India vs New Zealand: 20 ವರ್ಷಗಳ 'ಜಿಂಕ್ಸ್' ನಿಂದ ಹೊರ ಬರುತ್ತಾ ಟೀಮ್ ಇಂಡಿಯಾ?
ಏಕದಿನ ವಿಶ್ವಕಪ್ 2023 ರಲ್ಲಿ, ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ತನ್ನ ಐದನೇ ಪಂದ್ಯವನ್ನು ಭಾನುವಾರ, ಅಕ್ಟೋಬರ್ 22 ರಂದು ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಡಲಿದೆ.
ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ಯಾವಾಗಲೂ ಟೀಂ ಇಂಡಿಯಾ ವಿರುದ್ಧ ಸೋತಿಲ್ಲ. 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತ ಕೊನೆಯ ಬಾರಿಗೆ ಪಂದ್ಯ ಗೆದ್ದಿತ್ತು. ಅಂದರೆ 20 ವರ್ಷಗಳಲ್ಲಿ ಏಕದಿನ ವಿಶ್ವಕಪ್ ನಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಈ ಪರಿಸ್ಥಿತಿಯಲ್ಲಿ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ದಾಖಲಿಸುವುದು ಸುಲಭವಲ್ಲ. ಗೆಲುವಿನ ಬೌಂಡರಿ ಬಾರಿಸಿರುವ ಉಭಯ ತಂಡಗಳು ಭರ್ಜರಿ ಫಾರ್ಮ್ ನಲ್ಲಿವೆ. ಇಂದಿನ ಪಂದ್ಯ ಗೆದ್ದವರ ನಡುವಿನ ಕಾದಾಟವಾಗಿದ್ದರಿಂದ ಮೊದಲ ಸೋಲನ್ನು ಯಾರು ಅಪ್ಪಿಕೊಳ್ಳುತ್ತಾರೆ ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ.
ಏಕದಿನ ವಿಶ್ವಕಪ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಒಟ್ಟು 9 ಪಂದ್ಯಗಳು ನಡೆದಿದ್ದು, ಇದರಲ್ಲಿ ನ್ಯೂಜಿಲೆಂಡ್ 5 ಮತ್ತು ಭಾರತ 3 ಗೆದ್ದಿದೆ. ಇದೇ ಸಮಯದಲ್ಲಿ, 1 ಪಂದ್ಯವು ಡ್ರಾ ಆಗಿದೆ. 1975ರಲ್ಲಿ ಏಕದಿನ ವಿಶ್ವಕಪ್ ನಲ್ಲಿ ಇಬ್ಬರ ನಡುವೆ ಮೊದಲ ಪಂದ್ಯ ನಡೆದಿತ್ತು. 2019 ರಲ್ಲಿ ನಡೆದ ವಿಶ್ವಕಪ್ ನಲ್ಲಿ ಇವರಿಬ್ಬರ ನಡುವಿನ ಕೊನೆಯ ಮುಖಾಮುಖಿಯಾಗಿದ್ದು, ಇದರಲ್ಲಿ ನ್ಯೂಜಿಲೆಂಡ್ ಜಯಗಳಿಸಿತ್ತು.
ಎರಡೂ ತಂಡಗಳು ಏಕದಿನದಲ್ಲಿ ಒಟ್ಟು 116 ಬಾರಿ ಮುಖಾಮುಖಿ
ಇದೇ ಸಮಯದಲ್ಲಿ, ಎರಡೂ ತಂಡಗಳು ಏಕದಿನದಲ್ಲಿ ಒಟ್ಟು 116 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ 58 ಮತ್ತು ನ್ಯೂಜಿಲೆಂಡ್ 50 ಪಂದ್ಯಗಳನ್ನು ಗೆದ್ದಿದೆ. ಆದರೆ 7 ಪಂದ್ಯಗಳು ರದ್ದಾಗಿದ್ದು, 1 ಟೈ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ 2023ರ ವಿಶ್ವಕಪ್ ನಲ್ಲಿ ಯಾವ ತಂಡ ಯಾರ ಮೇಲುಗೈ ಸಾಧಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇಲ್ಲಿಯವರೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಸೋತಿಲ್ಲ. ಎರಡೂ ತಂಡಗಳು 4-4 ಪಂದ್ಯಗಳನ್ನು ಆಡಿ, ಗೆದ್ದಿವೆ. ಹೀಗಿರುವಾಗ ಭಾನುವಾರ ನಡೆಯಲಿರುವ ಇಬ್ಬರ ನಡುವಿನ ಹಣಾಹಣಿಯಲ್ಲಿ ಒಂದು ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬೀಳುವುದು ಖಚಿತ.
ವಿಶ್ವಕಪ್ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಬಲಾಡ್ಯವಾಗಿದ್ದರೆ, ಟೀಮ್ ಇಂಡಿಯಾ ಸಂಘಟಿತ ಆಟದ ಮೂಲಕ ಎಲ್ಲರ ಮನಸ್ಸು ಕದ್ದಿದೆ. ಯಾವ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications