ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪೈಡರ್‌ಮ್ಯಾನ್ ಎಬಿಡಿಗೆ ಸಿಗಲಿ 360 ಡಿಗ್ರಿ ಸಕ್ಸಸ್!

cricketers wishes to ab de villiers

ಬೆಂಗಳೂರು, ಮೇ 24: ಕ್ರಿಕೆಟ್ ಜಗತ್ತಿನ ಅಸಾಮಾನ್ಯ ಆಟಗಾರ ಎಂದೇ ಬಣ್ಣಿಸಲಾಗಿರುವ ದಕ್ಷಿಣ ಆಫ್ರಿಕಾದ ಅದ್ಭುತ ಪ್ರತಿಭೆ ಎಬಿ ಡಿವಿಲಿಯರ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಡಿವಿಲಿಯರ್ಸ್ ಅವರದು ನಿವೃತ್ತಿಯಾಗುವ ವಯಸ್ಸಲ್ಲ. ಅವರು ಆಟ ಕೊಂಚವೂ ಕಳೆಗುಂದಿಲ್ಲ. ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಬೌಂಡರಿ ಬಳಿ ನಿಂತಲ್ಲೇ ಜಿಗಿದು ಕ್ಯಾಚ್ ಹಿಡಿದ ಸ್ಪೈಡರ್‌ಮ್ಯಾನ್‌ ಮತ್ತೆ ಹಸಿರು ಪೋಷಾಕು ಧರಿಸಿ ಆಡುವುದನ್ನು ನೋಡುವ ಅವಕಾಶ ಸಿಗಲಾರದು.

ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ 'ಏಂಜೆಲ್ ಆಫ್ ಕ್ರಿಕೆಟ್ಮಿಸ್ಟರ್ 360 ಎಬಿ ಡಿ ವಿಲಿಯರ್ಸ್ 'ಏಂಜೆಲ್ ಆಫ್ ಕ್ರಿಕೆಟ್

ಎಬಿಡಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗುತ್ತಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ಆಟ ಮುಂದುವರಿಸಲಿದ್ದಾರೆ ಎನ್ನುವುದು ಸಮಾಧಾನಕರ ಸಂಗತಿಯಾದರೂ, ವಿಶ್ವಕಪ್ ಹಿಡಿದು ಅಂಗಳದಿಂದ ನಿರ್ಗಮಿಸುವಂತಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ಅನೇಕರದ್ದು.

ರಿಕೆಟ್ ಲೋಕದ 'ಜಂಟಲ್ ಮನ್' ಎಬಿಡಿ ಬದುಕಿನ ಬಿಡಿ ಚಿತ್ರಗಳಿವು..ರಿಕೆಟ್ ಲೋಕದ 'ಜಂಟಲ್ ಮನ್' ಎಬಿಡಿ ಬದುಕಿನ ಬಿಡಿ ಚಿತ್ರಗಳಿವು..

ಆದರೆ, ಎಬಿಡಿ ಹಠಾತ್ ನಿರ್ಧಾರ ಕ್ರಿಕೆಟ್ ಪ್ರಿಯರನ್ನು ಮಾತ್ರವಲ್ಲ, ಅನೇಕ ಕ್ರಿಕೆಟಿಗರಲ್ಲಿ ಆಘಾತ ಮೂಡಿಸಿದೆ. ಎಬಿಡಿ ವಿದಾಯದ ಸುದ್ದಿ ಕೇಳಿದ ಕ್ರಿಕೆಟಿಗರ ಪ್ರತಿಕ್ರಿಯೆ ಇಲ್ಲಿದೆ...

ಬಲಿಪಶು ಆಗುವ ಮೊದಲು

ಎಬಿಡಿ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ತಮ್ಮ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಬೇಕು ಎನ್ನುವುದು ಮಹಾನ್ ವ್ಯಕ್ತಿಗಳಿಗೆ ತಿಳಿದಿರುತ್ತದೆ. ಕೆಟ್ಟ ಸಮಯ ಅಥವಾ ಹೊಟ್ಟೆಕಿಚ್ಚಿನ ಜನರಿಗೆ ಬಲಿಪಶುವಾಗಿ ಹೊರಡುವಂತಾಗುವ ಮೊದಲು ನೀವು ಏನು ಮಾಡುತ್ತಿದ್ದೀರೋ ಅದರ ಔನ್ನತ್ಯದಲ್ಲಿ ಇರುವಾಗಲೇ ಹೊರಡುವುದು ಸೂಕ್ತ ಎಂದು 'ದಿ ವಾಲ್‌' ರಾಹುಲ್ ದ್ರಾವಿಡ್, ಎಬಿಡಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

360 ಡಿಗ್ರಿ ಸಕ್ಸಸ್ ಸಿಗಲಿ

ಕ್ರೀಡಾಂಗಣದಲ್ಲಿನ ನಿಮ್ಮ ಆಟದಂತೆಯೇ ಮೈದಾನದಾಚೆಗೂ ನಿಮಗೆ 360 ಡಿಗ್ರಿ ಸಕ್ಸಸ್ ಸಿಗಲಿ. ನಿಮ್ಮನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತೇವೆ. ನನ್ನ ಶುಭ ಹಾರೈಕೆ ನಿಮಗೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾರೈಸಿದ್ದಾರೆ.

ಕ್ರಿಕೆಟ್ ಬಡವಾಗಲಿದೆ

ಜಗತ್ತಿನ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗನಿಗೆ ಅದ್ಭುತ ಕ್ರೀಡಾ ಬದುಕಿಗಾಗಿ ಶುಭಾಶಯಗಳು. ನೀವಿಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಬಡವಾಗಲಿದೆ. ಆದರೆ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ನಿಮ್ಮ ಆರಾಧನೆಯನ್ನು ಮುಂದುವರಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಕ್ರಿಕೆಟ್ ಉತ್ಕೃಷ್ಟಗೊಳಿಸಿದವರು

ಅದ್ಭುತ ಕ್ರಿಕೆಟ್ ಜೀವನ ನಡೆಸಿದ್ದಕ್ಕೆ ಎಬಿ ಡಿವಿಲಿಯರ್ಸ್ ನಿಮಗೆ ಶುಭಾಶಯಗಳು. ನಿಮ್ಮ ಸಾಮರ್ಥ್ಯ, ಹಾಜರಿ ಮತ್ತು ನಡತೆಯಿಂದ ಈ ಆಟವನ್ನು ಉತ್ಕೃಷ್ಟಗೊಳಿಸಿದ್ದೀರಿ. ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ನೀವು ಮಾದರಿ ವ್ಯಕ್ತಿಯಾಗುವುದು ಮುಂದುವರಿಯಲಿದೆ. ನಿವೃತ್ತಿ ನಂತರದ ಬದುಕಿಗೆ ಶುಭವಾಗಲಿ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್‌ನ ಫೆಡರರ್

ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಮಹೋನ್ನತ ಕ್ರೀಡಾಜೀವನ ನಡೆಸಿದ್ದಕ್ಕೆ ಶುಭಾಶಯಗಳು. ಕ್ರಿಕೆಟ್‌ನ ಫೆಡರರ್, ಈ ಗ್ರಹದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ. ನಿಮ್ಮ ಭವಿಷ್ಯದ ಬದುಕಿಗೆ ಶುಭ ಹಾರೈಕೆಗಳು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಆಘಾತಕಾರಿ ನಿರ್ಧಾರ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್ಸ್ ವಿದಾಯ ಹೇಳಲು ನಿರ್ಧರಿಸಿರುವುದನ್ನು ಕೇಳಿ ಆಘಾತವಾಗಿದೆ. ಆದರೆ ಇದು ಕೇವಲ ಬದುಕು. ಅವರಿಗೆ ವಿದಾಯ ಹೇಳಬೇಕು ಎಂದೆನಿಸಿದೆ. ಪಂದ್ಯ ಗೆಲ್ಲಿಸುವ ಅಚ್ಚರಿದಾಯಕ ಆಟಗಳಿಗಾಗಿ, ಕುಶಲ ನಾಯಕ ಮತ್ತು ವಿನಮ್ರತೆಯ ಮಹಾನ್ ಆಟಗಾರನಿಗೆ ಧನ್ಯವಾದಗಳು ಎಂದು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಹೇಳಿದ್ದಾರೆ.

ಹಲವು ನೆನಪುಗಳಿಗೆ ಧನ್ಯವಾದ

ಅನೇಕ ನೆನಪುಗಳಿಗೆ ಧನ್ಯವಾದಗಳು ಎಬಿ ಡಿವಿಲಿಯರ್ಸ್. ಬ್ಯಾಟಿಂಗ್ ಅಷ್ಟೊಂದು ಸುಲಭ ಎಂದು ಕಾಣುವಂತೆ ಮಾಡಿದ್ದಕ್ಕೆ, ಎಲ್ಲ ಹೊಸ ಬಗೆಯ ಆಟವನ್ನು ಸಾಧ್ಯವಾಗಿಸಿರುವುದಕ್ಕೆ ಧನ್ಯವಾದಗಳು. ಶ್ರೇಷ್ಠ ಆಟಕ್ಕಾಗಿ ಶುಭಾಶಯಗಳು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ತಂಡದ ಆಟಗಾರ ಮಯಂಕ್ ಅಗರ್ವಾಲ್ ಬೇಸರದಿಂದ ಹೇಳಿದ್ದಾರೆ.

ಬೆಂಗಳೂರಿಗೆ ಮರಳಬೇಕು

ಅನಿರೀಕ್ಷಿತ, ಆದರೆ ಈ ನಿರ್ಧಾರದ ಹಿಂದೆ ಸಾಕಷ್ಟು ಗಾಢವಾದ ಆಲೋಚನೆ ಮತ್ತು ಚಿಂತನೆ ಇರುತ್ತದೆ ಎಂಬ ಭರವಸೆ ನಮಗಿದೆ. ನೀವು 2019ರಲ್ಲಿ ಮತ್ತೆ ಬೆಂಗಳೂರಿಗೆ ಮರಳಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭ ಹಾರೈಸಿದೆ.

Story first published: Thursday, May 24, 2018, 15:14 [IST]
Other articles published on May 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X