ಹಿಡಿದು ಯಾರಿಗೋ ಗುರಿ ಹಿಡಿದ ಕೊಹ್ಲಿಯ ಚಿತ್ರವೊಂದಿದೆ ಜೊತೆಗೆ 28/09/2018 ಎಂಬ ದಿನಾಂಕ ಸಹ ಇದೆ. ಇದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಪತ್ರಕರ್ತನ ಪ್ರಶ್ನೆಗೆ ಕ್ಯಾಪ್ಟನ್ ಕೊಹ್ಲಿ ಗರಂ ಆಗಿದ್ದೇಕೆ? ಪತ್ರಕರ್ತನ ಪ್ರಶ್ನೆಗೆ ಕ್ಯಾಪ್ಟನ್ ಕೊಹ್ಲಿ ಗರಂ ಆಗಿದ್ದೇಕೆ?

ಪೋಸ್ಟರ್‌ ನೋಡಿದರೆ ಕೊಹ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡುವುದು ಖಚಿತ ಎನಿಸುತ್ತದೆ ಆದರೆ ಇದರ ಬಗ್ಗೆ ಈವರೆಗೆ ಕೊಹ್ಲಿ ಯಾವುದೇ ಪತ್ರಿಕಾ ಹೇಳಿಕೆಗಳನ್ನು ನೀಡಿಲ್ಲ. ಪೋಸ್ಟರ್‌ ನೋಡಿದ ಕೆಲವರು ಕೊಹ್ಲಿಯ ಬ್ರಾಂಡ್ ವ್ರಾಂಗ್‌ನ ಪ್ರಚಾರಕ್ಕಾಗಿ ಸಹ ಹೀಗೆ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ.

Story first published: Friday, September 21, 2018, 10:11 [IST]
Other articles published on Sep 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X