
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಾರಿಯ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೋಗಾಗಿ ಈವರೆಗೂ 13ನೇ ಆವೃತ್ತಿಯ ನಡೆಯಲಿದೆಯೋ ಇಲ್ಲವೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ ಒಂದು ಸಲಹೆಯನ್ನು ನೀಡಿತ್ತು. ಕೇವಲ ಭಾರತೀಯ ಆಟಗಾರರನ್ನು ಮಾತ್ರವೇ ಒಳಗೊಂಡ ಐಪಿಎಲ್ ನಡೆಸಲು ಅದು ಸಲಹೆ ನೀಡಿತ್ತು.
ರಾಜಸ್ತಾನ ರಾಯಲ್ಸ್ ಐಪಿಎಲ್ ಫ್ರಾಂಚೈಸಿ ನೀಡಿದ ಸಲಹೆಗೆ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಕಾರವನ್ನು ವ್ಯಕ್ತಪಡಿಸಿದೆ. ಭಾರತೀಯ ಆಟಗಾರರು ಮಾತ್ರವೇ ಆಡುವ ಐಪಿಎಲ್‌ನ ಸಲಹೆಯನ್ನು ನೇರವಾಗಿಯೇ ಅದು ತಿರಸ್ಕರಿಸಿದೆ.
ಕೇವಲ ಭಾರತೀಯ ಆಟಗಾರರನ್ನು ಒಳಗೊಂಡ ಐಪಿಎಲ್ ಮಾಡಲು ಉತ್ಸುಕನಾಗಿಲ್ಲ. ಕಾರಣ ಅದಾಗಲೇ ಸೈಯದ್ ಮುಷ್ತಾಕ್ ಅಲಿ ಟೂರ್ನಿ ದೇಶೀಯ ಟಿ20 ದೇಸಿ ಆಟಗಾರರನ್ನು ಒಳಗೊಂಡಿರುವ ಮಾದರಿಯ ಟೂರ್ನಿಯೇ ಆಗಿದೆ. ಇದರ ಜೊತೆಗೆ ಮತ್ತೊಂದು ಸ್ಥಳೀಯ ಟೂರ್ನಿಯ ಅವಶ್ಯಕತೆ ಇಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಹೇಳಿದೆ.
ಸದ್ಯ ಪರಿಸ್ಥಿತಿ ಬಹಳಷ್ಟು ವಿಷಮಗೊಂಡಿರುವುದರಿಂದ ಬಿಸಿಸಿಐ ಜೊತೆಗೆ ಸಿಎಸ್‌ಕೆ ಫ್ರಾಂಚೈಸಿ ಸಂಪರ್ಕದಲ್ಲಿಲ್ಲ ಎಂದು ಅದು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿಯನ್ನು ನೀಡಿದೆ. ಜೊತೆಗೆ ಈ ವರ್ಷಾಂತ್ಯದಲ್ಲಿ ಬಿಸಿಸಿಐ ಐಪಿಎಲ್ ಆಯೋಜನೆ ಮಾಡುವ ನಿರ್ಧಾರವನ್ನು ತೆಗದುಕೊಳ್ಳಬಹುದು ಎಂದು ಸಿಎಸ್‌ಕೆ ಆಶಾಭಾವನೆ ಹೊಂದಿದೆ.
ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ವಿಶ್ವಕಪ್ ಟೂರ್ನಿ ನಡೆಯದೆ ಇದ್ದಲ್ಲಿ ಐಪಿಎಲ್ ಆಯೋಜನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಕೊರೊನಾ ವೈರಸ್‌ನ ಸ್ಥಿತಿಗತಿಗಳನ್ನು ಅವಲಂಬಿಸಿದೆ ಎಂಬುದು ಗಮನಾರ್ಹ.