ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ವೆಡ್ಸ್ ಆಶಿತಾ

ಬೆಂಗಳೂರು, ಜೂನ್ 06: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ತಮ್ಮ ಬಹುಕಾಲದ ಗೆಳತಿ ಆಶಿತಾ ಸೂದ್ ಅವರನ್ನು ಮಂಗಳವಾರ ಮದುವೆಯಾದರು.
ಎರಡೂ ಕುಟುಂಬ ಸದಸ್ಯರು ಮತ್ತು ವಧು-ವರರ ಆಪ್ತರು ಮಾತ್ರವೇ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ರಿಕೆಟಿಗ ಕೆ.ಎಲ್.ರಾಹುಲ್, ರೋನಿತ್ ಮೋರೆ, ಡೇವಿಡ್ ಮಥಾಯಿಸ್ ನವ ವಿವಾಹಿತರಿಗೆ ಶುಭಾಷಯ ಹೇಳಿದರು.

ಇಂದು (ಜೂನ್ 06) ಖಾಸಗಿ ಹೊಟೆಲ್ ಒಂದರಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ಖ್ಯಾತ ಕ್ರಿಕೆಟಿಗರು ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಆಶಿತಾ ಅವರು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿಯಾಗಿದ್ದ ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಮಯಾಂಕ್ ಕೂಡ ಲಂಡನ್‌ನಲ್ಲಿ ಆಶಿತಾಗೆ ಪ್ರೇಮ ನಿವೇದನೆ ಮಾಡಿದ್ದರು. ಫೆಬ್ರವರಿ ತಿಂಗಳಲ್ಲಿ ಅವರ ನಿಶ್ಚಿತಾರ್ಥ ಆಗಿತ್ತು.

ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಮಯಾಂಕ್ ಅಗರ್ವಾಲ್ ಅವರು ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. ಅವರು ಭಾರತ ಎ ತಂಡದ ಸದಸ್ಯರೂ ಆಗಿದ್ದಾರೆ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications