Shubman Gill: ಶುಭ್‌ಮನ್ ಗಿಲ್ ಸೇರಿದಂತೆ 4 ಕ್ರಿಕೆಟಿಗರಿಗೆ ಸಂಕಷ್ಟ, ಬಂಧನ ಸಾಧ್ಯತೆ
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಶುಭಮನ್ ಗಿಲ್, ಸಿಡ್ನಿ ಟೆಸ್ಟ್‌ನಲ್ಲಿ ಅಂಗಳಕ್ಕೆ ಇಳಿಯುವುದು ಕನ್ಫರ್ಮ್ ಆಗಿದೆ. ಇವರು ಮೈದಾನಕ್ಕೆ ಇಳಿಯುವ ಮುನ್ನವೇ ಟೆನ್ಷನ್ ಆರಂಭವಾಗಿದೆ. ಬಿಝಡ್ ಫೈನನ್ಷಿಯಲ್ ಸರ್ವಿಸ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುಜರಾತ್ ಟೈಟಾನ್ಸ್ ತಂಡದ ನಾಲ್ಕು ಆಟಗಾರರಿಗೆ ಸಮನ್ಸ್ ನೀಡಿದೆ. ನಾಲ್ಕು ಆಟಗಾರರಲ್ಲಿ ಶುಭಮನ್ ಗಿಲ್, ಸಾಯಿ ಸುದರ್ಶನ್, ಮೋಹಿತ್ ಶರ್ಮಾ, ರಾಹುಲ್ ತೆವಾಟಿಯಾಗೆ ಸಮನ್ಸ್ ಜಾರಿ ಮಾಡಲಾಗಿದೆ.
450 ಕೋಟಿ ರೂಪಾಯಿಗಳ ಚಿಟ್ ಫಂಡ್ ಹಗರಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹೂಡಿಕೆ ವಂಚಕ ಭೂಪೇಂದ್ರ ಸಿಂಗ್ ಅವರ ಜಾಡನ್ನು ಹಿಡಿದು ಹೊರಟ ಅಧಿಕಾರಿಗಳ ತಂಡ ವಿಚಾರಣೆಯನ್ನು ನಡೆಸಿತು. ತನಿಖೆಯ ವೇಳೆ ಈ ಪ್ರಕರಣದಲ್ಲಿರುವ ನಾಲ್ವರು ಆಟಗಾರರು ಹೆಸರುಗಳು ಬೆಳಕಿಗೆ ಬಂದಿದೆ. ಈ ಆಟಗಾರರು ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಿಲ್ಲ ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ. 450 ಕೋಟಿ ಚಿಟ್ ಫಂಡ್ ಹಗರಣದ ರೂಪಿಸಿದ ಆರೋಪವನ್ನು ಹೊತ್ತಿದ್ದ ಭೂಪೇಂದ್ರ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಏನಿದು ವಂಚನೆ?
ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಶುಭಮನ್ ಗಿಲ್ ಈ ಪೊಂಜಿ ವಂಚನೆ ಯೋಜನೆಯಲ್ಲಿ 1.95 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉಳಿದಂತೆ ಉಳಿದ ಮೂವರು ಕ್ರಿಕೆಟ್ ಆಟಗಾರರು ಶುಭಮನ್ ಗಿಲ್ ಅವರಿಗಿಂತ ಕಡಿಮೆ ಹಣವನ್ನು ಹೂಡಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ವಂಚನೆಯ ಕಿಂಗ್ ಪಿನ್ ಭೂಪೇಂದ್ರ ಸಿಂಗ್ ಅವರ ಖಾತೆಗಳನ್ನು ಮೆಂಟೆನ್ ಮಾಡುತ್ತಿದ್ದ ರುಶಿಕ್ ಮೆಹ್ತಾ ಅವರನ್ನು ಸಹ ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

'ಜಾಲಾ ಅನೌಪಚಾರಿಕ ಖಾತೆ ಪುಸ್ತಕವನ್ನು ನಿರ್ವಹಿಸುತ್ತಿದ್ದು, ಅದನ್ನು ಸಿಐಡಿ ಘಟಕ ವಹಿಸಿಕೊಂಡಿದೆ. ಈ ಪುಸ್ತಕದಲ್ಲಿ 52 ಕೋಟಿ ರೂಪಾಯಿಗಳ ವಹಿವಾಟು ಪತ್ತೆಯಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಸ್ಥೆತ ಜನರಿಗೆ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕೊಟ್ಟ ಭರವಸೆಯಂತೆ ಬಡ್ಡಿ ನೀಡುವುದಾಗಿ ಹೇಳಿ ವಂಚನೆ ಮಾಡಲಾಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಯಿತು. ಈ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಶುಭಮನ್ ಗಿಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅಲ್ಲದೆ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಹಿನ್ನೆಲೆ, ಇವರಿಗೆ ನಾಲ್ನನೇ ಟೆಸ್ಟ್ ತಂಡದಿಂದ ಕೈ ಬಿಡಲಾಗಿತ್ತು. ಈಗ ಇವರು ಐದನೇ ಟೆಸ್ಟ್ ಆಡಲು ಮೈದಾನಕ್ಕೆ ಇಳಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications