CSA T20 Challege: ವೇಗದ ಶತಕ ಚಚ್ಚಿದ 'ಬೇಬಿ ಎಬಿ' ಡೆವಾಲ್ಡ್ ಬ್ರೆವಿಸ್; ಸೀನಿಯರ್ ಎಬಿಡಿ ಮೆಚ್ಚುಗೆ

ದಕ್ಷಿಣ ಆಫ್ರಿಕಾ ಮತ್ತು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರು ಸೋಮವಾರ ನಡೆದ ಸಿಎಸ್‌ಎ ಟಿ20 ಚಾಲೆಂಜ್ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ 13 ಬೌಂಡರಿ ಮತ್ತು 13 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 162 ರನ್ ಸಿಡಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ದಂಗುಬಡಿಸಿದರು.
ಡೆವಾಲ್ಡ್ ಬ್ರೆವಿಸ್ ಅವರ ಭರ್ಜರಿ ಶತಕದಿಂದಾಗಿ ಟೈಟಾನ್ಸ್ ತಂಡ 20 ಓವರ್‌ಗಳಲ್ಲಿ 271 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ದಕ್ಷಿಣ ಆಫ್ರಿಕಾದ ಮಾಜಿ ಲೆಜೆಂಡ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಬೇಬಿ ಎಬಿ ಡೆವಾಲ್ಡ್ ಬ್ರೆವಿಸ್ ಅವರು ಜೀವಿತಾವಧಿಯ ಅತ್ಯುತ್ತಮ ಇನ್ನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಟ್ವಿಟರ್‌ನಲ್ಲಿ, "ಡೆವಾಲ್ಡ್ ಬ್ರೆವಿಸ್. ಹೆಚ್ಚು ಹೇಳುವ ಅಗತ್ಯವಿಲ್ಲ" ಎಂದು ಬರೆದಿದ್ದಾರೆ.
CSA ಟಿ20 ಚಾಲೆಂಜ್ ಪಂದ್ಯದಲ್ಲಿ 19 ವರ್ಷದ ಡೆವಾಲ್ಡ್ ಬ್ರೆವಿಸ್ ಜೆಬಿ ಮಾರ್ಕ್ಸ್ ಓವಲ್‌ನಲ್ಲಿ ITEC ನೈಟ್ಸ್ ವಿರುದ್ಧ ಟೈಟಾನ್ಸ್‌ಗಾಗಿ ಕೇವಲ 57 ಎಸೆತಗಳಲ್ಲಿ 162 ರನ್ ಗಳಿಸಿರುವುದು, ಇದು ಟಿ20ಯಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಡೆವಾಲ್ಡ್ ಬ್ರೆವಿಸ್ 18 ಎಸೆತಗಳಲ್ಲಿ 50 ರನ್‌ಗಳ ಗಡಿಯನ್ನು ತಲುಪಿದರೆ, ಕೇವಲ 35 ಎಸೆತಗಳಲ್ಲಿ 100ರ ಗಡಿ ತಲುಪಿದರು. 20ನೇ ಓವರ್‌ನಲ್ಲಿ ಔಟಾಗುವ ಮುನ್ನ 13 ಬೌಂಡರಿ ಹಾಗೂ 13 ಸಿಕ್ಸರ್‌ಗಳನ್ನು ಬಾರಿಸಿ ವೇಗದ ಶತಕ ಬಾರಿಸಿ ಬಿರುಗಾಳಿಯೆಬ್ಬಿಸಿದ್ದರು. ಟೈಟಾನ್ಸ್ ತಂಡದ 271/3 ಈ ಮೊತ್ತ CSA T20 ಚಾಲೆಂಜ್‌ನಲ್ಲಿ ಅತ್ಯಧಿಕ ತಂಡದ ಸ್ಕೋರ್ ಆಗಿದೆ.

ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಅವರನ್ನು ಮೆಗಾ ಹರಾಜಿನಲ್ಲಿ 3 ಕೋಟಿ ರೂ.ಗಳ ಭಾರಿ ಮೊತ್ತಕ್ಕೆ ಖರೀದಿ ಮಾಡಲಾಗಿತ್ತು. ಹದಿಹರೆಯದ ಆಟಗಾರ ಡೆವಾಲ್ಡ್ ಬ್ರೆವಿಸ್ ಫ್ರಾಂಚೈಸ್ ಲೀಗ್‌ನಲ್ಲಿ ಯಾವುದೇ ಪೂರ್ವ ಅನುಭವವಿಲ್ಲದದನ್ನು ಪರಿಗಣಿಸಿ ಇದು ದೊಡ್ಡ ಅಪಾಯ ಎಂದು ಆಶ್ಚರ್ಯಪಟ್ಟಿದ್ದರು.
ಐಪಿಎಲ್ 2022ರಲ್ಲಿ ಏಳು ಪಂದ್ಯಗಳಲ್ಲಿ ಡೆವಾಲ್ಡ್ ಬ್ರೆವಿಸ್ ಸ್ಟ್ರೈಕ್-ರೇಟ್ 142.48ನಲ್ಲಿ 161 ರನ್ ಗಳಿಸಿದರು. ತನ್ನದೇ ದೇಶದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರಂತೆ ತನ್ನ ಶಾಟ್-ಮೇಕಿಂಗ್ ಸಾಮರ್ಥ್ಯಗಳಿಗಾಗಿ ಸಾಮಾನ್ಯವಾಗಿ 'ಬೇಬಿ ಎಬಿ' ಎಂದು ವಿಖ್ಯಾತಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications