ವಿರಾಟ್ ವಿರುದ್ಧ ಉತ್ತಮ ಆರಂಭವನ್ನು ಪಡೆಯವುದು ಬಹಳ ಮುಖ್ಯ: ಹ್ಯಾಜಲ್‌ವುಡ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ತಂಡದ ಮುಂದಿರುವ ಸವಾಲನ್ನು ಹೇಳಿಕೊಂಡಿದ್ದಾರೆ. ಎದುರಾಳಿ ತಂಡದಲ್ಲಿ ವಿರಾಟ್ ಕೊಹ್ಲಿಯಂತಾ ಆಟಗಾರ ಇರುವಾಗ ತಂಡ ಉತ್ತಮ ಆರಂಭವನ್ನು ಪಡೆಯುವುದು ಬಹಳ ಮುಖ್ಯವಾಗುತ್ತದೆ ಎಂದು ಹ್ಯಾಜಲ್‌ವುಡ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ವಿರುದ್ಧ ಜೋಶ್ ಜ್ಯಾಜಲ್‌ವುಡ್ ಸಾಕಷ್ಟು ಯಶಸ್ಸು ಸಾಧಿಸಿದ ಬೌಲರ್ ಆಗಿದ್ದಾರೆ. ಇತ್ತೀಚೆಗಷ್ಟೇ ಅಂತ್ಯವಾದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಮೂರು ಬಾರಿಯೂ ಜೋಶ್ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿಹೊರನಡೆದಿದ್ದರು. ಈ ಸರಣಿಯನ್ನು ಭಾರತ 1-2 ಅಂತರದಿಂದ ಕಳೆದುಕೊಂಡಿತ್ತು.
ಏಕದಿನ ಸರಣಿಯಲ್ಲಿ ಕೊಹ್ಲಿ ವಿರುದ್ಧ ತೋರಿದ ಪ್ರದರ್ಶನವನ್ನು ಟೆಸ್ಟ್ ಸರಣಿಯಲ್ಲೂ ಮುಂದುವರಿಸುವ ವಿಶ್ವಾಸವನ್ನು ಹ್ಯಾಜಲ್‌ವುಡ್ ವ್ಯಕ್ತಪಡಿಸಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಆರಂಭಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಬವನ್ನು ಪಡೆಯುವುದು ಮುಖ್ಯವಾಗಿದೆ ಎಂದು ಆಸ್ಟ್ರೇಲಿಯಾ ಅರಿತುಕೊಂಡಿದೆ ಎಂಬುದನ್ನು ಹ್ಯಾಜಲ್‌ವುಡ್ ವಿವರಿಸಿದ್ದಾರೆ.
"ಏಕದಿನ ಸರಣಿಯಲ್ಲಿ ಆತನ ವಿರುದ್ಧ ಅದೃಷ್ಠ ನನ್ನ ಪಾಲಿಗೆ ಇತ್ತು. ಹಾಗಾಗಿ ಅದರ ಸಣ್ಣ ಪಾಲನ್ನು ನಾನು ಟೆಸ್ಟ್ ಸರಣಿಗೂ ಮುಂದುವರಿಸಲು ಬಯಸುತ್ತೇನೆ. ಇದೊಂದು ಹೊಸತಾದ ಆರಂಭ. ಅದರಲ್ಲೂ ಪಿಂಕ್ ಚೆಂಡಿನಲ್ಲಿ ಇದೊಂದು ಭಿನ್ನವಾದ ಕಥೆಯಾಗಿರಲಿದೆ" ಎಂದು ಹ್ಯಾಜಲ್‌ವುಡ್ ಹೇಳಿದ್ದಾರೆ.
ಇನ್ನು ಇಂದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳು ಫೀಲ್ಡ್‌ನಲ್ಲಿ ತುಂಬಾ ಕಾಲ ಇರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. 2018-19ರ ಸರಣಿಯಲ್ಲಿ ಆಸ್ಟ್ರೇಲಿಯಾ ಹಿನ್ನೆಡೆ ಕಾಣಲು ಇದು ಒಂದು ಕಾರಣವಾಗಿತ್ತು. ಆದರೆ ಈ ಬಾರಿ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸ್ಟೀವ್ ಸ್ಮಿತ್ ಇರುವುದು ಆಸಿಸ್ ಬ್ಯಾಟಿಂಗ್ ಪಡೆಗೆ ದೊಡ್ಡ ಬಲ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications