Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಲ್ ನಾಸರ್‌ ಜೊತೆಗಿನ ಕ್ರಿಸ್ಟಿಯಾನ ರೊನಾಲ್ಡೊ ಒಪ್ಪಂದ ಮುಕ್ತಾಯ: ಮುಂದಿನ ನಡೆ ಏನು?

ವಿಶ್ವದ ಸ್ಟಾರ್ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ. ಇವರು ಯಾವುದೇ ತಂಡದ ಪರ ಆಡಿದ್ರೂ ಅಭಿಮಾನಿಗಳ ಬೆಂಬಲಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಅಲ್-ನಾಸರ್‌ ಸೇರಿ ಸುದ್ದಿ ಮಾಡಿದ್ದರು. ಈಗ ರೊನಾಲ್ಡೊ ಮತ್ತೊಂದು ಕ್ಲಬ್‌ ಸೇರುವ ಸೂಚನೆ ನೀಡಿದ್ದಾರೆ. ಹಾಗಿದ್ದರೆ ಕ್ರಿಸ್ಟಿಯಾನೊ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಅವರು ಹೇಳಿದ್ದು ಏನು? ಎಂಬುದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಪ್ರೊ ಲೀಗ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಸ್ಥಿರ ಆಟವನ್ನು ಆಡಿದ ಅವರು ಒಂದು ಗೋಲನ್ನು ಸಹ ಬಾರಿಸಿದರು. ಅಲ್ ನಾಸರ್ 3-2 ಅಂತರದಿಂದ ಅಲ್-ಫತೇಹ್ ವಿರುದ್ಧ ಜಯ ಸಾಧಿಸಿತು. ಇವರು ಈ ಪಂದ್ಯ ಮುಕ್ತಾಯದ ಒಂದು ಗಂಟೆಯ ಅಂತರದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ. 40 ವರ್ಷದ ಕ್ರಿಸ್ಟಿಯಾನೋ ಮಾಡಿದ ಪೋಸ್ಟ್‌ನಲ್ಲಿ ಏನಿದೆ?

Cristiano Ronaldo Hints at Exit from Al-Nassr After Viral Post This Chapter is Closed

ಪೋರ್ಚಗಲ್‌ ದೇಶದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ಸೌದಿ ಕ್ಲಬ್ ಜೊತೆಗಿನ ತಮ್ಮ ಒಪ್ಪಂದ ಇದೇ ಜೂನ್‌ 30, 2025 ರಂದು ಮುಕ್ತಾಯವಾಗಲಿದೆ. ಅಭಿಮಾನಿಗಳು ಫುಟ್ಬಾಲ್ ಆಟಗಾರನ ಮುಂದಿನ ನಡೆ ಏನು ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳ್ತಾ ಇದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕ್ರಿಸ್ಟಿಯಾನೊ, "ಈ ಅಧ್ಯಾಯ ಮುಗಿದಿದೆ" ಎಂದು ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇವರ ಈ ಪೋಸ್ಟ್‌ನ ಅರ್ಥ ಇವರ ಪ್ರಯಾಣ ಸೌದಿ ಕ್ಲಬ್ ಜೊತೆಗಿನ ಒಪ್ಪಂದ ಕೊನೆಗೊಂಡಿದೆ ಎಂಬುದು ಕಾಣುತ್ತದೆ.

ರೊನಾಲ್ಡೊ ಸಾಧನೆ

ಕ್ರಿಸ್ಟಿಯಾನೊ ರೊನಾಲ್ಟೊ ತಮ್ಮ ಫುಟ್ಬಾಲ್ ವೃತ್ತಿ ಜೀವನದಲ್ಲಿ ಒಟ್ಟು 940 ಗೋಲುಗಳ ಹತ್ತಿರದಲ್ಲಿದ್ದಾರೆ. ಇವರು 1 ಸಾವಿರಗಳನ್ನು ಬಾರಿಸುವವರೆಗೂ ಫುಟ್ಬಾಲ್ ಆಡುವಾದಾಗಿ ತಿಳಿಸಿದ್ದರು. ಸೌದಿ ಕ್ಲಬ್ ನಿಂದ ಹೊರ ಬರುತ್ತಿದ್ದಂತೆ, ರೊನಾಲ್ಡೊ ಹತ್ತಿರ ಬೇರೆ ಯಾವುದೇ ಒಪ್ಪಂದವು ಇಲ್ಲದೇ ಇರುವ ಕಾರಣ, ಭವಿಷ್ಯದ ಬಗ್ಗೆ ಅನಿಶ್ಚಿತತೆ ಹುಟ್ಟಿದೆ. ಕ್ರಿಸ್ಟಿಯಾನೊ ಮುಂದೆ ಯಾವ ಕ್ಲಬ್‌ ಪರ ಆಡುತ್ತಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ.

Cristiano Ronaldo Hints at Exit from Al-Nassr After Viral Post This Chapter is Closed

ಮುಂದಿನ ನಡೆ ಏನು?

ವಿಶ್ವದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸೌದಿಯ ಅಲ್‌ ನಾಸರ್‌ ಕ್ಲಬ್‌ ಜೊತೆಗೆ ಜನೆವರಿ 2023 ರಲ್ಲಿ ಆರಂಭವಾಯಿತು. ಇವರು ಸೌದಿ ಕ್ಲಬ್‌ ಜೊತೆ ಕಾಣಿಸಿಕೊಳ್ಳುತ್ತಿದ್ದಂತೆ ಈ ಕ್ಲಬ್‌ ಜಾಗತಿಕ ಮನ್ನಣೆಯನ್ನು ತಂದುಕೊಂಟಿದೆ. ಇವರು ಅಲ್‌ ನಾಸರ್‌ ಕ್ಲಬ್‌ ಪರ 111 ಪಂದ್ಯಗಳಲ್ಲಿ 99 ಗೋಲು ಬಾರಿಸಿದ್ದಾರೆ. ಕ್ರಿಸ್ಟಿಯಾನೊ ಸೌದಿ ಲೀಗ್‌ನಲ್ಲಿ 25 ಗೋಲು ಬಾರಿಸಿದ್ದಾರೆ. ಕ್ರಿಸ್ಟಿಯಾನೊ ಉತ್ತರ ಅಮೆರಿಕಾದ ಕ್ಲಬ್‌ ಸೇರಬಹುದು. ಅಥವಾ ತಮ್ಮ ತವರು ದೇಶದ ಕ್ಲಬ್‌ ಜೊತೆ ಆಡಬಹುದು.

Story first published: Tuesday, May 27, 2025, 16:25 [IST]
Other articles published on May 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+